ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಸಾವಿನಲ್ಲಿ ಸಂಶಯವಿದೆ: ನಡೂರು ದಿನಕರ್
ಉಡುಪಿ:(ಉಡುಪಿ ಟೈಮ್ಸ್ ವರದಿ) ಬಡಗುತಿಟ್ಟಿನ ಹೆಸರಾಂತ ಹಿರಿಯ ಭಾಗವತರಾದ ನಗರ ಸುಬ್ರಹ್ಮಣ್ಯ ಆಚಾರ್ ಅವರ ಸಾವಿನಲ್ಲಿ ಸಂಶಯವಿದ್ದು ಈ ಪ್ರಕರಣದ ಸೂಕ್ತ ತನಿಖೆಯಾಗಬೇಕೆಂದು ಅವರ ಅಭಿಮಾನಿ ಬಳಗ ಆಗ್ರಹಿಸಿದೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಭಾಗವತ ದಿ. ನಗರ ಸುಬ್ರಹ್ಮಣ್ಯ ಆಚಾರ್ ಅಭಿಮಾನಿ ಬಳಗದ ಕಾರ್ಯದರ್ಶಿ ನಡೂರು ದಿನಕರ್ ಮಾತನಾಡಿ, ಕಳೆದ ಜ.7 ರಂದು ಮಂಗಳೂರಿನ ಕದ್ರಿ ಠಾಣಾ ವ್ಯಾಪ್ತಿಯ ಕುಲಶೇಖರದ ಬಾಡಿಗೆ ಮನೆಯಲ್ಲಿದ್ದ ಸುಬ್ರಹ್ಮಣ್ಯ ಆಚಾರ್ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಾಪ್ಪಿದ್ದು, ಅವರು ಯಾರ ಜೊತೆ ಹೊಡೆದಾಟ ಮಾಡಿ ಸಾವನ್ನಾಪ್ಪಿರಬಹುದು ಅಥವಾ ಯಾರೋ ಅವರು ಸೇವಿಸಿದ ಮದ್ಯಪಾನಕ್ಕೆ ವಿಷಪ್ರಾಶನ ಮಾಡಿ ಕೊಲೆ ಮಾಡಿರುವ ಸಾಧ್ಯತೆಯಿರಬಹುದು ಎಂದು ಗಂಭೀರ ಆರೋಪ ಮಾಡಿದರು.
ಸುಬ್ರಹ್ಮಣ್ಯ ಆಚಾರ್ ಜ. 6 ರಂದು ರಾತ್ರಿ ಕೋಟದಲ್ಲಿ ಭಾಗವತಿಗೆ ಮಾಡಿದ್ದ ಇವರು ರಾತ್ರಿ ಒಂದು ಗಂಟೆ ತನಕ ನನ್ನ ಜೊತೆ ಇದ್ದರು . ಮುಂಜಾನೆ ಕಾರಿನಲ್ಲಿ ಮಂಗಳೂರಿಗೆ ಹೋಗಿದ್ದರು ಇವರು ಯಾವ ಕಾರಣಕ್ಕಾಗಿ ಸಾವನ್ನಾಪ್ಪಿದರು ಎಂದು ಅವರ ಅಭಿಮಾನಿ ಬಳಗ ಸಂಶಯದಲ್ಲಿದೆಂದು ನಡೂರು ಹೇಳಿದರು. ಸಸಿಹಿತ್ಲಲಿನ ಸಂತೋಷ ಕುಲಾಲ್ 8 ವರ್ಷದಿಂದ ಸುಬ್ರಹ್ಮಣ್ಯರ ಜೊತೆ ಅನ್ಯನೋನ್ಯದಿಂದ್ದು, ಯಾವುದೋ ವಿಚಾರಕ್ಕಾಗಿ ಒಂದು ತಿಂಗಳು ಸುಬ್ರಹ್ಮಣ್ಯರ ಜೊತೆ ಸಂತೋಷ್ ಯಾವುದೇ ಮಾತುಕತೆ ನಡೆಸಿರಲಿಲ್ಲ ಹಾಗೂ ಇವರ ಮೊಬೈಲ್ ನಂಬರ್ ಅನ್ನು ಕೂಡ ಸಂತೋಷ್ ಬ್ಲಾಕ್ ಮಾಡಿದ್ದರು. ಇದೇ ವಿಚಾರವನ್ನು ಕೇಳಲು ಹೋದ ಸುಬ್ರಹ್ಮಣ್ಯರು ಅಂದು ಸಂಶಯಾಸ್ಪದವಾಗಿ ಸಾವನ್ನಾಪ್ಪಿದ್ದಾರೆ. ಇವರ ಸಾವಿನಲ್ಲಿ ನಮಗೆ ಸಂಶಯವಿದ್ದು, ಈ ಪ್ರಕರಣವನ್ನು ಕೂಲಂಕುಷ ತನಿಖೆ ಮಾಡಬೇಕೆಂದು ಆಗ್ರಹಿಸಿ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ್ತು ಕದ್ರಿ ಠಾಣೆಗೆ ಮನವಿ ಮಾಡಿದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತನ್ನ ಹದಿನೆಂಟನೆ ವಯಸ್ಸಿನಲ್ಲಿ ಶ್ರೀಗೋಳಿಗರಡಿ ಮೇಳಕ್ಕೆ ಸಂಗೀತ ಭಾಗವತರಾಗಿ ಕಲಾ ಸೇವೆ ಆರಂಭಿಸಿದ ಸುಬ್ರಹ್ಮಣ್ಯ ಆಚಾರ್ ನಂತರ ಶ್ರೀಕ್ಷೇತ್ರ ಕಮಲಶಿಲೆ ಮೇಳ ಮತ್ತು ಶ್ರೀಕ್ಷೇತ್ರ ಮಂದಾರ್ತಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ ಆಚಾರ್ 900 ಕ್ಕೂ ಹೆಚ್ಚೂ ನಡುಮನೆ ಯಕ್ಷಗಾನ ಎಂಬ ಪ್ರಕಾರವನ್ನು ನಡೆಸಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ಇವರ ನಿಧನದಿಂದ ಮನೆಯ ಆಧಾರ ಸ್ತಂಭವೇ ಕುಸಿದಂತಾಗಿದೆ.
ಪತ್ನಿ ಹಾಗೂ ಇಬ್ಬರು ಮಕ್ಕಳು ಹೊಂದಿದ್ದ ಇವರ ಜೀವನ ನಿರ್ವಹಣೆಯೇ ಈಗ ಕಷ್ಟದಾಯಕವಾಗಿದ್ದು,ಆ ಕುಟುಂಬ ಮುಂದಿನ ಜೀವನ ನಿರ್ವಹಣೆಗಾಗಿ ಭಾಗವತ ದಿ. ನಗರ ಸುಬ್ರಹ್ಮಣ್ಯ ಆಚಾರ್ ಅಭಿಮಾನಿಗಳ ಬಳಗ ಸಂಸ್ಥೆ ಹುಟ್ಟು ಹಾಕಿ ಆ ಕುಟುಂಬಕ್ಕೆ ನಿಧಿ ಸಂಗ್ರಹಿಸಿ ನೀಡುವ ಉದ್ದೇಶ ಮಾಡಲಾಗಿದೆಂದು ಸಂಸ್ಥೆಯ ಅಧ್ಯಕ್ಷರಾದ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ಹೇಳಿದರು.
ಅವರ ಅಭಿಮಾನಿಗಳು ,ಯಕ್ಷಗಾನ ಕಲಾಪೋಷಕರು ನೀಡುವ ಹಣವನ್ನು ಕಾರ್ಪೋರೇಶನ್ ಬ್ಯಾಂಕ್ ಇಂದ್ರಾಳಿ ಶಾಖೆಯ “ಭಾಗವತ ದಿ. ನಗರ ಸುಬ್ರಹ್ಮಣ್ಯ ಆಚಾರ್ ಅಭಿಮಾನಿಗಳ ಬಳಗ” ಉಳಿತಾಯ ಖಾತೆ ನಂ.520101266351279 .IFSC Code. Corp 0003087, MICR Code 576017021 ನೀಡಬಹುದೆಂದು ತಿಳಿಸಿದರು. ದಾನಿಗಳು ಮೇ 31 ರ ಒಳಗೆ ತಮ್ಮ ಮೊತ್ತವನ್ನು ಬ್ಯಾಂಕ್ ಗೆ ಜಮೆ ಮಾಡಬಹುದು. ಈ ನಿಧಿಯಲ್ಲಿ ಸಂಗ್ರಹಿಸಿದ ಹಣವನ್ನು ಸುಬ್ರಹ್ಮಣ್ಯ ಆಚಾರ್ ಪತ್ನಿ ಸರಸ್ವತಿ ಮತ್ತು ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟು ರಶೀದಿ ಹಸ್ತಂತರಿಸಲಾಗುವುದೆಂದರು.