ಕೊರೋನಾ ಎಮರ್ಜೆನ್ಸಿ -ಪೇಜಾವರ ಮಠದ ವತಿಯಿಂದ ದಿನನಿತ್ಯದ ಸಾಮಗ್ರಿಗಳ ಕಿಟ್ ವಿತರಣೆ

ಉಡುಪಿ – ಕೊರೊನಾ ನಿರ್ಬಂಧದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಪೇಜಾವರ ಮಠದ ವತಿಯಿಂದ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥ ಶ್ರೀರಾಮ – ಕೃಷ್ಣ ದೇವರ ಪ್ರಸಾದ ರೂಪವಾಗಿ ಜೀವನ ನಿರ್ವಹಣೆಗೆ ಸಿದ್ಧಪಡಿಸಲಾದ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ದಿನನಿತ್ಯದ ಸಾಮಗ್ರಿಗಳ ಕಿಟ್ ಗಳ ವಿತರಣೆಯನ್ನ ಪೇಜಾವರ ಮಠದಿಂದ ಶುಕ್ರವಾರದಂದು ಶಾಸಕ ಕೆ ರಘುಪತಿ ಭಟ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಸುಬ್ರಹ್ಮಣ್ಯ ಭಟ್ , ಇಂದುಶೇಖರ್ , ಜಿ ವಾಸುದೇವ ಭಟ್ ಮಹೇಶ ಕುಲಕರ್ಣಿ‌ , ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು . ತಹಶೀಲ್ದಾರ್ ನಿರ್ದೇಶಾನುಸಾರ ಆಯಾ ಪ್ರದೇಶಗಳಿಗೆ ತೆರಳಿ ವಿತರಿಸಲಾಗುವುದು‌ .ಸುಮಾರು 500 ಕುಟುಂಬಗಳಿಗೆ ತಲಾ ಸುಮಾರು ಒಂದು ಸಾವಿರ ರೂ ಮೊತ್ತದ ಕಿಟ್ ವಿತರಿಸಲಾಗುತ್ತಿದ್ದೆ. ಈ ಕಿಟ್ ತಯಾರಿಸಲು ಜಿಲ್ಲಾಧಿಕಾರಿ ಜಗದೀಶ್ , ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ , ವಿಲೇಜ್ ಅಕೌಂಟೆಂಟ್ ಮಾರ್ಗದರ್ಶನ ಹಾಗು ಸಹಕಾರ ನೀಡಿದ್ದು ಈ ಕಿಟ್ ತಯಾರಿಸುವಲ್ಲಿ ರೋಹನ್ ಬಾರಿತ್ತಾಯ , ಪ್ರಣವ್ ಆಚಾರ್ಯ , ಪ್ರಶಾಂತ್ ಭಟ್ ಪೆರಂಪಳ್ಳಿ ,ಆಕಾಶ್ , ಡೆನಿಸ್ ಡಿ ಸೋಜ , ನರಸಿಂಹ , ಸುಧೀಂದ್ರ , ಬಾಲಕೃಷ್ಣ ಭಟ್ ,ರಾಘವೇಂದ್ರ ಭಟ್ , ಅನಿರುದ್ಧ ಭಟ್ , ನಾಗರಾಜ ಭಟ್ , ಶಶಾಂಕ್ ಶಿವತ್ತಾಯ , ಹಾಗೂ ಮಠದ ವಿದ್ಯಾರ್ಥಿಗಳು , ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!