ನಿರಂತರ ಮತಾಂತರ ನಡೆದರೆ ಗಲಭೆ ಸೃಷ್ಟಿಯಾಗಬಹುದು: ಶರಣ್ ಪಂಪ್‌ವೆಲ್ಎಚ್ಚರಿಕೆ
ಉಡುಪಿ: ಅವಿಭಜಿತ ಜಿಲ್ಲೆಗಳಲ್ಲಿ ವ್ಯವಸ್ಥಿತ ಮತಾಂತರ ನಡೆಯುತ್ತಿದ್ದು ರಾಜ್ಯ ಸರ್ಕಾರವು ಇದರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್ತು ಆಗ್ರಹಿಸಿದೆ.
ಹಿಂದೂಗಳ ಬಡತನ,ಮಾನಸಿಕ ,ವ್ಯಯಕ್ತಿಕ ಸಮಸ್ಯೆಗಳನ್ನು ಗುರುತಿಸಿ ಅಂತಹವರಿಗೆ ಸಹಾಯ ಮಾಡುವುದಾಗಿ ನಂಬಿಸಿ ಉಡುಪಿ, ದ.ಕ. ಜಿಲ್ಲೆಗಳಲ್ಲಿ ಮತಾಂತರ ಎಗ್ಗಿಲ್ಲದೆ ನಡೆಯುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು ,ಜಿಲ್ಲೆಯಲ್ಲಿ ಹಿಂದೂ ಕ್ರಿಶ್ಚನ್ ಜಾತಿ ಬೇಧವಿಲ್ಲದೆ ಶಾಂತಿಯಿಂದ ಜೀವನ ನಡೆಸುತ್ತಿದ್ದು ಇಂತಹ ಮತಾಂತರ ಘಟನೆಗಳು ಸಮಾಜದಲ್ಲಿ ಗಲಭೆ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ವಿಶ್ವಹಿಂದ್ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಉಡುಪಿ ಹೋಟೆಲ್ ಕಿದಿಯೂರ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ಮತಾಂತರ ನಡೆಯುವ ಮಾಹಿತಿ ಇದ್ದರೆ ಸ್ಥಳೀಯ ಪೊಲೀಸ್ ಠಾಣೆ ಅಥವಾ ನಮ್ಮ ಸಂಘಟನೆಗೆ ಮಾಹಿತಿ ನೀಡಬೇಕೆಂದು ಈ ಸಂದರ್ಭ ಹೇಳಿದರು.
ಮುಲ್ಕಿ ಡಿವೈನ್ ಕಾಲ್ ಸೆಂಟರ್‌ನಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ ವಿಡಿಯೋ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.
ಉಡುಪಿ ಉದ್ಯಾವರದ ರಿಕ್ಷಾ ಚಾಲಕ ಪ್ರದೀಪ್ ಈ ರೀತಿ ಮತಾಂತರ ಪಿತೂರಿಗೆ ಒಳಪಟ್ಟು, ಸೆಂಟರ್ ಪ್ರಾರ್ಥನಾ ಮಂದಿರದ ಧರ್ಮಗುರು ಅಬ್ರಹಾಂ ಮತ್ತು ಇತನನ್ನು ಪ್ರಾರ್ಥನ ಮಂದಿರಕ್ಕೆ ಕರೆದುಕೊಂಡು ಹೋದ ನೆರೆಮನೆಯ ನಿವೃತ್ತ ಶಿಕ್ಷಕಿ ಐರಿನ್ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಆದ್ದರಿಂದ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮುಲ್ಕಿಯ ಡಿವೈನ್ ಕಾಲ್ ಸೆಂಟರ್ ಮುಚ್ಚಲು ಕ್ರಮ ತೆಗೆದುಕೊಳ್ಳ ಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಗ್ರಹ ಮಾಡಿದೆ.
ಐರಿನ್ ಮತ್ತು ಡಿವೈನ್ ಕಾಲ್ ಸೆಂಟರ್ ಧರ್ಮಗುರು ಅಬ್ರಹಾಂ ಇತರ ಸದಸ್ಯರೊಡಗೂಡಿ ಪ್ರದೀಪ್‌ನನ್ನು ಬಲಾತ್ಕಾರದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಳಿಸಲು ಒತ್ತಾಯಿಸಿದ್ದು ಮಾನಸಿಕ ಹಿಂಸೆ ಹಾಗೂ ಹೆದರಿಸುವ ತಂತ್ರಗಾರಿಕೆಯಿಂದ ಪ್ರದೀಪ್ ಹಿಂದೂ ಧರ್ಮ ವಿರೋಧಿ ಹೇಳಿಕೆ ವೀಡಿಯೋ ರೆಕಾರ್ಡಿಂಗ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆಗೊಳಿಸಿದ್ದು ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿ ಮತಾಂತರ ಗೊಳಿಸಿದ ಪ್ರಯತ್ನ ನಡೆದಿರುವ ಬಗ್ಗೆಯೂ ವಂದಂತಿ ಇದೆ . ಇದು ಹಿಂದು ಮತ್ತು ಕ್ರೈಸ್ತ ಸಮಾಜದ ಭಾವೈಕ್ಯಕ್ಕೆ ತೊಂದರೆ ಮಾಡಿ ಸಮಾಜದಲ್ಲಿ ಪರಸ್ಪರ
ಧಾರ್ಮಿಕ ದ್ವೇಷ ಭಾವನೆ ಹುಟ್ಟಿಸುವಂತಿದೆ. ಮೇಲಿನ ಘಟನೆಗೆ ಸಂಬಂಧಿಸಿದಂತೆ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದಂತಹ ಐರಿನ್, ಅಬ್ರಹಾಂ ಹಾಗೂ ಸಹಚರರನ್ನು ತಕ್ಷಣ ಬಂಧಿಸಬೇಕು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವು ಸಂಸ್ಥೆಗಳು ಪ್ರಾರ್ಥನಾ ಮಂದಿರ ಹೆಸರಲ್ಲಿ ಹಿಂದೂಗಳ ಬಲಾತ್ಕಾರ ,ಮತಾಂತರ ಮಾಡುತ್ತಿದ್ದು ಈ ಸಂಸ್ಥೆಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇವೆ.ಕರಾವಳಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮತಾಂತರ ನಡೆಯುತ್ತಿದ್ದು ಜಾತಿ ಸಂಘಟನೆಗಳಿಗೆ ,ಸಂಘ ಸಂಸ್ಥೆಗಳಿಗೆ ಎಚ್ಚೆತ್ತುಕೊಳ್ಳಲು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ ಆರ್, ವಿಶ್ವ ಹಿಂದ್ ಪರಿಷದ್ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಮೋದ್ , ಕಾರ್ಯದರ್ಶಿ ಸಂತೋಷ್ ಸುವರ್ಣ, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.