ದಕ್ಷಿಣ ಕನ್ನಡ -ಕೊರೋನಾ ಸೋಂಕಿತ 4 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ದಕ್ಷಿಣ ಕನ್ನಡ (ಉಡುಪಿ ಟೈಮ್ಸ್ ವರದಿ )- ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೋನ ಸೋಂಕಿತ 4 ಮಂದಿ ಸಂಪೂರ್ಣ ಗುಣಮುಖರಾಗಿದ್ದು ಗುಣಮುಖರಾದವರನ್ನು ಜಿಲ್ಲಾಡಳಿತ ಸೂಚನೆಗಳೊಂದಿಗೆ ಡಿಸ್ಚಾರ್ಜ್ ಮಾಡಿದೆ . ಓರ್ವ ಭಟ್ಕಳ ಹಾಗು ಮೂರು ಮಂದಿ ಕಾಸರಗೋಡು ನಿವಾಸಿಗಳಾದ ಇವರುಗಳು ,ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ
ಚಿಕೆತ್ಸೆ ಪಡೆದ ಎಲ್ಲ ವ್ಯಕ್ತಿಗಳಿಗೂ 28 ದಿನ ಕಡ್ಡಾಯ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದ್ದು,ಕೈಗೆ ಸೀಲ್ ಹಾಕಿ ಗುಣಮುಖರಾದವರನ್ನು ಜಿಲ್ಲಾಡಳಿತ ಡಿಸ್ಚಾರ್ಜ್ ಮಾಡಿದೆ.
ಒಟ್ಟು 12 ಮಂದಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇನ್ನುಳಿದ 8 ಎಂಟು ಮಂದಿ ಕೊರೋನಾ ಸೋಂಕಿತರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದ್ದೆ