ದಬಂಗ್ 3 ಆಕ್ಷೇಪಾರ್ಹ ಪ್ರಸಂಗವನ್ನು ತೆಗೆಯದಿದ್ದರೆ ಬಹಿಷ್ಕರಿಸಿ: ಹಿಂದೂ ಜನಜಾಗೃತಿ

ಡಿಸೆಂಬರ್ 30 ರಂದು ಪ್ರದರ್ಶನಗೊಳ್ಳಲಿರುವ ದಬಂಗ್ 3 ಈ ಹಿಂದಿ ಚಲನಚಿತ್ರದಲ್ಲಿ ಸಾಧುಗಳನ್ನು ಗಾಗಲ್ ಹಾಕಿಕೊಂಡು ಕೈಯಲ್ಲಿ ಗಿಟಾರನ್ನು ಹಿಡಿದು ಅಶ್ಲೀಲವಾಗಿ ಹಾಗೂ ಆಕ್ಷೇಪಾರ್ಹವಾಗಿ  ಕುಣಿಯುತ್ತಿರುವಂತೆ ತೋರಿಸಲಾಗಿದೆ.

ದೇವತೆಗಳ ಅವಮಾನವನ್ನೂ ಮಾಡಎಲಾಗಿದೆ. ಇದನ್ನು ತಿಳಿಸಿದರೂ ಕುಣಿಯುತ್ತಿರುವ ಸಾಧುಗಳು ನಕಲಿಯಾಗಿದ್ದಾರೆಂದು ಹೇಳುತ್ತ ಸಲ್ಮಾನ ಖಾನ್ ಚಲನಚಿತ್ರದ ಆ ದೃಶ್ಯವನ್ನು ಸಮರ್ಥಿಸಿದ್ದಾರೆ. ಹೀಗಿದ್ದರೆ ಸಲ್ಮಾನ ಖಾನ್ ನಕಲಿ ಮುಲ್ಲಾ-ಮೌಲ್ವಿ ಹಾಗೂ ಫಾದರ್-ಬಿಶಪ್ ಇವರನ್ನು ಗಿಟಾರ್ ಹಿಡಿದು ಆಕ್ಷೇಪಾರ್ಹ ಪದ್ದತಿಯಿಂದ ಕುಣಿಯುತ್ತಿರುವಂತೆ ತೋರಿಸಲಿ ! ಇದನ್ನು ಅವರು ಮಾಡಲು ಸಾಧ್ಯವಿಲ್ಲದಿದ್ದರೆ, ಹಿಂದೂಗಳ ಶ್ರದ್ಧಾಸ್ಥಾನಗಳ ವಿಡಂಬನೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ.

ಚಲನಚಿತ್ರದಲ್ಲಿಯ ಅಕ್ಷೇಪಾರ್ಹ ಭಾಗವನ್ನು ತೆಗೆಯದಿದ್ದಲ್ಲಿ ‘ದಬಂಗ್ 3’ರ ಮೇಲೆ ಬಹಿಷ್ಕಾರ ಹಾಕಲಾಗುವುದು, ಎಂಬ ಸಂಕೇತವನ್ನು ಸಮಸ್ತ ಹಿಂದುತ್ವನಿಷ್ಠ ಸಂಘಟನೆಯವರು ಮಹಾರಾಷ್ಟ್ರದ ದಾದರನಲ್ಲಿ ಪ್ರತಿಭಟನೆಯ ಸಮಯದಲ್ಲಿ ನೀಡಿದರು.ದಬಂಗ್ 3 ಚಲನಚಿತ್ರದ ಮೂಲಕ ಹಿಂದೂಗಳ ಶ್ರದ್ಧಾಸ್ಥಾನದ ಅವಮಾನದ ವಿರುದ್ಧ ಡಿಸೆಂಬರ್ 8 ರಂದು ದಾದರ (ಪೂರ್ವ) ರೈಲುನಿಲ್ದಾಣದ ಬಳಿ ಸ್ವಾಮಿ ನಾರಾಯಣ ದೇವಸ್ಥಾನದ ಹತ್ತಿರ ಆಂದೋಲನವನ್ನು ಮಾಡಲಾಯಿತು. ಈ ಆಂದೋಲನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಂಘಟನೆಯದವರು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಈ ಆಂದೋಲನದಲ್ಲಿ ಹಿಂದೂ ರಾಷ್ಟ್ರ ಸೇನೆ, ಬಜರಂಗದಳ, ಶ್ರೀ ಶಿವಕಾರ್ಯ ಪ್ರತಿಷ್ಠಾನ, ವಜ್ರದಳ, ಹಿಂದೂ ಜನಜಾಗೃತಿ ಸಮಿತಿ, ಶಿವಪುತ್ರ ಪ್ರತಿಷ್ಠಾನ, ಶ್ರೀರಾಮ-ಗಣೇಶ ಮಿತ್ರಮಂಡಳಿ(ಧಾರಾವಿ), ಸನಾತನ ಸಂಸ್ಥೆ, ರಣರಾಗಿಣಿ ಶಾಖೆ ಮುಂತಾದ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಹಭಾಗಿಯಾಗಿದ್ದರು.ಈ ಆಂದೋಲನದಲ್ಲಿ ಕೋಮುದ್ವೇಷವನ್ನು ನಿರ್ಮಿಸುವ ದಬಂಗ್ ೩ ನಿಲ್ಲಿಸಿ, ಹಿಂದೂ ಧರ್ಮದ ಅವಮಾನವನ್ನು ಮಾಡುವ ಸಲ್ಮಾನ ಖಾನ್‌ಗೆ ಧಿಕ್ಕಾರ, ಎಂದು ತೀವ್ರ ಘೋಷಣೆಯನ್ನು ಆಂದೋಲನಕಾರರು ನೀಡಿದರು.

