ಮಂಗಳೂರು: ಇಬ್ಬರಲ್ಲಿ ಕೊರೋನಾ ಸೋಂಕು ಪಾಸಿಟಿವ್
ಮಂಗಳೂರು: ಜಿಲ್ಲೆಯಲ್ಲಿ ಇಂದು ಇಬ್ಬರಲ್ಲಿ ಕೊರೋನಾ ಸೋಂಕು ದೃಡಪಟ್ಟಿದೆ.
31 ವರ್ಷದ ಜಪ್ಪಿನಮೊಗರು ಯುವಕ ಸ್ವಯಂ ತನಗೆ ಕೊರೊನಾ ಇದೆಯೇ ಎಂಬ ಸಂಶಯದಲ್ಲಿ ಪರೀಕ್ಷೆಗೆ ಬಂದಿದ್ದ ಇದೀಗ ಸೋಂಕು ದೃಡಪಟ್ಟಿದೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನೊಂದು ಪ್ರಕರಣದಲ್ಲಿ ಯೆಯ್ಯಾಡಿ 35 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಮಹಿಳೆಯ ಪತಿ, ಮಗು ಕೂಡ ಕ್ವಾರಂಟೈನ್‌ನಲ್ಲಿದ್ದಾರೆ. ಇವರು ಮೇ14 ರಂದು ಮುಂಬೈನಿಂದ ಮಂಗಳೂರಿಗೆ ಬಂದಿದ್ದರು.
ಬೆಂಗಳೂರು: ಕೊರೊನಾ ವೈರಸ್ ಸೋಂಕಿಗೆ ರಾಜ್ಯದ ವಿವಿಧೆಡೆ ಮೇ 16ರ ಸಂಜೆ 5ರಿಂದ ಮೇ 17ರ ಮಧ್ಯಾಹ್ನ 12ರ ಅವಧಿಯಲ್ಲಿ ಒಟ್ಟು 54 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1146ಕ್ಕೆ ಮುಟ್ಟಿದೆ. ಈವರೆಗೆ 37 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮಂಡ್ಯ ಜಿಲ್ಲೆಯ 21 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಮಂಡ್ಯದಲ್ಲಿ 21, ಕಲಬುರ್ಗಿ 10, ಹಾಸನ 6, ಯಾದಗಿರಿ 3, ಕೋಲಾರದಲ್ಲಿ 3, ದಕ್ಷಿಣ ಕನ್ನಡದಲ್ಲಿ 2, ಧಾರವಾಡ 2, ಶಿವಮೊಗ್ಗ 2, ಧಾರವಾಡ 2, ವಿಜಯಪುರ 1, ಪ್ರಕರಣಗಳು ಖಚಿತವಾಗಿವೆ.
ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 21 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಇವರೆಲ್ಲರೂ ಮುಂಬೈ ವಲಸಿಗರು