ದುಬೈನಿಂದ ಬಂದ ಗರ್ಭಿಣಿಗೆ ಶಂಕಿತ ಕೊರೊನ: ಕೆಎಂಸಿಗೆ ದಾಖಲು

ಮಣಿಪಾಲ: ದುಬೈನಿಂದ ಬಂದ ಗರ್ಭಿಣಿಯೊರ್ವರಿಗೆ ಶಂಕಿತ ಕೊರೊನಾ ಹರಡಿರುವ ಸಂಶಯದಲ್ಲಿ ಕೆ.ಎಂ. ಸಿ. ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿ ಆಗಿದೆ.


ದುಬೈನಿಂದ ಮರಳಿದ 26 ವರ್ಷದ ಗರ್ಭಿಣಿಯೊರ್ವಳು ಮಾಚ್ 13 ರಂದು ದುಬೈನಿಂದ ಉಡುಪಿಗೆ ಬಂದಿದ್ದರು. ಅವರು ಇತ್ತೀಚೆಗೆ ಗಂಟಲು, ಶೀತದಿಂದ ಬಳಲುತ್ತಿದ್ದು, ಶಂಕಿತ ಕೊರೊನಾ ಹರಡಿರುವ ಸಾಧ್ಯತೆಯಲ್ಲಿ ಕೆ. ಎಂ.ಸಿ ಆಸ್ಪತ್ರೆಯ ವಿಶೇಷ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಂದು ಉಡುಪಿ ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ.

ಶಂಕಿತರ ರಕ್ತ, ಗಂಟಲಿನ ದ್ರವವನ್ನು ಶಿವಮೊಗ್ಗಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!