ಧರ್ಮಾಭಿಮಾನಿಗಳು ಕೈಯಲ್ಲಿ ಫಲಕವನ್ನು ಹಿಡಿದು ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಸೆನ್ಸರ್ ಬೋರ್ಡ್ ದಬಂಗ್3 ಚಲನಚಿತ್ರದಿಂದ ಆಗುವ ಹಿಂದೂಗಳ ಶ್ರದ್ಧಾಸ್ಥಾನದ, ಅದೇರೀತಿ ಭಾರತೀಯ ಸಂಸ್ಕೃತಿಗೆ ಮಾಡಿದ ಅವಮಾನದ ಪ್ರಸಂಗವನ್ನು ಕೂಡಲೇ ತೆಗೆಯಬೇಕು, ಅಲ್ಲಿಯವರೆಗೆ ಸೆನ್ಸರ್ ಬೋರ್ಡ್ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಬಾರದು, ಎಂದು ಆಂದೋಲನದಲ್ಲಿ ಸಹಭಾಗಿಯಾಗಿದ್ದ ಹಿಂದೂ ಧರ್ಮಪ್ರೇಮಿಗಳು ಅಗ್ರಹಿಸಿದರು.ಧಾರ್ಮಿಕಭಾವನೆಯನ್ನು ಕಾಪಾಡಬೇಕೆಂದು ಕಾನೂನುಮಾರ್ಗದಿಂದ ಆಂದೋಲನವನ್ನು ಮಾಡುವ ಹಿಂದೂಗಳಿಗೆ ‘ಹೆಸರಿಗಾಗಿ ಆಂದೋಲನ ಮಾಡುತ್ತಿದ್ದಾರೆ’ ಎಂದು ಹೇಳುವ ಸಲ್ಮಾನ ಖಾನ್ ಇವರನ್ನು ನಾವು ತೀವ್ರ ಶಬ್ದಗಳಲ್ಲಿ ಖಂಡಿಸುತ್ತೇವೆ. ಹಿಂದೂಗಳು ಸಂಪೂರ್ಣ ಚಲನಚಿತ್ರಕ್ಕೆ ವಿರೋಧವನ್ನು ವ್ಯಕ್ತಪಡಿಸಿಲ್ಲ, ಬದಲಾಗಿ ಧಾರ್ಮಿಕ ಭಾವನೆಯನ್ನು ನೋಯಿಸುವ ಆಕ್ಷೇಪಾರ್ಹ ಭಾಗವನ್ನು ತೆಗೆಯಲಿಕ್ಕಾಗಿ ಬೇಡಿಕೆಯನ್ನು ಮಾಡಿದ್ದಾರೆ; ಒಂದು ವೇಳೆ ಸಲ್ಮಾನ ಖಾನ್ ಹಿಂದೂಗಳ ಧಾರ್ಮಿಕಭಾವನೆಯ ಅವಹೇಳನವನ್ನು ಮಾಡುತ್ತಿದ್ದಲ್ಲಿ, ಸಮಸ್ತ ಹಿಂದೂಗಳಿಗೆ ಈ ಚಲನಚಿತ್ರದ ಮೇಲೆ ಬಹಿಷ್ಕಾರವನ್ನು ಹಾಕುವಂತೆ ಕರೆ ನೀಡುತ್ತೇವೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಮುಂಬೈ ಸಮನ್ವಯಕ ಬಳವಂತ ಪಾಠಕ ಇವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!