ಅಪ್ಪನ ಮರಣ ಜೀವನದ ಹೊಸ ಮುಖವನ್ನೇ ತೋರಿಸಿತು: ಸಮಾಜ ಸೇವಕ ವಿಶು ಶೆಟ್ಟಿ

ಅತಿಥಿ – ವಿಶು ಶೆಟ್ಟಿ ಅಂಬಲ್ಪಾಡಿ
ಸಂದರ್ಶಕಿ – ಅಕ್ಷತಾ ಗಿರೀಶ್

ಸಮಾಜ ಸೇವೆಯಲ್ಲಿ ತನ್ನನು ತಾನು ತೊಡಗಿಸಿಕೊಂಡ ವಿಶು ಶೆಟ್ಟಿ ಅಂಬಲ್ಪಾಡಿ ಉಡುಪಿ ಟೈಮ್ಸ್ ವಾರದ ವ್ಯಕ್ತಿ , ಉಡುಪಿಯಲ್ಲಿ ಮನೆಮಾತಾಗಿರುವ ವ್ಯಕ್ತಿತ್ವ. ಯಾರೇ ಕರೆ ಮಾಡಿದರು ಹಗಲು ರಾತ್ರಿ ಎನ್ನದೇ ತಕ್ಷಣ ಸ್ಪಂದಿಸುವ ಆಪ್ತರಕ್ಷಕ, ಲಾಕ್ ಡೌನ್ ನ ಸಂದರ್ಭದಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಅನೇಕರ ಪಾಲಿಗೆ ಅನ್ನದಾತರಾದ ವಿಶು ಶೆಟ್ಟಿ  ತಮ್ಮ ಬದುಕಿನ ಪಯಣದ ನೆನಪುಗಳನ್ನು “ಉಡುಪಿ ಟೈಮ್ಸ್” ನ ಜೊತೆ  ಹಂಚಿಕೊಂಡಿದ್ದಾರೆ. ಅವರ ಮನದಾಳದ ಮಾತುಗಳನ್ನು ಭಟ್ಟಿ ಇಳಿಸುವ ಸಣ್ಣ ಪ್ರಯತ್ನ ನಮ್ಮದ್ದು

1.ಸಮಾಜಮುಖಿ ಕಾರ್ಯಗಳಿಗೆ ಯಾವಾಗಿಂದ ತಾವು ಟೊಂಕ ಕಟ್ಟಿ ಕೊಂಡಿರಿ ಹಾಗು ಇದಕ್ಕೆ ಪ್ರೇರಣೆ ಏನು ?

ವಿಶು ಶೆಟ್ಟಿ – ನಾನು ಬಾಲ್ಯದಿಂದಲೇ ಸಮಾಜಮುಖಿ ಕಾರ್ಯದತ್ತ ಮುಖ ಮಾಡಿದವ, ನನಗೆ ಇನ್ನು ನೆನಪಿದೆ ನಾನು  6 ನೇ ತರಗತಿಯಲ್ಲಿರುವಾಗ ಒಮ್ಮೆ ಶಾಲೆಯಿಂದ ಮನೆಯತ್ತ ಸಾಗುತ್ತಿದ್ದೆ ರಸ್ತೆಯ ಪಕ್ಕದ್ದಲ್ಲಿ ಒಬ್ಬ ವೃದ್ದೆ ಬಿದ್ದು ಒದ್ದಾಡುತ್ತಿದ್ದರು ಇದನ್ನು ನೋಡಿದವ ಕೂಡಲೇ ಅವರಿಗೆ ಚಿಕಿತ್ಸೆ ಸಿಗುವಂತೆ ಮಾಡಿದೆ . ನಂತರ ಹೀಗೆ ಅನೇಕ ರೋಗಿಗಳಿಗೆ ಅಶಕ್ತರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಿದೆ, ಇದರ ಪರಿಣಾಮ ಅವರು ಗುಣಮುಖರಾದರು ಸಾಯುವವರು ಬದುಕಿದರು ಎನ್ನುವ ತೃಪ್ತಿ ಸಿಕ್ಕಿತ್ತು. ನಾವು ಚಿಕ್ಕದಿಂದಲೂ ಹೋರಾಟದಲ್ಲಿ ಜೀವನ ಸಾಗಿಸಿದವರು ನನ್ನ ತಂದೆ 8 ನೇ ತರಗತಿಯಲ್ಲಿ ತೀರಿ ಹೋಗಿದ್ದರು ಹಾಗಾಗಿ ಬಡವರ ಕಷ್ಟ ನನ್ನ ಅರಿವಿಗೆ ಬೇಗ ಬರುತ್ತದ್ದೆ ,ಒಬ್ಬ ಸಾವಿನ ಅಂಚಿನಲ್ಲಿರುವವರನ್ನ ಬದುಕಿಸಲು ವೈದ್ಯರ ಪಾತ್ರವೆಷ್ಟೋ ಅಷ್ಟೇ ಜನಸಾಮಾನ್ಯರ ಪಾತ್ರವು ಇದೆ ಎನ್ನುವುದನ್ನ ನಾನು ಅರಿತೆ ಇದೆ ನನಗೆ ಪ್ರೇರಣೆ ಆಯಿತು. 

