ಕೊರೋನಾ: ಲಸಿಕೆ ಸಂಶೋಧನೆ ಯಶಸ್ವಿ ಹಂತ ತಲುಪಿದೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಜಗತ್ತಿನ ಎಲ್ಲ ದೇಶಗಳು ಭಯದಿಂದ ಬೊಬ್ಬೆ ಹೊಡೆಯುವಂತೆ ಮಾಡಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ವಿಶ್ವದ ಎಲ್ಲ ದೇಶಗಳ ಮುಖ್ಯಸ್ಥರು ಕೈಜೋಡಿಸುತ್ತಿದ್ದಾರೆ. ಕೊರೊನಾ ವೈರಸ್ ಮಹಾಮಾರಿಗೆ ಔಷಧಿ ಕಂಡುಹಿಡಿಯುವ ಪ್ರಯತ್ನ ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ಜಗತ್ತಿನ ಜನರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಹ ಸುದ್ದಿಯೊಂದನ್ನು ಅಮೆರಿಕಾ ನೀಡಿದೆ
ಕೊರೊನಾ ವೈರಸ್ ಗೆ ಪ್ರತಿರೋಧ ಒಡ್ಡುವಂತಹ ಲಸಿಕೆಯೊಂದರ ಸಂಶೋಧನಾ ಪ್ರಕ್ರಿಯೆ ಬಹುತೇಕ ಯಶಸ್ವಿ ಹಂತ ತಲುಪಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ
ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಸಂಯೋಜನೆಯೊಂದಿಗೆ ಅಮೆರಿಕಾ ವಿಜ್ಞಾನಿಗಳು ರೂಪಿಸಿರುವ ಈ ಲಸಿಕೆಗೆ ಕೊರೊನೊ ವೈರಸ್ ನಿಗ್ರಹಿಸುವ ಸಾಧ್ಯತೆಯಿದೆ ಹೇಳಿದ್ದಾರೆ. ಈ ಮಾರಕ ವೈರಸ್ ಜಗತ್ತಿನಿಂದ ಕೊನೆಗಾಣಿಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು ತಜ್ಞ ವೈದ್ಯರು ಖಚಿತಪಡಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ
ಈ ಪ್ರಯೋಗ ಯಶಸ್ವಿಯಾದರೆ ಜಾಗತಿಕ ವೈದ್ಯಕೀಯ ಇತಿಹಾಸದಲ್ಲಿ ಒಂದು ಅದ್ಭುತ ಸಂಶೋಧನೆಯಾಗಲಿದ್ದು ಮಹತ್ವದ ತಿರುವು ಪಡೆದುಕೊಳ್ಳಲಿದೆ ಎಂದು ಟ್ವೀಟರ್ ನಲ್ಲಿ ಪ್ರಕಟಿಸಿದ್ದಾರೆ.