ಕಡಂದಲೆ ದೇವಸ್ಥಾನದಲ್ಲಿ ದಲಿತ ದರ್ಶನ


ಕಡಂದಲೆ: ಮುಜುರಾಯಿ ಇಲಾಖೆಗೆ ಒಳಪಟ್ಟ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ತಾನದಲ್ಲಿ ಷಷ್ಠಿ ಮಹೋತ್ಸವದ ಸಂದಂರ್ಭದಲ್ಲಿ ದಲಿತ ಮಹಿಳಾ ಪೊಲೀಸ್ ಪೇದೆಗೆ ಅರ್ಚಕರೊಬ್ಬರು ದೇವಸ್ಥಾನದಿಂದ ಹೊರಹೋಗುವಂತೆ ಅವಮಾನಿಸಿದ ಹಾಗೂ ಪಂಕ್ತಿಬೇಧದ ಘಟನೆಗೆ ಸಂಭಂದಿಸಿದಂತೆ ರಾಜ್ಯಮಟ್ಟದಲ್ಲಿ ಬಹಳಷ್ಟು ಚರ್ಚೆಗೀಡಾಗಿತ್ತು. ಇದರ ಬಗ್ಗೆ ಹಲವು ಇಲಾಖಾಧಿಕಾರಿಗಳು ದೇವಾಸ್ಥಾನಕ್ಕೆ ಭೇಟಿ ಕೊಟ್ಟು ವಿಚಾರಣೆ ಕೂಡ ಮಾಡಿರುತ್ತಾರೆ.


ಈ ಬಗ್ಗೆ ದಲಿತರು, ದಲಿತಪರ ಚಿಂತಕರು, ಕಾಪು ದಲಿತ ಸಂಘರ್ಷ ಸಮಿತಿಯವರು ಅಸ್ಪೃಶ್ಯತೆ ನಿವಾರಣೆಗಾಗಿ ಹಾಗೂ ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ರಾಜ್ಯ ದಲಿತ ನಾಯಕರ ಸೂಚನೆಯಂತೆ ಸುಮಾರು 50 ಜನರು ಇಂದು ಕಡಂದಲೆ ದೇವಸ್ಥಾನದಲ್ಲಿ ದಲಿತ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


ಮುಜಾರಾಯಿ ಇಲಾಖೆಗೆ ಸಂಬಂದ ಪಟ್ಟಂತಹ ದೇವಸ್ಥಾನ ಒಂದು ವರ್ಗದವರಿಗೆ ಸೀಮಿತವಾಗಿರದೆ ಎಲ್ಲಾ ವರ್ಗದವರಿಗೂ ಸಮಾನವಾಗಿರಬೇಕು. ಅಸ್ಪೃಶ್ಯತೆ ಪಂಕ್ತಿಬೇದ ನಡೆಯಬಾರದು. ಈ ಬಗ್ಗೆ ಎಲ್ಲಾ ಸಮಾಜದವರೂ ಕೂಡ ನಮ್ಮೊಂದಿಗೆ ಕೈ ಜೋಡಿಸಬೇಕು. ಇಂತಹ ಘಟನೆ ಇನ್ನು ಮುಂದೆ ನಡೆದರೆ ಉಗ್ರ ಹೋರಾಟವನ್ನು ನಡೆಸುವಂತಹ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಈ ಸಂದಂರ್ಭದಲ್ಲಿ ಕಾಪು ತಾಲೂಕು ಪ್ರದೇಶ ಅಂಬೇಡ್ಕರ್‌ವಾದ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲೋಕೇಶ್ ಪಡುಬಿದ್ರೆ, ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಮಲ ಅಂಚನ್, ಉಚ್ಚಿಲ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯ ಸಂಚಾಲಕ ದಿನಾಕರ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!