ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ದಿನಬಳಕೆ ಸಾಮಗ್ರಿ ಹಸ್ತಾಂತರ
ಕಾಪು :ಬಿರುವೆರ್ ಕಾಪು ಸೇವಾ ಟ್ರಸ್ಟ್ ಸಂಸ್ಥೆಯು ಬ್ರಹ್ಮಶ್ರೀ ನಾರಾಯಣ ಗುರು ಸಾಂತ್ವಾನ ಎಂಬ ಯೋಜನೆಯನ್ನು ಹಮ್ಮಿಕೊಂಡು, ಕೊರೊನ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಹೊರಡಿಸಿರುವ ಲಾಕ್ಡೌನ್ನಿಂದಾಗಿ ಕೆಲವೊಂದು ಕುಟುಂಬಗಳು ತಿನ್ನಲು ಅನ್ನವಿಲ್ಲದೆ, ದಿನಬಳಕೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳಲಾಗದೆ ಕಂಗಾಲಾಗಿವೆ. ಈ ನಿಟ್ಟಿನಲ್ಲಿ ಈ ಸಂಸ್ಥೆಯು ಕಾಪು ತಾಲೂಕಿಗೆ ಒಳಪಡುವ ಕಾಪು ಪುರಸಭೆ, ಇನ್ನಂಜೆ ಗ್ರಾ.ಪಂಚಾಯತ್, ಕುರ್ಕಾಲು ಗ್ರಾ. ಪಂಚಾಯತ್, ಮಜೂರು ಗ್ರಾ.ಪಂಚಾಯತ್, ಶಿರ್ವ ಗ್ರಾ.ಪಂಚಾಯತ್ ಹಾಗೂ ಮಣಿಪುರ ಗ್ರಾ.ಪಂಚಾಯತ್ ವ್ಯಾಪ್ತಿಯ ಕಟ್ಟ ಕಡೆಯ ಬಡವರಿಗೆ ಹಾಗೂ ಬಾಡಿಗೆ ಮನೆಯಲ್ಲಿದ್ದು ದಿನಗೂಲಿ ಮಾಡುತ್ತಿದ್ದ 45 ಕುಟುಂಬಗಳನ್ನು ಪಂಚಾಯತ್ ಅಧಿಕಾರಿಗಳ ಸಮ್ಮುಖದಲ್ಲಿ ಗುರುತಿಸಿ ಅವರಿಗೆ ದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳಾದ ಅಕ್ಕಿ, ಬೆಳೆ, ತರಕಾರಿ, ತೆಂಗಿನಕಾಯಿ ಮತ್ತು ಇತರೆ ವಸ್ತುಗಳನ್ನು ನೀಡಿದರು.
ಈ ಸೇವೆಯನ್ನು ಮಾಡಲು ಸಹಕರಿಸಿದ ಕಾಪು ತಹಶೀಲ್ದಾರ್ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ,ಸದಸ್ಯರುಗಳಿಗೆ, ಶಿರ್ವ ಪೊಲೀಸ್ ಠಾಣಾಧಿಕಾರಿಯವರಿಗೆ, ಕಾಪು ಪೊಲೀಸ್ ಠಾಣಾಧಿಕಾರಿಯವರಿಗೆ, ವಾಹನದ ವ್ಯವಸ್ಥೆಯನ್ನು ಮಾಡಿದ ದೇವಿಪ್ರಸಾದ್ ಪೂಜಾರಿ ಶಿರ್ವ ಇವರಿಗೆ, ಸ್ಥಳಾವಕಾಶವನ್ನು ನೀಡಿದ ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಇನ್ನಂಜೆ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಸದಸ್ಯರಿಗೆ ಊಟದ ವ್ಯವಸ್ಥೆಯನ್ನು ಮಾಡಿದ ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿ, ಮಾಲಿನಿ ಶೆಟ್ಟಿ ಹಾಗೂ ದಿವೇಶ್ ಶೆಟ್ಟಿ , ಇವರೆಲ್ಲರಿಗೂ ಸಂಸ್ಥೆಯ ಅಧ್ಯಕ್ಷರಾದ ಬಾಲಕೃಷ್ಣ ಆರ್ ಕೋಟ್ಯಾನ್ ಇವರು ಧನ್ಯವಾದಗಳನ್ನು ತಿಳಿಸಿದರು, ಯೋಜನೆಯ ಫಲಾನುಭವಿಗಳು ಶುಭ ಹಾರೈಸಿದರು.