ಕೃಷಿಗೂ ತಟ್ಟಿದ ಕೊರೋನಾ ಎಮರ್ಜೆನ್ಸಿ ಬಿಸಿ ;ಗದ್ದೆಯಲ್ಲಿಯೇ ಉಳಿದ ರೈತನ ಬೆಳೆ
ಬ್ರಹ್ಮಾವರ ( ಉಡುಪಿ ಟೈಮ್ಸ್ ವರದಿ )- ಕೈ ಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಗಾದೆಗೆ ಇವರ ಸ್ಥಿತಿಯೇ ಉದಾರಣೆ ಜಿಲ್ಲೆಯಲ್ಲಿ ಕೊರೋನಾ ಎಮರ್ಜೆನ್ಸಿ ಹಿನ್ನಲೆಯಲ್ಲಿ ಹಾಕಲಾಗಿರುವ ಲಾಕ್ ಡೌನ್ ಈಗ ಕೃಷಿಗೂ ತಟ್ಟಿದೆ. ಬ್ರಹ್ಮಾವರ ತಾಲೂಕು ಬಾರ್ಕೂರು ಹನೆಹಳ್ಳಿ ಪಂಚಾಯತ್ ವ್ಯಾಪ್ತಿಯ ಬಂಡಿಮಠದಲ್ಲಿ ಕೃಷಿರೋರರ್ವರು ಬೆಳೆದ ಸದ್ಯ ಕೊರೋನಾ ಪಾಲಾಗಿದೆ. ಕೃಷಿಕ ಮಂಜುನಾಥ ಪೂಜಾರಿ ಕಷ್ಟಪಟ್ಟು ಬಾವಿಯ ನೀರು ಬಳಸಿ ಸುಮಾರು 4 ಎಕರೆ ಭೂಮಿಯಲ್ಲಿ ಭತ್ತ ಬೆಳೆದಿದ್ದರು.
ಈ ಬಾರಿ ಭತ್ತ ಫಸಲು ಉತ್ತಮವಾಗಿ ಬಂದಿದೆ. ಆದರೆ ಕೊರೋನಾ ಸಾಂಕ್ರಾಮಿಕ ವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹಾಕಲಾದ ಲಾಕ್ ಡೌನ್ ನಿಂದಾಗಿ ಬೆಳೆದ ಭತ್ತ ಗದ್ದೆಯಲ್ಲಿ ಉಳಿಯುವ ಹಾಗೆ ಆಗಿದೆ. ಭತ್ತ ಕಟಾವಿಗೆ ಕೂಲಿ ಆಳುಗಳು ಬರಲು ಒಪ್ಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸ್ವಸಹಾಯದ ಸಂಘದ ಕಟಾವು ಯಂತ್ರಕ್ಕಾಗಿ ಕೃಷಿಕ ಮಂಜುನಾಥ್ ಕರೆ ಮಾಡಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕೊರೋನಾ ಇದೆ ಯಾವುದೇ ವಾಹನಗಳು ಹೊರಗೆ ಹೋಗುವಂತಿಲ್ಲಾ ಎನ್ನುವ ಸಬೂಬು ಹೇಳಿ ಕರೆ ಕಟ್ ಮಾಡುತ್ತಿದ್ದಾರೆ ಎನ್ನುತ್ತಾರೆ ಮಂಜುನಾಥ್. ಸದ್ಯ ಸಮಸ್ಯೆಯ ಬಗ್ಗೆ ಸ್ಥಳೀಯ ಪಂಚಾಯತ್ ಮೊರೆ ಹೋಗಿರುವ ಮಂಜುನಾಥ್ ಗೆ ಯಾವುದೇ ಪ್ರಯೋಜನವಾಗಿಲ್ಲ. ಬೆಳೆದ ಬೆಳೆ ಕಳೆದ 15 ದಿನಗಳಿಂದ ಗದ್ದೆಯಲ್ಲಿ ಬಿದ್ದ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಳು ನನ್ನ ನೆರವಿಗೆ ಬರಬೇಕು ಎಂದು ಕೃಷಿಕ ಮಂಜುನಾಥ ಪ್ರಾರ್ಥಿಸುತ್ತಿದ್ದಾರೆ.