ಇಸ್ಲಾಂ ಧರ್ಮಕ್ಕೆ ಮತಾಂತರ ಒತ್ತಾಯ: ಆರೋಪಿಗಳ ಬಂಧನಕ್ಕೆ ಆಗ್ರಹ
ಉಡುಪಿ: ಕಾಸರಗೋಡು ಮೊಗ್ರಾಲ್ ನಲ್ಲಿ ಯುವತಿ ಯನ್ನು ನಂಬಿಸಿ ಪಾನಿಯಾದಲ್ಲಿ ಮತ್ತು ಬರಿಸಿ ಅತ್ಯಾಚಾರ ನಡೆಸಿದಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವಂತೆ ಬೆದರಿಕೆ ಹಾಕಿದ ಆರೋಪಿಗಳನ್ನು ಕಠಿಣ ಕಾನೂನು ಮುಖಾಂತರ ಬಂಧಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯ್ತು ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್,ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ,ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಶೆಟ್ಟಿ,ರಶ್ಮಿತಾ ಬಿ.ಶೆಟ್ಟಿ.ಲೀಲಾ ಆರ್ ಅಮೀನ್,ರಮಾ ಶೆಟ್ಟಿ,ಭಾರತಿ ಚಂದ್ರಶೇಖರ್,ರಜನಿ ಹೆಬ್ಬಾರ್,ಕೇಸರಿ ಯುವರಾಜ್,ಸುಮಾ ಶೆಟ್ಟಿ, ರಶ್ಮಿ ಭಟ್, ದಯಾಶಿನಿ,ರೋಹಿಣಿ,ಶಶಿಕಲಾ ಉಪಸ್ಥಿತರಿದ್ದರು.