ಜಿಲ್ಲಾಧಿಕಾರಿ ರಾಜೀನಾಮೆ: ಅಂತರೀಕ ತನಿಖೆಗೆ ಸಿಎಂಗೆ ಮನವಿ

ಬಂಟ್ವಾಳ:  ದ.ಕ. ನಿರ್ಗಮನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್  ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಿ ಅಂತರೀಕ ತನಿಖೆ  ನಡೆಸುವಂತೆ ಬಿಜೆಪಿ ಮುಖಂಡ, ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.


ದ.ಕ.ಜಿಲ್ಲಾಧಿಕಾರಿಯವರಾಗಿದ್ದ  ಶಶಿಕಾಂತ್ ಸೆಂಥಿಲ್ ಅವರು ರಾಜೀನಾಮೆಯ ವೇಳೆ ನೀಡಿರುವ  ಹೇಳಿಕೆ ವಿಷಾದನೀಯ ಮತ್ತು  ಖಂಡನೀಯವಾಗಿದೆ ಎಂದರು.
ಜನರ ನಂಬಿಕೆಗಳಿಗೆ ಪಾತ್ರವಾಗಿರುವ ಹಾಗೂ ದೇಶದ ಅತ್ಯುನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಜಿಲ್ಲಾಧಿಕಾರಿ ದೇಶದ ಮತ್ತು ಕೇಂದ್ರ ಸರಕಾರದ
ನಿಯಮಾವಳಿ, ನೂತನ ಕಾನೂನು ಚೌಕಟ್ಟುಗಳ ಕುರಿತು ಸಾರ್ವತ್ರಿಕ ಪ್ರತಿಕ್ರಿಯೆ ನೀಡುತ್ತಿರುವುದು ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ಸಾರ್ವಜನಿಕ ವಲಯದಲ್ಲಿ
ಪರಿಗಣಿಸಲ್ಪಟ್ಟಿದೆ ಎಂದು ಪ್ರಭು ಮನವಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಅಡಿಯಲ್ಲಿ ಕೇಂದ್ರ ಲೋಕಾಸೇವಾ ಆಯೋಗದ ಮೂಲಕ ನಡೆಯುತ್ತಿರುವ ದೇಶದ ಅತ್ಯುನ್ನತ ಮತ್ತು ಪ್ರಾಮುಖ್ಯ ನಾಗರೀಕ ಸೇವಾ ಹುದ್ದೆಗಳಾದ ಐ.ಎ.ಎಸ್.,ಐ.ಪಿ.ಎಸ್ ನಂತಹ ಹುದ್ದೆಗಳಿಗೆ ನೇಮಕಾತಿ ಆಯ್ಕೆ ಮಾಡುವಲ್ಲಿ ಕೊನೆಯ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳೆಲ್ಲರ ಪೂರ್ವಪರ ಸಮಗ್ರವಾದ ಅಂತರೀಕ ತನಿಖೆ ಮಾಡುವ ಅಗತ್ಯವಿದ್ದು ಈ  ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.


ಕರಾವಳಿ ಭಾಗದ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳ ಪ್ರಜ್ಞಾವಂತ ನಾಗರಿಕರಿಗೆ ಜಿಲಾಧಿಕಾರಿಯವರ ರಾಜೀನಾಮೆ ವಿಚಾರದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವರೇ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ರವರ ರಾಜೀನಾಮೆಯನ್ನು ಅಂಗೀಕರಿಸುವುದರೊಂದಿಗೆ ಅವರನ್ನು ಅಂತರೀಕ ತನಿಖೆಗೆ ಒಳಪಡಿಸಿ ಆ ತನಿಖಾ ವರದಿಯನ್ನು ಶೀಘ್ರವಾಗಿ ಪ್ರಕಟಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!