ವಿದೇಶಗಳಲ್ಲಿ 276 ಭಾರತೀಯರಲ್ಲಿ ಕೊರೋನಾ ವೈರಸ್ ಸೋಂಕು ದೃಢ
ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಸೋಂಕು ವಿದೇಶದಲ್ಲಿರುವ 276 ಭಾರತೀಯರಿಗೆ ತಲುಗಿಲಿದೆ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇರಾನ್ ನಲ್ಲಿ 255 ಮತ್ತು ಯುಎಇನಲ್ಲಿ 12, ಇಟಲಿಯಲ್ಲಿ 5, ಕುವೈತ್, ಹಾಂಕಾಂಗ್, ಮತ್ತು ಶ್ರೀಲಂಕಾದಲ್ಲಿ ತಲಾ ಒಬ್ಬರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ರಾಜ್ಯ ಖಾತೆ ಸಚಿವ ವಿ. ಮುರಳೀಧರ ಸಂಸತ್ತಿಗೆ ಲಿಖಿತ ಉತ್ತರ ನೀಡಿದ್ದಾರೆ.
ಯುಎಇನಲ್ಲಿ 8 ಹಾಗೂ ಕುವೈತ್ ನಲ್ಲಿ ಒಬ್ಬರಿ ಭಾರತೀಯರಿಗೆ ಕೊರೋನಾ ಶಂಕೆ ಇದೆ. ಅವರನ್ನು ಪ್ರತ್ಯೇಕವಾಗಿ ಇರಿಸಿ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅರಬ್ ದೇಶಗಳಲ್ಲೇ 6 ಸಾವಿರ ಭಾರತೀಯರು ಕೊರೋನಾ ಕಾರಣ ತಡೆ ಹಿಡಿಯಲ್ಪಟ್ಟಿದ್ದಾರೆ. ಇವರಲ್ಲಿ ಇರಾನ್ ನಲ್ಲಿ ಸಿಲುಕಿರುವ ಮೀನುಗಾರರೂ ಇದ್ದಾರೆ. ಅವರಿಗೆ ಭಾರತಕ್ಕೆ ಮರಳಲು ಆಗುತ್ತಿಲ್ಲ. ಇವರು ಸುರಕ್ಷಿತವಾಗಿ ದೇಶಕ್ಕೆ ಮರಳಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಅಲ್ಲಿನ ಭಾರತೀಯ ದೂತವಾಸಗಳು ಮೀನುಗಾರರು ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲಾ ಭಾರತೀಯರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.