2. ಲಾಕ್ ಡೌನ್ ಸಂದರ್ಭದಲ್ಲಿ ನೀವು ನಿಮ್ಮ ಸ್ವಂತ ಖರ್ಚಿನಲ್ಲಿ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೀರಿ ಜನ ಮೆಚ್ಚುವ ಕೆಲಸ ನಿಮ್ಮದು ,ಬದುಕಿನ ಯಾವ ಸತ್ಯ ನಿಮಗೆ ಅರಿವಿಗೆ ಬಂತು ?

ವಿಶು ಶೆಟ್ಟಿ – ಎಲ್ಲರೂ ಲಾಕ್ ಡೌನ್ ಪ್ರಾರಂಭವಾದ 2  ದಿನದ ನಂತರ ಊಟ ನೀಡಲು ಪ್ರಾರಂಭಿಸಿದರು ಆದರೆ ನಾನು ಜನತಾ ಕರ್ಫ್ಯೂ ಆದ ದಿನದಿಂದ ಅಶಕ್ತರಿಗೆ ಅಗತ್ಯವುಳ್ಳವರಿಗೆ ಊಟ ನೀಡುತ್ತಿದ್ದೇನೆ, ಜನತಾ ಕರ್ಫ್ಯೂ ಮರುದಿನ ಸೋಮವಾರ ಉಡುಪಿಯ ಎಲ್ಲ ದೇವಾಲಯಗಳು ಮುಚ್ಚಿದ್ದವು ಅದನ್ನ ನಂಬಿಕೊಂಡು ಅನೇಕ ಬಡವರಿಗೆ ಒಪ್ಪೊತ್ತಿನ ಊಟಕ್ಕೂ ಸಂಕಟ ಪ್ರಾರಂಭವಾಯಿತು, ಇವರಿಗೆ ಊಟದ ವ್ಯವಸ್ಥೆ ಮಾಡುವಂತೆ ಡಿಸಿ ಗೂ ಮನವಿ ಮಾಡಿದ್ದೇನೆ ಅಷ್ಟೇ ಅಲ್ಲದ್ದೆ ಸಿಟಿ ಬಸ್ ಸ್ಟಾಂಡ್ ಲಿ ಇರುವವರಿಗೆ ಊಟದ  ಪೊಟ್ಟಣ್ಣವನ್ನ ನೀಡುತ್ತಿದ್ದೇನೆ.  ಇದೀಗ ಅನೇಕ ಜನ ಈ ಕಾರ್ಯವನ್ನ ಪ್ರಾರಂಭಿಸಿದ್ದಾರೆ ಶಾಸಕ ರಘುಪತಿ ಭಟ್ ರವರ ನೇತೃತ್ವದಲ್ಲಿ ದೊಡ್ಡ ಮಟ್ಟಿನಲ್ಲಿ ಈ ಕಾರ್ಯ ನಡೆಯುತ್ತಿದ್ದೆ. ಶಾಸಕರ ಹೇಳಿಕೆಯಂತೆ ಜನರ ಹಸಿವಿಗೆ ನೀಡಿರುವುದು ಕರ್ನಾಟಕದಲ್ಲಿ ಉಡುಪಿ ಪ್ರಥಮವಂತೆ ಹಾಗಾದರೆ ಕರ್ನಾಟಕದಲ್ಲಿ ನಾನೇ ಪ್ರಥಮ ಎನ್ನುವ ತೃಪ್ತಿ ನನಗೆ ಇದೆ, ಎಷ್ಟೋ ಜನರಿಗೆ ಬೆಳಿಗ್ಗೆ ಟೀ ಇಲ್ಲದ್ದೆ ಇದ್ದಲ್ಲಿ ಮಾನಸಿಕವಾಗಿ ಕುಂದುತ್ತಾರೆ ಹಾಗಾಗಿ ಚಾ ತಿಂಡಿಯನ್ನ ನನ್ನ ಸ್ವಂತ ಖರ್ಚಿನಲ್ಲಿ  ನೀಡಿದ್ದೇನೆ ಇದಕ್ಕೆ ನಂಗೆ ನ್ಯೂ ರಾಮ ಮಂದಿರದ  ಮಾಲೀಕರಾದ  ರಾಮ್ ಪ್ರಸಾದ್ ಭಟ್  ಅತಿ ಕಡಿಮೆ ಬೆಲೆಯಲ್ಲಿ ಉಪಹಾರದ  ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಪ್ರಥಮ ದಿನ  150 ಜನರಿಗಾಗುವಷ್ಟು ಚಾ ತಿಂಡಿ ವ್ಯವಸ್ಥೆ ಮಾಡಿದ್ದಾಗ ಜನ ಮುಗಿ ಬಿದ್ದರು ನಂತರ ಅದನ್ನು350 ಕ್ಕೆ ಏರಿಸಿದೆ. ಅನೇಕ ಜನಕ್ಕೆ ಔಷದಿಯ ವ್ಯವಸ್ಥೆ ಮಾಡಿದೆ ಅನೇಕ ಜನ ನನ್ನಲ್ಲಿ ಬಂದು ಸಹಾಯ ಮಾಡುತ್ತೇವೆ ಅಂದಿದ್ದಾರೆ ಆದರೆ ನಾನು ಅವರಲ್ಲಿ ಇದೆ ರೀತಿಯ ಪರಿಸ್ಥಿಯಲ್ಲಿರುವವರಿಗೆ ಸಹಾಯ ಮಾಡಲು ತಿಳಿಸಿದೆ ಈಗ ನನ್ನ ಅಭಿಮಾನಿಗಳು ಸುಮಾರು 600  ಕುಟುಂಬಗಳಿಗೆ ನೆರವಾಗಿದ್ದಾರೆ . ಲಾಕ್ ಡೌನ್ ಸಮಯದಲ್ಲಿ ರಕ್ತ ನಿಧಿಯಲ್ಲಿ ರಕ್ತದ ಕೊರತೆ ಉಂಟಾದಾಗ ನಾವು ರಕ್ತ ದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದಾಗ ಜನ ಅಭೂತಪೂರ್ವವಾಗಿ ಬೆಂಬಲ ನೀಡಿದರು. ಜನ ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡಿ ಮಾನವೀಯತೆ ಮೆರೆದರು
ಅನೇಕ  ಜನಕ್ಕೆ ನಾನು  ಒಂದು ಪ್ರೇರಣೆ ಅದೆನ್ನೆಲ್ಲಾ ಅನ್ನುವ ಖುಷಿ ಇದೆ . ಎಷ್ಟೇ ಸಂಪತ್ತಿದ್ದರೂ ಸಮಯ ಸಂದರ್ಭ ಮನುಷ್ಯನನ್ನು ಯಾವ ಸ್ಥಿತಿಗೂ ದೂಡಬಹುದು ಎಂಬುದು ಸತ್ಯ  

3 . ರಾಜಕೀಯ ಪಕ್ಷದಿಂದ ನಿಮಗೇನಾದರೂ ಸಹಾಯ ದೊರೆತಿದೆಯಾ ?

