ಕಾಪು: ನಾಲ್ಕು ಬಾರಿ ಪಶು ಆಸ್ಪತ್ರೆ,ಮೆಡಿಕಲ್ ಗೆ ಭೇಟಿ ನೀಡಿದ ಕೊರೋನಾ ಸೋಂಕಿತನ ವಿರುದ್ಧ ದೂರು ದಾಖಲು
ಕಾಪು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುಲು ವಿದೇಶದಿಂದ ಬಂದ ದೆಂದೂರುಕಟ್ಟೆಯ ನಿವಾಸಿಗೆ ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದರೂ, ಉಲ್ಲಂಘಿಸಿದ ಆತನ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿ ಕಾಪು ಠಾಣೆಗೆ ದೂರು ನೀಡಿದ್ದಾರೆ.
ದುಬೈನಿಂದ ಭಾರತಕ್ಕೆ ಮಾ.17 ರಂದು ಬಂದ ಹೋಮ್ ಕ್ವಾರಂಟೈನ್ ನಲ್ಲಿರಲು ಆದೇಶಿಸಿದ್ದರೂ ತನ್ನ ಸ್ವಂತ ಊರಾದ ಮಣಿಪುರ ಮೈದಾನದಲ್ಲಿ ಸುಮಾರು 28 ಜನರೊಂದಿಗೆ ಸೇರಿ ಕ್ರಿಕೆಟ್ ಆಡಿರುತ್ತಾನೆ. ಮರು ದಿನ ಸ್ಥಳೀಯ ಅಂಗಡಿಗೆ ಹೋಗಿ ಸುಮಾರು 10 ನಿಮಿಷಗಳ ಕಾಲ ಅಲ್ಲಿದ್ದು, ಸುಮಾರು 6 ಜನ ಸಾರ್ವಜನಿಕರೊಂದಿಗೆ ಸಂಪರ್ಕ ಮಾಡಿ ನಂತರ ದೆಂದೂರುಕಟ್ಟೆ ಸಿಂಡಿಕೇಟ್ ಬ್ಯಾಂಕ್ ನ ಎ.ಟಿ.ಎಮ್. ಭೇಟಿ ನೀಡಿದ್ದ.
ಮತ್ತೆ ಆರೋಪಿ ದಿನಸಿ ಅಂಗಡಿಗೆ ಭೇಟಿ ನೀಡಿ, ಸಂಜೆ ಮತ್ತೆ ಕ್ರಿಕೆಟ್ ಆಡಿ, ರಾತ್ರಿ 3 ಜನರೊಂದಿಗೆ ದೆಂದೂರುಕಟ್ಟೆಯ ಬಾರ್ ಗೆ ಹೋಗಿ 1.30 ಗಂಟೆ ಕಾಲ ಸಮಯ ಕಳೆದಿದ್ದ. ನಾಯಿಗೆ ಚಿಕಿತ್ಸೆ ಕೊಡಿಸಲು ತನ್ನ ಸ್ನೇಹಿತನೊಂದಿಗೆ ನಾಲ್ಕು ದಿನ ಕೊರಂಗ್ರಪಾಡಿ ಪಶು ಆಸ್ಪತ್ರೆಗೆ ಹೋಗಿ ಅಲ್ಲಿಂದ ಉಡುಪಿ ರಾಧಾ ಮೆಡಿಕಲ್ ನಲ್ಲಿ ಔಷಧಿ ಖರೀದಿಸಲು ಹೋಗಿದ್ದ.
ನಂತರ 7 ಜನ ಸ್ನೇಹಿತರೊಂದಿಗೆ ಮನೆಯ ಹತ್ತಿರ ಮೈದಾನದಲ್ಲಿ 2.30 ಗಂಟೆ ಪಾರ್ಟಿ ಮಾಡಿರುತ್ತಾನೆ. ಮಾ 26 ರಂದು ಕೋವಿಡ್-19 ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಅದರಂತೆ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಲ್ಲಿ ದಿನಾಂಕ29 ಆರೋಪಿಗೆ ಕೋವಿಡ್-19 ಸೋಂಕಿರುವುದು ದೃಢಪಟ್ಟಿತ್ತು. ಆರೋಪಿಯು ವಿದೇಶದಿಂದ ಬಂದು ಆಸ್ಪತ್ರೆಗೆ ದಾಖಲಾಗುವವರೆಗೆ ಹೋಮ್ ಕ್ವಾರಂಟೈನ್ ಆದೇಶವನ್ನು ಉಲಂಘಿಸಿದ್ದಾನೆ. ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶದಂತೆ ಆರೋಪಿ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಸೂಡ, ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
.