ಕಾಲೇಜ್ ವಿದ್ಯಾರ್ಥಿನಿಗೆ ಕೊರೋನ ಪಾಸಿಟಿವ್, ಉಡುಪಿ ಜನತೆ ಆತಂಕಕ್ಕೊಳಗಾಗ ಬೇಕಾಗಿಲ್ಲ: ಡಿಸಿ ಜಗದೀಶ್

ಉಡುಪಿ: ಮಾರ್ಚ್ ಎರಡನೇ ವಾರದಲ್ಲಿ ಉಡುಪಿ ಜಿಲ್ಲೆಯಿಂದ ತಮ್ಮ ಹುಟ್ಟೂರಾದ ಬಾದಾಮಿಗೆ ತೆರಳಿದ ಕಾಲೇಜ್ ವಿದ್ಯಾರ್ಥಿನಿಗೆ ಇಂದು ಕೊರೋನ ಪಾಸಿಟಿವ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಸಂಪರ್ಕಿಸಿದಾಗ, ಈ ಯುವತಿ ಮಾರ್ಚ್‌ ಎರಡನೇ ವಾರದಲ್ಲಿ ಉಡುಪಿಯಿಂದ ಅಲ್ಲಿಗೆ ತೆರಳಿರುವುದಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಮಾಹಿತಿ ನೀಡಿದ್ದು, ಹೀಗಾಗಿ ಆಕೆಯ ಕೊರೋನ ಪಾಸಿಟಿವ್‌ನಲ್ಲಿ ಉಡುಪಿಯ ಯಾವುದೇ ಸಂಪರ್ಕ ಹೊಂದಿರುವ ಸಾಧ್ಯತೆ ಇಲ್ಲ. ಆದುದರಿಂದ ಉಡುಪಿ ಜಿಲ್ಲೆಯ ಜನತೆ ಈ ಬಗ್ಗೆ ಯಾವುದೇ ರೀತಿ ಆತಂಕಕ್ಕೊಳಗಾಗಬೇಕಾಗಿಲ್ಲ ಎಂದು ಹೇಳಿದರು.


ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಓದುತ್ತಿರುವ ಈ ಯುವತಿ ಕಾಲೇಜಿಗೆ ರಜೆ ನೀಡಿದ ಕಾರಣ ಮಾರ್ಚ್ 14ರಂದು ಬಾದಾಮಿಗೆ ತೆರಳಿದ್ದರು. ಅಲ್ಲಿ ಮೇ 2ರಂದು ಕೊರೋನ ಪಾಸಿಟಿವ್ ಬಂದ 23ರ ಹರೆಯದ ಗರ್ಭಿಣಿಯ ಸಂಪರ್ಕಕ್ಕೆ ಮೊದಲೇ ಬಂದಿದ್ದ ಈ ಯುವತಿ, ಇಂದು ಪಾಸಿಟಿವ್ ಆಗಿದ್ದಾರೆ. ಬಾದಾಮಿಯಲ್ಲಿ ಇಂದು ಕಂಡುಬಂದ ಒಟ್ಟು 13 ಪಾಸಿಟಿವ್ ಪ್ರಕರಣಗಳಲ್ಲಿ 12 ಮಂದಿ ಈ ಗರ್ಭಿಣಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಓದುತ್ತಿರುವ ಈ ಕಾಲೇಜಿಗೆ ರಜೆ ನೀಡಿದ ಕಾರಣ ಮಾರ್ಚ್ 14ರಂದು ಬಾದಾಮಿಗೆ ತೆರಳಿದ್ದರು.

ಅಲ್ಲಿ ಮೇ 2ರಂದು ಕೊರೋನ ಪಾಸಿಟಿವ್ ಬಂದ 23ರ ಹರೆಯದ ಗರ್ಭಿಣಿಯ ಸಂಪರ್ಕಕ್ಕೆ ಮೊದಲೇ ಬಂದಿದ್ದ ಈ ಯುವತಿ, ಇಂದು ಪಾಸಿಟಿವ್ ಆಗಿದ್ದಾರೆ. ಬಾದಾಮಿಯಲ್ಲಿ ಇಂದು ಕಂಡುಬಂದ ಒಟ್ಟು 13 ಪಾಸಿಟಿವ್ ಪ್ರಕರಣಗಳಲ್ಲಿ 12 ಮಂದಿ ಈ ಗರ್ಭಿಣಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.


Leave a Reply

Your email address will not be published. Required fields are marked *

error: Content is protected !!