ವಿಶುಶೆಟ್ಟಿ – ಯಾವುದೇ  ರಾಜಕೀಯ ಪಕ್ಷಗಳು ನಮ್ಮ ಸಹಾಯಕ್ಕೆ ಬಂದಿಲ್ಲ ಅದನ್ನು ನಾವು ಬಯಸುವುದಿಲ್ಲ. ಆದರೆ ಸಾರ್ವಜನಿಕರು ತುಂಬಾ ಜನ ನೆರವಿಗೆ ಬಂದರು. ನನ್ನ ವರ್ಕ್ ಶಾಪ್ ಗುಡಿಸಲಿನಂತೆ ಇದೆ ಅದರ ರಿಜಿಸ್ಟ್ರೇಷನ್ ಕೂಡ ನಾನು ಮಾಡಿಲ್ಲ ಮೊದಲಾಗಿದ್ದರೆ ಕೇವಲ 1 ಲಕ್ಷದಲ್ಲಿ ಆಗುತ್ತಿತ್ತು ಆದರೆ ಈಗ 3 ಲಕ್ಷ ಆಗುತ್ತೆ ಆದರೆ ಅದರ ಬಗ್ಗೆ ನನಗೆ ಯೋಚನೆ ಇಲ್ಲ,  ನನ್ನ ಕೈಲಾದ ಸಮಾಜ ಸೇವೆ  ಮಾಡುತ್ತೇನೆ. ಬಹಳ ಬೇಸರದ ಸಂಗತಿಯೆಂದರೆ ಜಿಲ್ಲಾಸ್ಪತ್ರೆಯಿಂದ ಗುಣಮುಖರಾದ ಅಶಕ್ತರನ್ನ ಹಾಗು ರೋಗಿಗಳನ್ನ ಬೇರೆ ಮನೆಗಳಿಂದ / ಆಸ್ಪತ್ರೆಗಳಿಗೆ ವರ್ಗಾಯಿಸಲು ಉಚಿತ ಆಂಬುಲೆನ್ಸ್ ಸೇವೆ ಅಗತ್ಯ ಅವಶ್ಯಕ ಆದರೆ ನಮ್ಮಲಿ ಆ ಸೇವೆನೇ ಇಲ್ಲ ಎನ್ನುವುದು ದುರಾದ್ರಷ್ಟಕರ. ಹೆಚ್ಚಿನವರನ್ನು ನಾನು ನನ್ನ ಸ್ವಂತ ಕಾರಿನಲ್ಲಿ ಕರೆದುಕೊಂಡು ಹೋಗಿದ್ದೇನೆ. ಇದರ ಬಗ್ಗೆ ನಾವು ಮನವಿಯನ್ನು ನೀಡಿದ್ದೇವೆ.

4. ವಿಶುಶೆಟ್ಟಿ ಯವರ ಜೀವನದಲ್ಲಿ ಮರೆಯಲಾರದ ಘಟನೆಗಳು ಸಾವಿರಾರು ಇದೆ ಆದರೆ ಅದರಲ್ಲಿ ನೆನಪಿನ ಬುತ್ತಿಯಿಂದ ಒಂದು ಘಟನೆ ನಮಗಾಗಿ..

