ಕರೋನಾ ವೈರಸ್: ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಮೊರೆ ಹೋದ ಭಕ್ತರು
ಕೋಟ: ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಸಂಕ್ರಾತಿ ಪೂಜೆಯ ಅಂಗವಾಗಿ ಪ್ರಸ್ತುತ ವಿಶ್ವ ವ್ಯಾಪಿ ಹರಡಿರುವ ಕರೋನಾ ಖಾಯಿಲೆಯ ವಿರುದ್ಧವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಳದಲ್ಲಿ ಪ್ರತಿ ಸಂಕ್ರಾಂತಿಗೆ ವಿಶೇಷವಾದ ದರ್ಶನ ಸೇವೆ ನಡೆಯುವ ಹಿನ್ನಲೆಯಲ್ಲಿ ದೂರದ ಊರಿನಿಂದ ತನ್ನ ಕಷ್ಟ ಕರ್ಪಾಣ್ಯಗಳನ್ನು ಶ್ರೀದೇವರಲ್ಲಿ ಪ್ರಾರ್ಥಿಸುವ ಸಲುವಾಗಿ ಭಕ್ತರು ಭೇಟಿ ನೀಡುತ್ತಾರೆ. ಅಂತಯೇ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ವಿಶ್ವವ್ಯಾಪಿ ಹರಡಿದ ಕರೋನಾ ಕಾಯಿಲೆಗೆ ಅದೆಷ್ಟೊ ಜನರನ್ನು ಬಲಿ ತೆಗೆದುಕೊಂಡಿದೆ.
ಇದಕ್ಕೆ ಮುಕ್ತಿಗಾಣಿಸು ಎಂದು ಪ್ರಾರ್ಥಿಸಿದ್ರು. ಪ್ರಾರ್ಥನೆಗೆ ಉತ್ತರಿಸಿದ ದೇವಿಯು ಈಗಾಗಲೇ ಭಕ್ತಿ ಎಂಬುವುದು ಭಕ್ತರಲಿ ಕ್ಷೀಣಿಸತೋಡಗಿದೆ ಭಕ್ತಿಯೊಂದಿದ್ದರೆ ಆ ಭೂಭಾಗದಲ್ಲಿ ಯಾವುದೇ ತರಹದ ಕಾಯಿಲೆಗಳು ಸುಳಿದಾಡಲು ಸಾಧ್ಯವಿಲ್ಲ ಆದರೂ ಭಕ್ತಿಯ ಸಂಸ್ಕಾರದ ಭಾವನೆಯನ್ನು ಮತಷ್ಟು ಗಟ್ಟಿಗೊಳಿಸಲು ಆಗಾಗ ಮೈತೆಳೆವುದುಂಟು ಅದೇ ರೀತಿ ಈ ಕಾಯಿಲೆಯನ್ನು ಶೀಘ್ರಗತಿಯಲ್ಲಿ ಪರಿಹಾರ ಕಂಡುಕೊಳ್ಳಲಿದೆ ತನ್ನ ಭೂ ಭಾಗವಾದ ಹದಿನಾಲ್ಕು ಗ್ರಾಮಗಳಲ್ಲಿ ಇದರ ಲಕ್ಷಣಗಳು ಕಾಣಲು ಸಾಧ್ಯವಿಲ್ಲ ಆ ರೀತಿ ಅನುಗ್ರಹಿಸುತ್ತೇನೆ ಎಂದು ನುಡಿ ನೀಡಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ನಡೆದ ವಿಶೇಷ ಪೂಜೆಯಲ್ಲಿ, ದೇವಸ್ಥಾನದ ಆಡಳಿತ ಮಂಡಳಿಯವರು, ಊರ ಹಿರಿಯರು ಮತ್ತು ಭಕ್ತರು ಉಪಸ್ಥಿತರಿದ್ದರು.