ಕ್ರಿಕೆಟ್ ಫೀವರ್…
ಕ್ರಿಕೆಟ್..ಕ್ರಿಕೆಟ್..ಕ್ರಿಕೆಟ್..ಹೌದು ಈಗ ಎಲ್ಲಿ ನೋಡಿದರೂ ವಿಶ್ವಕಪ್‌ನದ್ದೇ ಮಾತು..
ಈ ಸಲದ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದ್ದ ಭಾರತವನ್ನು ಸೆಮಿಫೈನಲ್‌ನಲ್ಲಿ ಮಣಿಸಿ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿದರೆ, ಇನ್ನೊಂದೆಡೆ ತವರು ನೆಲದಲ್ಲಿ ತನ್ನ ಬದ್ದ ವೈರಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯಗಳಿಸಿ ಇಂಗ್ಲೆಂಡ್ ಫೈನಲ್‌ಗೆ ಪ್ರವೇಶಿಸಿದೆ. ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್‌ನಲ್ಲಿ ಭಾನುವಾರ ನಡೆಯಲಿರುವ ಫೈನಲ್ ಕದನಕ್ಕೆ ಉಭಯ ತಂಡಗಳು ಸಜ್ಜಾಗಿದೆ.
ಭಗ್ನಗೊಂಡ ಭಾರತದ ವಿಶ್ವಕಪ್ ಕನಸು
ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದ ತಂಡ ಗೆಲುವಿನ ಲಯದಲ್ಲಿತ್ತು. ಅದರಲ್ಲೂ ಪಾಕಿಸ್ತಾನದ ವಿರುದ್ಧದ ಜಯ ಇಡೀ ದೇಶ ಸಂಭ್ರಮಿಸುವಂತೆ ಮಾಡಿತ್ತು. ಆದರೆ ಸೆಮಿಫೈನಲ್‌ನಲ್ಲಿ ಕೀವೀಸ್ ವಿರುದ್ದ ಎಡವಿದ ಭಾರತದ ಸೋಲೊಪ್ಪಿಕೊಂಡಿತು. ಟೂರ್ನಿಯ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಭಾರತದ ಪರ ಭರ್ಜರಿ 5 ಶತಕ ಸಿಡಿಸಿ ಮಿಂಚಿದರೆ, ಶಮಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮುಖಾಂತರ ದಾಖಲೆಯ ಪುಟ ಸೇರಿದರು.
ಅದೇನೇ ಇರಲಿ, ಆಟದಲ್ಲಿ ಸೋಲು-ಗೆಲುವು ಇದ್ದದೆ. ಗೆದ್ದಾಗ ಬೆನ್ನುತಟ್ಟಿ ಸೋತಾಗ ಹೀಯಾಳಿಸುವ ಜಾಯಮಾನದವರು ನಾವಲ್ಲ. ತಮ್ಮ ಚೊಚ್ಚಲ ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ಎರಡು ತಂಡಗಳಿಗೆ ಆಲ್ ದ ಬೆಸ್ಟ್ ಹೇಳೋಣ..
ರೂಪೇಶ್ ಜೆ.ಕೆ