ಪರ್ಯಾಯಕ್ಕೆ ಕ್ಷಣಗಣನೆ: ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಉಡುಪಿ
ಉಡುಪಿ- ಕನಕದಾಸನ ಭಕ್ತಿಗೆ ಒಲಿದ ಆಪತ್ಬಂದವ ಭಕ್ತವತ್ಸಲನ ನೆಲೆವೀಡು ಉಡುಪಿ . ಪಡುವಣದಿ ಕಡಲಿನಲ್ಲಿ ಮಧ್ವಚಾರ್ಯರ ಬೊಗಸೆಯಲ್ಲಿ ತುಂಬಿದ ಪರಮಾತ್ಮನ , ಪೂಜಿಸುವ ಭಾಗ್ಯ ಅಷ್ಟ ಮಠಾಧೀಶರಿಗೆ ಸರದಿಯಂತೆ ಎರಡು ವರ್ಷಗಳಿಗೊಮ್ಮೆ ಒಲಿಯುತ್ತದ್ದೆ.
ಜನವರಿ 17 ಹಾಗು 18 ರಂದು ನಡೆಯುವ ಪರ್ಯಾಯಕ್ಕೆ ಪೊಡವಿಗೊಡೆಯನ ಊರು ಸಿದ್ದಗೊಂಡಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ . ಕಿನ್ನಿಮೂಲ್ಕಿಯಿಂದ ಜೋಡುಕಟ್ಟೆ ,ಕೋರ್ಟ್ ರೋಡ್, ರಥಬೀದಿ , ಕೆ ಎಂ ಮಾರ್ಗ . ಹೆಡ್ ಪೋಸ್ಟ್ ಆಫೀಸ್, ವಿಶ್ವೇಶ ತೀರ್ಥ ರಸ್ತೆ, ಕನಕದಾಸ ರಸ್ತೆ, ಕೃಷ್ಣ ಮಠ ಪಾರ್ಕಿಂಗ್ ಜಾಗ ಮುಂತಾದ ಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪ ಕಣ್ಣು ಕೋರೈಸುವಂತಿದೆ.
ಅದಮಾರು ಮಠದ ಪರ್ಯಾಯಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಕೃಷ್ಣನಿಗಾಗಿ ಚಡಪಡಿಸುವ ಗೋಪಿಕೆಯರಂತೆ ಕೃಷ್ಣನೂರಿನ ಭಕ್ತರು ಪರ್ಯಾಯವನ್ನ ಎದುರುನೋಡಿತ್ತಿದ್ದರೇನೋ ಎಂಬಂತೆ ಬಾಸವಾಗುತ್ತಿದ್ದೆ.
ಭಕ್ತರನ್ನ ಸ್ವಾಗತಿಸಲು ಎದ್ದು ನಿಂತಿರುವ ಭವ್ಯ ಕಮಾನುಗಳು ಜನರನ್ನ ತನ್ನತ್ತ ಸೆಳೆಯುತ್ತಿದ್ದೆ. ಅದಮಾರು ಮಠದ ಗುರು ಪರಂಪರೆಯನ್ನು ಸ್ಮರಿಸಲು ಮಠದ 32 ಯತಿಗಳ ಹೆಸರನ್ನು 32 ಮಂಟಪಗಳಲ್ಲಿ ಅಚ್ಚೊತ್ತಲಾಗಿದೆ. ನಗರದ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ 42 ದೊಡ್ಡ ಹಾಗೂ ಸಣ್ಣ ಕಮಾನುಗಳನ್ನು ಶ್ರೀ ಕೃಷ್ಣಸೇವಾ ಬಳಗ ನಿರ್ಮಿಸಿದೆ.
ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಪರಿಸರ ಕಾಳಜಿಗೆ ಒತ್ತು ನೀಡಲಾಗಿದ್ದು, ಗೋಪುರ ಹಾಗೂ ಕಮಾನುಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ ಮಾಡಿಲ್ಲ. ಬದಲಿಗೆ ಬಟ್ಟೆಯ ಬ್ಯಾನರ್‌ಗಳು ಹಾಗೂ ಮರದ ಉಪಕರಣಗಳನ್ನು ಬಳಸಲಾಗಿದೆ. ಕರಾವಳಿಯ ಸಂಸ್ಕೃತಿ, ಜಾನಪದ ಸೊಗಡು ಹಾಗೂ ತುಳುನಾಡ ಕಲಾ ಶ್ರೀಮಂತಿಕೆಯನ್ನು ಗೋಪುರಗಳ ಮೇಲೆ ಸುಂದರವಾಗಿ ಚಿತ್ರಿಸಲಾಗಿದೆ. ಮನೆಯಲ್ಲಿ ದಿನನಿತ್ಯ ಉಪಯೋಗಿಸುವವ ವಸ್ತುಗಳಿಂದ ಅದ್ಭುತವಾಗಿ ಕಮಾನುಗಳನ್ನು ರಚಿಸಲಾಗಿದೆ
. ವಿಶೇಷ ಆಕರ್ಷಣೆ ಎಂಬಂತೆ ರಥಬೀದಿಯಿಂದ ಜೋಡುಕಟ್ಟೆಯವರೆಗೂ ಈ ಬಾರಿ 800 ಗೂಡುದೀಪಗಳನ್ನು ತೂಗು ಹಾಕಲಾಗಿದೆ . ಗೂಡುದೀಪಗಳ ಅಳವಡಿಕೆಯಾಗಿದೆ ಇದನ್ನು ನೋಡುವುದೇ ಕಣ್ಣಿಗೆ ಹಬ್ಬ.