ಸಂವಿಧಾನ ಉಳಿಸಲು ದಲಿತರು ರಾಜಕೀಯ ಶಕ್ತಿಯಾಗಬೇಕು : ಜಯನ್ ಮಲ್ಪೆ

ಉಡುಪಿ: ಒಂದು ವರ್ಗವು ಸಂವಿಧಾನದ ಮೇಲೆ ದಬ್ಬಾಳಿಕೆ ಮಾಡಲು ಅವರ ಕೈಯಲ್ಲಿರುವ ಅಧಿಕಾರವೇ ಕಾರಣ.ಅವರ ಅಧಿಕಾರವನ್ನು ನಾಶಮಾಡಲು ದಲಿತರು ರಾಜಕೀಯ ಶಕ್ತಿಯಾಗಿ ಅಧಿಕಾರ ಪಡೆಯಬೇಕು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಇಂದು ಉಡುಪಿಯ ಶ್ರೀಸಾಯಿ ಸಭಾಂಗಣದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್‌ರವರ 63 ನೇ ಪರಿನಿರ್ವಾಣ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ,
ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಸೋಲಿಸಿ,ನಮ್ಮ ದೇಶವನ್ನು ಜಗತ್ತಿನಲ್ಲೆ ಅತ್ಯಂತ ಬಡ ಭಿಕ್ಷುಕ ದೇಶವನ್ನಾಗಿ ಮಾಡಿದ್ದಾರೆ.ಈ ನಾಡನ್ನು ರಾಜ್ಯಾಂಗದ ಆಶಯಗಳಂತೆ ಸುಖೀರಾಜ್ಯವನ್ನಾಗಿ ಪರಿವರ್ತಿಸಬೇಕಾದರೆ ದಲಿತರು ತಮ್ಮ ಸ್ವಂತ ಶಕ್ತಿಯಿಂದ ದೇಶದ ರಾಜ್ಯಾಧಿಕಾರವನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಸಂವಿಧಾನದ ಅನುಚ್ಛೇದದ ಪ್ರಕಾರ ಇಲ್ಲಿನ ಅಲ್ಪಸಂಖ್ಯಾತರಿಗೆ ಧಾರ್ಮಿಕವಾಗಿ ಮತ್ತು ಸಮಾಜಿಕವಾಗಿ ಎಲ್ಲಾ ಹಕ್ಕುಗಳನ್ನು ನೀಡಿದೆ.ಆದರೆ ಅಂಬೇಡ್ಕರ್‌ಗೆ ಅಪಮಾನಮಾಡಿದಾಗ ಹಾಗೂ ಸಂವಿಧಾನಕ್ಕೆ ಅಗೌರವತೋರಿದಾಗ ಇಲ್ಲಿನ ಅಲ್ಪಸಂಖ್ಯಾತರಾರೂ ಖಂಡಿಸುದಾಗಲಿ,ಪ್ರತಿಭಟಿಸುದಾಗಲಿ ಮಾಡುತ್ತಿಲ್ಲ.ಓಲೈಕೆಯ ನಾಯಕರು ದಲಿತ,ಹಿಂದುಳಿದ,ಅಲ್ಲಸಂಖ್ಯಾತ ಎಂದೆಲ್ಲಾ ಹೇಳುವುದು ಡೋಂಗಿ ಪ್ರಚಾರಕ್ಕಾಗಿ ಎಂದು ಜಯನ್ ಮಲ್ಪೆ ಟೀಕಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು ಮಾತನಾಡಿ ದಲಿತ ಸಂಘಟನೆಗಳ ಹೊರಗಿರುವ ಅನೇಕರು ತಮಗಿರುವ ಕ್ರೆಡಿಬಿಲಿಟಿ ಬಲದಿಂದ ಮತ್ತು ದಲಿತ ಚಳುವಳಿ ಒಳಗೆಯೇ ಬಂದ ಕೆಲವು ಕುಬ್ಜ ಬುದ್ಧಿಜೀವಿಗಳು ದಲಿತ ಸಂಸ್ಕೃತಿ,ಸಾಹಿತ್ಯವನ್ನು ಗುತ್ತಿಗೆ ಸಂಸ್ಕೃತಿ ವರಸುದಾರರು ದಲಿತ ಚಳುವಳಿ ಬಗ್ಗೆ ಕಲ್ಪಿತ ತಪ್ಪುಗಳನ್ನು ಎತ್ತಿ ಹೇಳುವ ಮೂಲಕ ದಲಿತ ಚಳುವಳಿಯ ನಾಶಕ್ಕೆ ಕಾರಣರಾಗುತ್ತಿದ್ದಾರೆ.ಇವರಿಗೆ ನಿಜಕ್ಕೂ ದಲಿತ ಚಳವಳಿ ಬಗ್ಗೆ ಕಾಳಜಿ ಇಲ್ಲ ಕೇವಲ ಸ್ವಾರ್ಥಕ್ಕಾಗಿ ದಲಿತ ಸಂಘಟನೆಗಳನ್ನು ವಿಘಟನೆಗೊಳಿಸುತ್ತಾರೆ ಎಂದರು.
ದಲಿತ ರಾಜಕಾರಣಿ ಗಣೇಶ್ ನೆರ್ಗಿ ಮಾತನಾಡಿ ನಾವು ವರ್ಷಕ್ಕೆ ಎರಡು ಬಾರಿಯಾದರೂ ಅಂಬೇಡ್ಕರ್‌ರವರನ್ನು ಹುಟು ಮತ್ತು ಸಾವಿನ ಮೂಲಕ ನೆನೆಪು ಮಾಡುತ್ತೇವೆ.ಕೇವಲ ಉದ್ದುದ್ದ ಭಾಷಣ ಬಿಗಿಯುವದಲ್ಲ.ಅವರ ತತ್ವಗಳೇನು,ಅವರ ಉದ್ದೇಶಗಳೇನು,ಮೊದಲು ನಾವು ಹೇಗಿದ್ದೆವು,ಮುಂದೆ ಏನಾಗಬೇಕಾಗಿದೆ ಎಂದು ಚಿಂತನೆ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಮುಖಂಡರುಗಳಾದ ಗುಣವಂತ ತೊಟ್ಟಂ,ಅನೀಲ್ ಅಂಬಲಪಾಡಿ,ಸಂತೋಷ್ ಕಪ್ಪೆಟ್ಟು,ದಿನೇಶ್ ಜವಣೆರಕಟ್ಟೆ,ಸುರೇಶ್ ಪಾಲನ್,ಪ್ರಸಾದ್ ಮಲ್ಪೆ,ಮಹೇಶ್ ಚೆಂಡ್ಕಳ,ಸುಕೇಶ್ ಪುತ್ತೂರು,ಸಂತೋಷ್ ಮೂಡಬೆಟ್ಟು,ಅಶೋಕ್ ನಿಟ್ಟೂರು,ದೀಪಕ್ ಕೊಡವೂರು,ಅಣ್ಣಪ್ಪ ವರಂಗ,ಮೋಹನ್‌ದಾಸ್ ಚಿಟ್ಪಾಡಿ,ರಾಮೋಜಿ ಬಲರಾಮನಗರ ಮತ್ತು ಸುಶೀಲ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಭಗವನ್ ಮಲ್ಪೆ ಸ್ವಾಗತಿಸಿ, ಕೊನೆಯಲ್ಲಿಅರುಣ ನೆರ್ಗಿ ವಂದಿಸಿದರು, ಮಂಜುನಾಥ ಕಪ್ಪೆಟ್ಟು ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!