ನೆರೆ ಪರಿಹಾರ ಹಾನಿಗೆ ತಜ್ಞರ ಸಮಿತಿ ರಚಿಸಿ: ವೀರಪ್ಪ ಮೊಯ್ಲಿ
ಉಡುಪಿ : ರಾಜ್ಯದಲ್ಲಿ ಉಂಟಾದ ಭೀಕರ ನೆರೆಯಿಂದಾಗಿ 5 ಲಕ್ಷ ಕೋಟಿ ರೂ.ನಷ್ಟಂಟಾಗಿದೆ ಕೇಂದ್ರ ಸಕಾಽರ ತಕ್ಷಣವೇ ತಜ್ಞರ ಸಮಿತಿ ರಚಿಸಿ ,ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವಿನೂತನ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಪ್ರಧಾನಿ ಅವರೇ ಬಂದು ನೆರೆ ಪರಿಹಾರದ ಹಣದ ಘೋಷಣೆ ಮಾಡಬೇಕಿಲ್ಲ ಈಗಾಗಲೇ ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವರು, ವಿತ್ತ ಸಚಿವರು ಭೇಟಿ ನೀಡಿದ್ದಾರೆ. ಸೆ.7 ರಂದು ಪ್ರಧಾನಿ ಭೇಟಿ ಕೊಡುತ್ತಾರೆ ಎನ್ನುವ ಮಾಹಿತಿ ತಿಳಿದಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಸ್ಪಂದಿಸುವ ಕೆಲಸ ರಾಜ್ಯ ಸರಕಾರ ಮತ್ತು ಕೇಂದ್ರ ತೆಗೆದುಕೊಳ್ಳಬೇಕು, ಕೆಲವೊಂದು ಭಾಗದಲ್ಲಿ ಕಾರಿನಲ್ಲಿ ಕುಳಿತು ನೆರೆಯಲ್ಲಿ ಹಾನಿಗೊಂಡ ಪ್ರದೇಶವನ್ನು ವೀಕ್ಷಿಸಿ ಹೋಗಿದ್ದಾರೆ .ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಸಂತ್ರಸ್ತರಿಗೆ 1.15 ಲಕ್ಷ ಮನೆ ಮಂಜೂರು ಮಾಡಿದೆ .ಇದೇ ರೀತಿ ಕರ್ನಾಟಕದಲ್ಲೂ ನೆರೆ ಪರಿಹಾರದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿವೇಶನಗಳನ್ನು ನಿರ್ಮಿಸಿ ಕೊಡಬೇಕೆಂದು ಮೊಯ್ಲಿ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪಶ್ಚಿಮಘಟ್ಟ ಕಣ್ಮರೆಯಾಗಿ ಹಲವಾರು ಗ್ರಾಮಗಳು ಕಣ್ಮರೆಯಾಗಿದೆ .ಡಂಪಿಂಗ್ ಯಾಡ್ಽ ಕೂಡ ಕುಸಿದು ಪ್ರವಾಹದಲ್ಲಿ ಸೇರಿಕೊಂಡಿದೆ.ಈ ಬಗ್ಗೆ ಎಲ್ಲ ವರದಿಗಳನ್ನು ತಯಾರಿಸಲು ತಜ್ಞರ ಸಮಿತಿಯನ್ನು ತಕ್ಷಣ ನೇಮಿಸಬೇಕು ಮನೆ ಕಳೆದುಕೊಂಡವರಿಗೆ ಕೇವಲ ಸಾಂತ್ವನ ಮಾತ್ರ ನೀಡದೇ ಕರ್ನಾಟಕದಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ .ಅವಿಭಜಿತ ಜಿಲ್ಲೆಯು ರಾಷ್ಟ್ರೀಕೃತ ಬ್ಯಾಂಕುಗಳ ತೊಟ್ಟಿಲು , ಇದನ್ನು ರಾತ್ರೋರಾತ್ರಿ ಆಲೋಚನೆ ಮಾಡಿ ಮರುದಿನ ಘೋಷಿಸುತ್ತಾರೆ ಬೇರೊಂದು ಬ್ಯಾಂಕಿನೊಂದಿಗೆ ವಿಲೀನ ಮಾಡಲಾಗಿದೆ ಎಂದು .
ಈ ಬಗ್ಗೆ ಸಂಸತ್ತಿನಲ್ಲಿ ಆಗಲಿ ವಿತ್ತ ಸಚಿವಾಲಯದಲ್ಲಿ ಚರ್ಚೆ ಮಾಡಲಿಲ್ಲ. ಅವರ ವಿಫಲತೆಯನ್ನು ತೋರಿಸಲು ಈ ರೀತಿ ವಿಲೀನ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ .ಇವರ ಈ ರೀತಿಯ ವರ್ತನೆಯನ್ನು ನೋಡುವಾಗ ದೇಶದಲ್ಲಿ ವಿರೋಧ ಪಕ್ಷವನ್ನು ಹತ್ತಿಕ್ಕಲು ಪ್ರಯತ್ನ ಮಾಡುವ ಎಲ್ಲಾ ಹುನ್ನಾರ ಕಾಣುತ್ತಿದೆ .ಸರ್ಕಾರದ ವಿರುದ್ಧ ಮಾತನಾಡಿದವರಿಗೆ ಐಟಿ, ಇಡಿ ಎಂದು ಹೆದರಿಸುತ್ತಾರೆ ಈಗಾಗಲೇ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ , ಕೇಂದ್ರದ ಮಾಜಿ ಸಚಿವ ಚಿದಂಬರ್ ಗೆ ಇದೇ ರೀತಿ ಬೆದರಿಸುವ ತಂತ್ರ ರೂಪಿಸುತ್ತಿದ್ದಾರೆ .ಅವರ ಪಕ್ಷಕ್ಕೆ ಬಂದರೆ ಯಾವುದೇ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವರು ಮಾಜಿ ಶಾಸಕ ಯುಆರ್ ಸಭಾಪತಿ, ವಿನಯ್ ಕುಮಾರ್ ಸೊರಕೆ , ಎಂಎ ಗಫೂರ್ ,ಹರ್ಷ ಮೊಯ್ಲಿ ಉಪಸ್ಥಿತರಿದ್ದರು .