ವಿಶು ಶೆಟ್ಟಿ – ಖಂಡಿತವಾಗ್ಲೂ ಸಾವಿರಾರು ಘಟನೆಗಳು ನನ್ನ ಬದುಕಲ್ಲಿ ಬಂದು ಹೋಗಿದೆ ಅದರಲ್ಲಿ ಸಿದ್ದವ್ವ ಎಂಬ ಮಹಿಳೆಯ ನೋವುಭರಿತ ಜೀವನ ಸದಾ ಕಾಡುತ್ತದ್ದೆ. ಆಕೆ ಬಾಲ್ಯದಲ್ಲಿ ದುರಾದ್ರಷ್ಟವಷಾತ್ ತನ್ನ ಹಿಪ್ ಜಾಯಿಂಟ್ ಮುರಿದುಕೊಂಡು ಅಂಗವಿಕಲೆಯಾದಳು ಬಾತರೂಮ್ ಗೆ ತೆವಳಿಕೊಂಡು ಹೋಗುವ ಅವಳಿಗೆ ಅವಳ ಕಾಲ ಮೇಲೆ  ನಿಲ್ಲಬೇಕು ಎನ್ನುವ ಅಸೆ ಅವಳ ಜೀವನಕ್ಕೆ ಒಂದು ಊರುಗೋಲಿನ ಆಸರೆ ಬೇಕಿತ್ತು. ಅಕೆಗೇನು ಬಾರಿ ವರ್ಷ ಆಗಿಲ್ಲ ಕೇವಲ 40  ವರ್ಷದ ಆಸುಪಾಸು ಅಷ್ಟೇ.  2 ಹಿಪ್ಸ್ ಜಾಯಿಂಟ್ ಹೋಗಿತ್ತು ಅವಳನ್ನ ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿದೆ. ಅವಳ ಅಪರೇಷನ್ ಗೆ 4 ಲಕ್ಷ ರೂಪಾಯಿಯ ಅವಶ್ಯಕತೆ ಇದೆ ಅಂದರು ಅವಳಿಗೆ ಬಿ ಪಿ ಎಲ್ ಕಾರ್ಡ್ ಇದ್ದಲ್ಲಿ ಸರ್ಕಾರದಿಂದ ಸಹಾಯ ದೊರೆಯುವುದಾಗಿ ತಿಳಿಯಿತು ಆದರೆ ಆಕೆ ಬೀದಿ ಬದಿಯಲ್ಲಿ ಇದ್ದವಳು ಆಕೆಗೆ ಉಳಿಯಲು ಸೂರಿಲ್ಲ,  ಅವಳು ಬಿ ಪಿ ಎಲ್ ಕಾರ್ಡ್ ನ್ನು ಎಲ್ಲಿಂದ ತರುವುದು?. ನಂತರ ನನ್ನ ಮನೆಯ ವಾಸ್ತವ್ಯ  ಪಾತ್ರವನ್ನ ನೀಡಿ ಅವಳಿಗೆ ಬಿ ಪಿ ಎಲ್ ಕಾರ್ಡ್ ಮಾಡಿಸಿಕೊಟ್ಟೆ ಅವಳ ಅಪರೇಷನ್ ಆಗಿ ಇದೀಗ ಅವಳು ನಡೆಯುತ್ತಿದ್ದಾಳೆ.  ಇಂತಹ ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದಿದೆ ಕ್ಯಾನ್ಸರ್ ಪೀಡಿತ ಒಬ್ಬ ಮಹಿಳೆ ಸಂಪೂರ್ಣ ಗುಣಮುಖರರಾದ ಘಟನೆಗಳು ನನ್ನನು ಇನ್ನಷ್ಟ್ಟು ಬಲಿಷ್ಠ  ಮಾಡಿದೆ.

5 . ಜಿಲ್ಲಾಡಳಿತಕ್ಕೆ  ಹಾಗು ನಿಮ್ಮ ಅಭಿಮಾನಿಗಳಿಗೆ  ನೀವು ಮಾಡುವ ಮನವಿಯೇನು ?

ವಿಶು ಶೆಟ್ಟಿ – ಇದು ನಮ್ಮ ದೇಶದ ತುಂಬಾ ಆಪತ್ಕಾಲ ಈ ಸಂದರ್ಭದಲ್ಲಿ ನಾವೆಲ್ಲರೂ ಸರಕಾರದ ಜೊತೆ ಕೈ ಜೋಡಿಸಬೇಕು. ಇನ್ನು ಎಷ್ಟೋ ಜನ ಸಮಾಜಮುಖಿ ಕಾರ್ಯಗಳನ್ನು ಮಾಡಲು ಹಿಂದೆ ಸರಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ದಯವಿಟ್ಟು ಮುಂದೆ ಬಂದು ಅಶಕ್ತರಿಗೆ ನೆರವಾಗಬೇಕು. ನಿಮ್ಮ ಮಕ್ಕಳನ್ನ ವಿಮಾನದಲ್ಲಿಯೇ ತಿರುಗಿಸಿ ಆದರೆ ಅವರಿಗೆ ನಡೆದುಕೊಂಡು ಹೋಗುವುದು ಹೇಗೆ ಎಂದು ಕಲಿಸಿ, ಚಿನ್ನದ ಬಟ್ಟಲಿನಲ್ಲಿ ಊಟ ಕೊಡಿಸಿ ಆದರೆ ಕರಟದಲ್ಲಿಊಟ ಮಾಡುವುದನ್ನ ಕಲಿಸಿ . ಪ್ರತಿ ದಿನವೂ ಆನ್ ಲೈನ್ ಊಟ ಬರುದಿಲ್ಲ ಬದಲಿಗೆ ಮಕ್ಕಳಿಗೆ ತಿಳಿ ಗಂಜಿ ಮಾಡುವುದನ್ನ ಕಲಿಸಿ. ಪ್ರಕೃತಿಯ ಎದರು ನಾವೇನು ಇಲ್ಲ, ಬದುಕು ಹೇಗೆ ಬದಲಾಗುವುದೋ ತಿಳಿಯದು ಹಾಗಾಗಿ ಸರಳತೆಯಿಂದ ಬದುಕಲು ಕಲಿಯಿರಿ ದುರಹಂಕಾರ ಇದೆಲ್ಲ ನಮ್ಮ ಮಾನಸಿಕ ಸ್ಥಿರತೆಯನ್ನ ಕಳೆದು ಬಿಡುತ್ತದ್ದೆ. ಹಾಗಾಗಿ ಮಹಿಳೆಯರಿಗೆ ಹಾಗು ಮಕ್ಕಳು ತೊಂದರೆಗೆ ಸಿಲುಕದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.

