ಕೋಟ: ಕರೋನಾ ಹೊಡೆತಕ್ಕೆ ಕಲ್ಲಂಗಡಿ ಬೆಲೆ ಪಾತಾಳಕ್ಕೆ, ರೈತ ಕಂಗಾಲು!
ಉಡುಪಿ: ವಿಶ್ವದಾದ್ಯಂತ ಜನರಲ್ಲಿ ಸಾಕಷ್ಟು ಭಯ ಹುಟ್ಟಿಸಿ ಸಾವು ನೋವಿಗೆ ಕಾರಣವಾಗಿರುವ ಕರೋನಾ ವೈರಸ್ ಈಗ ಕೃಷಿ ಕ್ಷೇತ್ರದ ಮೇಲು ತನ್ನ ಪರಿಣಾಮ ಬೀರಿದೆ.
ಕರೋನಾ ವೈರಸ್ ಭೀತಿ ಮತ್ತು ಕರೋನಾ ಸೋಂಕು ಹರಡದಂತೆ ರಾಜ್ಯದಲ್ಲಿ ಮುಂಜಾಗ್ರಾತ ಕ್ರಮವಾಗಿ ಒಂದು ವಾರ ಬಂದ್ ಘೋಷಿಸಿದ ಪರಿಣಾಮ ಕಲ್ಲಂಗಡಿ ಹಣ್ಣಿನ ಮೇಲೆ ಪಾತಾಳಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳ ಕಲ್ಲಂಗಡಿ ಹಣ್ಣಿನ ದರಕ್ಕೆ ಹೋಲಿಸಿದರೆ ಈ ವರ್ಷ ಅದರ ಅರ್ಧದಷ್ಟು ಕೂಡ ಬೆಲೆ ಇಲ್ಲದೆ ಇರುವುದು ಕಲ್ಲಂಗಡಿ ಕೃಷಿಕರಿಗೆ ಆತಂಕ ಹೆಚ್ಚು ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಕೆಜಿಯೊಂದಕ್ಕೆ 16 ರೂಪಾಯಿ ದರದಲ್ಲಿ ಕೃಷಿಕರಿಂದ ಕಲ್ಲಂಗಡಿ ಖರೀದಿಯಾಗುತ್ತಿತ್ತು. ಆದರೆ ಕರೋನಾ ಎಫೆಕ್ಟ್‌ನಿಂದಾಗಿ ಕಲ್ಲಂಗಡಿಯ ಸದ್ಯ 7,6, 5 ರೂಪಾಯಿ ಕಿಲೋ ದರದಲ್ಲಿ ಕೃಷಿಕರಿಂದ ಖರೀದಿಸಲಾಗುತ್ತಿದೆ. ಈ ಬೇಸಿಗೆ ಸಮಯದಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ಹಣ್ಣು ಕಲ್ಲಂಗಡಿ ಹಣ್ಣು ಕೂಡ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಮೊದಲ ಕಟಾವುನಲ್ಲಿ ಕೊಂಡು ಹೋದ ಹಣ್ಣುಗಳು ಖಾಲಿಯಾಗಿಲ್ಲ ಎನ್ನುತ್ತಾರೆ ರಖಂ ಖರೀದಿದಾರರು.
ಈಗ ಬೆಳೆದು ಕಟಾವುಗೆ ತಯಾರಾದ ಕಲ್ಲಂಗಡಿ ಗದ್ದೆಯಲ್ಲಿ ಉಳಿದಿದೆ. ಈ ವರ್ಷ ಉತ್ತಮ ಫಲಸು ಬಂದರು ಕೂಡ ಮಾರುಕಟ್ಟೆಯಲ್ಲಿ ಕರೋನಾ ಭೀತಿಯಿಂದಾಗಿ ಕಲ್ಲಂಗಡಿಯ ಮಾರಾಟದ ಸಮಸ್ಯೆಯಾಗಿದೆ. ಸದ್ಯ ಕೇರಳಕ್ಕೆ ಕೋಟದ ಪ್ರಗತಿಪರ ಕೃಷಿಕ ಭೋಜ ಪೂಜಾರಿ ಕಲ್ಲಂಗಡಿ ಮಾರಾಟ ಮಾಡಿದ್ದಾರೆ, ಆದರೆ ಎರಡನೇ ಕಟಾವು ಕೇಳುವವರಿಲ್ಲದಂತಾಗಿದೆ ಎನ್ನುತ್ತ ತಲೆಯ ಮೇಲೆ ಕೈ ಹಿಡಿದು ಹೇಳುವ ಸ್ಥಿತಿ ನೋಡ ತೀರದು.