ದಲಿತರು ಸಹಿ ಧಿಕ್ಕರಿಸಿ: ಶ್ಯಾಮರಾಜ ಬಿರ್ತಿ ಕರೆ

ಉಡುಪಿ:  ದಲಿತರು ಸಹಿ ಧಿಕ್ಕರಿಸಿ “ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟ ಹಿಂದೂ ಕೋಮುವಾದಿಗಳ ಹಿಡನ್ ಅಜೆಂಡಾವನ್ನು  ಧಿಕ್ಕರಿಸಿ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ ಬಿರ್ತಿ ಕರೆಕೊಟ್ಟರು. ಅವರು ಇಂದು ಮಣಿಪಾಲ ಸಮೀಪದ ಪ್ರಗತಿ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉಧ್ಘಾಟಿಸಿ ಮಾತನಾಡುತಿದ್ದರು.

ದಲಿತರು ಅಲ್ಪಸಂಖ್ಯಾತರು ಈ ದೇಶದ ಮೂಲನಿವಾಸಿಗಳು , ಎಲ್ಲಿಂದಲೋ ಮಧ್ಯ ಏಷಿಯಯಾದಿಂದ ಬಂದಂತಹ ಆರ್ಯರಿಗೆ ನಾವು ನಮ್ಮ ಪೌರತ್ವವನ್ನು ಸಾಬೀತು ಪಡಿಸುವ ಅಗತ್ಯ ಇಲ್ಲಾ‌ . ಮನೆ ಬಾಗಿಲಿಗೆ ಬಂದ ಸಹಿ ಸಂಗ್ರಹಗಾರರನ್ನು  ನಿಮ್ಮ ಮನೆಯಿಂದ ಹೊರನಡೆಯಲು ಹೇಳೀ ಎಂದರು . ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಕಂಡು ವಿಚಲಿತಗೊಂಡಿರುವ ಮನುವಾದಿಗಳು ಮತ್ತೊಂದು ಹೊಸ ನಾಟಕವಾಡುತ್ತಿದ್ದಾರೆ , ದೇಶ ಆರ್ಥಿಕ ಪರಿಸ್ಥಿತಿ ನೆಲಕಚ್ಚಿ , ಲಕ್ಷಾಂತರ ಕಾರ್ಮಿಕರು , ಉದ್ಯೋಗ ಕಳೆದುಕೋಂಡು , ಸಾವಿರಾರು ಕಂಪೆನಿಗಳು ಮಚ್ಚಿಕೊಂಡರೂ , ತಲೆಕೆಡಿಸಿಕೊಳ್ಳದ ಸರಕಾರ , ಈಗ ಸಂವಿಧಾನದ ಮುನ್ನುಡಿಯನ್ನೇ ಧಿಕ್ಕರಿಸಲು ಹೊರಟಿದೆ , ಜಾತ್ಯತೀತ ದೇಶವಾದ ಅಖಂಡ ಭಾತವನ್ನು ಧರ್ಮದ ಆಧಾರದಲ್ಲಿ ಪೌರತ್ವ ನೀಡಿ ವಿಭಜಿಸಲು ಹೊರಟಿದೆ.

 ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಚಳವಳಿ ಬಿಟ್ಟರೆ , ಸ್ವಾತಂತ್ರ್ಯ ನಂತರ ದೇಶಾದ್ಯಂತ ನಡೆಯುತ್ತಿರುವ ಅತೀ ದೊಡ್ಡ ಚಳುವಳಿ ಇದು , ಯಾವುದೇ ಕಾರಣಕ್ಕೂ ಸಿ.ಎ.ಎ. ಮತ್ತು ಎನ್.ಆರ್.ಸಿ. ಜಾರಿಯಾಗಲು ಬಿಡಬಾರದು , ಈ ದೇಶದ ಮೂಲನಿವಾಸಿಗಳಾದ ನಾವು ಈ ದೇಶದ ಪೌರರು ಎಂದು ದಾಖಲೆಕೊಡಿ ಎಂದು ಎಲ್ಲಿಂದಲೋ ಬಂದ ಹೊರದೇಶಿಗರು ಕೇಳೋ ಅಗತ್ಯ ಇಲ್ಲಾ , ಆರ್ಯರೇ ನೀವಿಲ್ಲಿಯ ಪ್ರಜೆಗಳೇ ಅಲ್ಲಾ ನಾವು ನಿಮ್ಮನ್ನು ಹೊರಗಟ್ಟಬೇಕಾಗುತ್ತೇ ಎಂದರು . ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆ ಆಗಿದೆ , ಚಳುವಳಿಗಾರರನ್ನೆಲ್ಲಾ ಸುಳ್ಳು ಕೇಸು ಜಡಿದು ಜೈಲಿಗಟ್ಟಲಾಗುತ್ತಿದೆ. ಸರಕಾರದ  ಲೋಪವನ್ನು ಹೇಳಿದರೆ ದೇಶಧ್ರೋಹಿಗಳಾಗುತ್ತೇವೆ. ಇಡೀ ದೇಶದಲ್ಲಿ ಫೋಲಿಸರು ಮನುವಾದಿಗಳ ಅಣತಿಯಂತೆಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದೆಲ್ಲದರ ವಿರುದ್ಧ ಕೊರ್ಟಿಗೆ ಹೋಗೋಣವೆಂದರೇ ಅಲ್ಲಿಯೂ ನ್ಯಾಯ ಸಿಗೋದು ಮರೀಚಿಕೆಯೇ ಆಗಿದೆ. ಉನ್ನಾವೋ ದಲ್ಲಿ ಅತ್ಯಾಚಾರಿಗಳೇ ಜಾಮೀನಿನ ಮೇಲೇ ಹೊರಬಂದು ಸಂತಸ್ರ್ತೆಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಮಾಡುತ್ತಾರೆ…..ಬುಧ್ಧನ ನಾಡಲ್ಲಿ ಘೋಡ್ಸೇ ಮೆರೆದಾಡುತಿದ್ದಾನೆ ಎಂದರು.ದ.ಸಂ.ಸ.ಉಧ್ಘಾಟನಾ ಕಾರ್ಯ ಕ್ರಮದ ಅಧ್ಯಕ್ಷ ತೆಯನ್ನು ಉಡುಪಿ ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಠಾಣಾಧಿಕಾರಿ ಶ್ರೀಧರ ನಂಬಿಯಾರ್ , ಅಲೆವೂರುಪಂಚಾಯತ್ ಅಧ್ಯಕ್ಷರಾದ ಶ್ರೀಕಾಂತ ನಾಯಕ್ , ಮಾಜಿ ಅಧ್ಯಕ್ಷ ಹರೀಶ್ ಕಿಣಿ , ಜಿಲ್ಲಾ ಸಂಘಟನಾ ಸಂಚಾಲಕರಾದ  ಪರಮೇಶ್ವರ ಉಪ್ಪೂರು , ಭಾಸ್ಕರ್ ಮಾಸ್ಟರ್ , ಶ್ಯಾಮ ಸುಂದರ ತೆಕ್ಕಟ್ಟೆ , ಲೋಕೇಶ ಕಂಚಿನಡ್ಕ , ಉಪಸ್ಥಿತರಿದ್ದರು.
 ಸಮಾರಂಭದಲ್ಲಿ ನೂತನ  ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!