ಇನ್ನು ಜಿಲ್ಲಾಡಳಿತಕ್ಕೆ ನನ್ನ ಮನವಿ ದಯವಿಟ್ಟು ಅಶಕ್ತರಿಗೆ ಸಮಾಜದಲ್ಲಿ ತೀರಾ ಹಿಂದುಳಿದವರಿಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ ಉಡುಪಿಯಲ್ಲಿ ಮಾಡಿಸಿ, ಹಾಗೆಯೆ ಈ ಲಾಕ್ ಡೌನ್ ಸಂದರ್ಭದಲ್ಲಿ ಐಎಎಸ್, ಐಪಿಎಸ್ ರವರ ಮಾತು ಕೇಳುವುದರ ಜೊತೆಗೆ ಜನಸಾಮನ್ಯರ ಮಾತನ್ನು ಕೇಳಿ ಯಾಕಂದರೆ ವಿಶೇಷ ಅನುಭವಗಳ ಬರುವುದು ಜನಸಾಮನ್ಯರಿಗೆ ಮಾತ್ರ ಆದರೆ ಇಲ್ಲಿ ಜನಸಾಮನ್ಯರಿಗೆ ಮಾತನಾಡುವ ಅವಕಾಶವೇ ಇಲ್ಲ . ದಯವಿಟ್ಟು ಈ ಸಮಯದಲ್ಲಿ ಎಲ್ಲ ರೋಗಗಳಿಗೆ ವೈದ್ಯರು ದೊರೆಯುವ ಹಾಗೆ ಆಗಲಿ ರೋಗಿ ಹೋದಾಗ ವೈದ್ಯರಿಲ್ಲ ಎಂಬುದು ಆಗದೆ ಇರಲಿ ಇದೆ ನಮ್ಮ ಆಶಯ .   

2 thoughts on “ಅಪ್ಪನ ಮರಣ ಜೀವನದ ಹೊಸ ಮುಖವನ್ನೇ ತೋರಿಸಿತು: ಸಮಾಜ ಸೇವಕ ವಿಶು ಶೆಟ್ಟಿ

  1. There are two.well known Shettys in Udupi.One is a filthy billionaire with a small.heart.Another is an empty pocket with a heart that engulfs the whole of the city with charity.. Vishu Shetty speaks with his work.No.flaunting.His life is a message to the high flying other shetty who soon shall land where he deserves.
    I.salute dear Vishu Shetty working round the clock with whatever help he gets with out asking for.
    May the Almighty nbkess him.alwsyd

  2. There are two.well known Shettys in Udupi.One is a filthy billionaire with a small.heart.Another is an empty pocket with a heart that engulfs the whole of the city with charity.. Vishu Shetty speaks with his work.No flaunting.His life is a message to the high flying other shetty.
    I.salute dear Vishu Shetty working round the clock with whatever help he gets with out asking for.
    May the Almighty bless him.always

Leave a Reply

Your email address will not be published. Required fields are marked *

error: Content is protected !!