ಅಧಿಕಾರ ಹಸ್ತಾಂತರ ವಿಳಂಬ; ರಾಜ್ಯಪಾಲರಿಗೆ ಎಸ್.ಡಿ.ಪಿ.ಐ ಮನವಿ
ದಕ್ಷಿಣ ಕನ್ನಡ : ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಹಸ್ತಾಂತರ ವಿಳಂಬದ ಬಗ್ಗೆ ರಾಜ್ಯಪಾಲರು ಗಮನಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲೆ ಅಪಾರ ಜಿಲ್ಲಾಧಿಕಾರಿಯ ಮೂಲಕ ಎಸ್.ಡಿ.ಪಿ.ಐ ಮನವಿ ಮಾಡಿದ್ದಾರೆ. ರಾಜ್ಯದ ೨೪ ಜಿಲ್ಲೆಗಳ ೧೦೫ ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸಮಾರು ಎಂಟು ತಿಂಗಳು ಕಳೆದರೂ ಚುನಾವಣಾ ಯಿತ ಕೌನ್ಸಿಲರ ಅಧಿಕಾರ ಸ್ವೀಕಾರ ಮತ್ತು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ
ಜನರಿಗೆ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಹೊಳೆತ್ತುವಿಕೆ, ಮಳೆನೀರು ಹೋಗುವ ಚರಂಡಿಗಳು ಮತ್ತು ಹಲವಾರು ಮೂಲಭೂತ ಸೌಕರ್ಯಗಳು ನಡೆಯುತ್ತಿಲ್ಲ. ಕೆಲವು ರಾಜಕೀಯ ಪಕ್ಷದ ಪ್ರತಿನಿಧಿಗಳು ನ್ಯಾಯಾಲಯದಲ್ಲಿ ಮೀಸಲಾತಿ ಬಗ್ಗೆ ತಕರಾರು ಎತ್ತಿದ್ದಾರೆ ಈ ಕಾರಣದಿಂದಾಗಿ ಅಧಿಕಾರ ಹಸ್ತಾಂತರ ವಿಳಂಬವಾಗುತ್ತಿದೆ ಎಂದು ಹೇಳಿದರು.
ಈ ಸಂಬಂಧ ಬಾಕಿ ಇರುವ ದಾವೆಗಳನ್ನು ತ್ವರಿತ ನ್ಯಾಯಾಲಯದಲ್ಲಿ ವಿಲೇವಾರಿ ನಡೆಸಲು ವ್ಯವಸ್ಥೆ ಕಲ್ಪಿಸಬೇಕು ರಾಜ್ಯದ ಜನರ ಒಟ್ಟು ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಎಸ್.ಡಿ.ಪಿ.ಐ ಮಾಡುವ ಈ ಮನವಿ ಬಗ್ಗೆ ಗಮನಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಪಾರ ಜಿಲ್ಲಾಧಿಕಾರಿ ಯ ಮೂಲಕ ಘನವೆತ್ತ ಮಾನ್ಯ ರಾಜ್ಯಪಾಲರೊಡನೆ ವಿನಂತಿಸುತ್ತಿದ್ದೇವೆ ಎಂದು ಮನವಿಯನ್ನ ನೀಡಿದರು.
ನಿಯೋಗದಲ್ಲಿ ಜಿಲ್ಲಾ ಅಧ್ಯಕ್ಷ ಅಥವುಲ್ಲ ಜೋಕಟ್ಟೆ , ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ಬೆಳ್ತಂಗಡಿ,ಮುನೀಬ್ ಬೆಂಗರೆ, ನೌಶಾದ್ ಕಿನ್ಯ ಉಪಸ್ಥಿತರಿದ್ದರು