ಡಿ.25 ಪ್ರಕಾಶಾಭಿನಂದನ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ, ಪೂರ್ವಭಾವಿ ಸಭೆ

ಉಡುಪಿ – ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಡಿ.25ರಂದು ಮಂಗಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ನಡೆಯಲಿರುವ ಪ್ರಕಾಶಾಭಿನಂದನ ಕಾರ್ಯಕ್ರಮದಲ್ಲಿ ಸಲುವಾಗಿ ಬಂಟರ ಸಂಘ ಉಡುಪಿ ಆಶ್ರಯದಲ್ಲಿ ವಿವಿಧ ಸಮುದಾಯಗಳ ಸಹಭಾಗಿತ್ವದಲ್ಲಿ ಮಂಗಳವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಪೂರ್ವಭಾವಿ ಸಭೆ ನಡೆಯಿತು.

ಪ್ರಕಾಶಾಭಿನಂದನ ಸಮಿತಿ ಉಪಾಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಸಿದರು. ಸಿಎಸ್‌ಐ ಚರ್ಚ್‌ನ ಧರ್ಮಗುರು ಕಿಶೋರ್, ಜಿಲ್ಲಾ ಬಿಲ್ಡರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಜೆರಿ ವಿನ್ಸೆಂಟ್ ಡಯಾಸ್ , ಸಮಿತಿ ಜಿಲ್ಲಾ ಸಂಚಾಲಕ ಮನೋಹರ ಎಸ್. ಶೆಟ್ಟಿ, ಯುಬಿಎಂಸಿ ಚರ್ಚ್‌ನ ಧರ್ಮಗುರು ಸಂತೋಷ್ ಶುಭ ಹಾರೈಸಿದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ, ವಿಶ್ವನಾಥ ಶೆಣೈ, ವಿಶ್ವಕರ್ಮ ಒಕ್ಕೂಟ ಯೋಗೀಶ್ ಆಚಾರ್ಯ ಅಲೆವೂರು, ದೇವಾಡಿಗ ಸಮುದಾಯದ ರತ್ನಾಕರ ದೇವಾಡಿಗ, ಸಮಿತಿ ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ, ಕಾಪು ಲೀಲಾಧರ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ ಪಡುಬಿದ್ರಿ, ಅಮಿತ್ ಶೆಟ್ಟಿ, ಉದ್ಯಮಿ ಮೊಹಮ್ಮದ್ ಮೌಲಾ, ಯಾಸಿನ್ ಮಲ್ಪೆ, ನಾರಾಯಣ, ಭಾಸ್ಕರ್ ಉಪಸ್ಥಿತರಿದ್ದರು. ಸತೀಶ್ಚಂದ್ರ ಶೆಟ್ಟಿ ನಿರೂಪಿಸಿ, ಮೋಹನ ಶೆಟ್ಟಿ ಮೂಡನಿಡಂಬೂರು ವಂದಿಸಿದರು

Leave a Reply

Your email address will not be published. Required fields are marked *

error: Content is protected !!