ಬಾಲಿವುಡ್ ನ ಪ್ರಸಿದ್ಧ ಗಾಯಕಿ ಕನ್ನಿಕಾ ಕಪೂರ್ ಗೆ ಕೊರೊನಾ ವೈರಸ್ ಸೋಂಕು

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶುಕ್ರವಾರ ನಾಲ್ಕು ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬಾಲಿವುಡ್‍ನ ಪ್ರಸಿದ್ಧ ಗಾಯಕಿ ಕನ್ನಿಕಾ ಕಪೂರ್ ಕೂಡ ಇದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಗಾಯಕಿ ಕನ್ನಿಕಾ ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಿಕಾ ಮಾರ್ಚ್ 15ರಂದು ಲಂಡನ್‍ನಿಂದ ಲಕ್ನೋಗೆ ಮರಳಿದ್ದರು. ಬಳಿಕ ಅವರು ಅಪಾರ್ಟ್ ಮೆಂಟ್‍ನಲ್ಲಿ ಉಳಿದುಕೊಂಡು, ಹೋಟೆಲ್‍ವೊಂದರಲ್ಲಿ ಪಾರ್ಟಿ ನೀಡಿದ್ದರು. ಈ ಪಾರ್ಟಿಯಲ್ಲಿ ಸುಮಾರು 500 ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ. 

Leave a Reply

Your email address will not be published. Required fields are marked *

error: Content is protected !!