ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೆರೆ ಪೀಡಿತ ಪ್ರದೇಶಗಳಿಗೆ ಹತ್ತು ಟನ್ ವಸ್ತುಗಳ ಸಂಗ್ರಹ

ಉಡುಪಿ: ಕೋಟ ಬ್ಲಾಕ್ ಕಾಂಗ್ರೆಸ್ ಹಾಗೂ  ದಾನಿಗಳ ನೆರವಿನಿಂದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ನೆರೆ ಪೀಡಿತ ಪ್ರದೇಶಗಳಿಗೆ ೫ ಲಕ್ಷ ರೂ.ಮೊತ್ತದ ವಸ್ತುಗಳನ್ನು ಬೆಳಗಾಂಗೆ ಇಂದು ಕೊಂಡ್ಯಲಾಯಿತು.
 ಮೊದಲ ಹಂತವಾಗಿ – ೬ ಟನ್  ಸೋನಾ ಮಸೂರಿ ಅಕ್ಕಿ , ದಿನಬಳಕೆಯ ವಸ್ತುಗಳಾದ ಬಟ್ಟೆ, ಬೇಳೆಕಾಳು, ಸೋಪು, ಕುಡಿಯುವ ನೀರು, ಸ್ಯಾನಿಟರಿ ಪ್ಯಾಡ್, ಪೇಸ್ಟ್, ಮೇಣದ ಬತ್ತಿಗಳು, ಬಿಸ್ಕತ್ತುಗಳು, ಊಟದ ತಟ್ಟೆ, ಹಾಸಿಗೆ ಮತ್ತು ಚಾಪೆ, ಟಾರ್ಪಲ್, ಛತ್ರಿ, ಚಪಾತಿ ಮತ್ತು ಪರೋಟ ಸಹಿತ ಹತ್ತು ಟನ್  ವಸ್ತುಗಳನ್ನು ದೇಣಿಗೆಯ ರೂಪದಲ್ಲಿ ಸಂಗ್ರಹಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಕುಂದರ್ ಇವರ ನೇತೃತ್ವದಲ್ಲಿ ಇಂದು ಬ್ಲಾಕ್ ಕಾಂಗ್ರಸ್‌ನ ಕಚೇರಿ ಇಂದಿರಾ ಭವನದಲ್ಲಿ ಬಡ ನಿರಾಶ್ರಿತ ಫಲಾನುಭವಿಗಳಿಗೆ ವಸ್ತುರೂಪದ ದೇಣಿಗೆಗಳನ್ನು ಕೊಡುವ ಕಾರ್ಯಕ್ರಮಕ್ಕೆ ಕುಂದಾಪುರ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಮಲ್ಯಾಡಿ ಶಿವರಾಮ ಶೆಟ್ಟಿ ಮತ್ತು  ಕಿಶನ್ ಹೆಗ್ಡೆ ಕೊಳ್ಕಬೈಲ್ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷರಾದ ಶಂಕರ್ ಕುಂದರ್ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕುಂದಾಪುರ ಬ್ಲಾಕ್ ನ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಕೋಟ, ಉದ್ಯಮಿಗಳಾದ ದಿವಾಕರ್ ಶೆಟ್ಟಿ ಬೆಂಗಳೂರು, ರಾಜಾರಾಮ್ ಸಾಸ್ತಾನ, ರಮಾನಂದ ಶೆಟ್ಟಿ ಬಾರ್ಕೂರು, ಮೊಸಸ್ ರೋಡಿಗ್ರಸ್, ಐರೋಡಿ ಗ್ರಾಮ ಪಂಚಾಯಿ ಸದಸ್ಯರಾದ ಆನಂದ ಗಾಣಿಗ, ಫ್ಲೋರಿನಾ, ಸುರೇಶ್ ಶೆಟ್ಟಿ ಸಾಸ್ತಾನ, ಸಾಸ್ತಾನ ಸಿ.ಎ ಬ್ಯಾಂಕ್ ಡೈರೆಕ್ಟರ್ ಡೆರಿಕ್ ಡಿಸೋಜ ಸಾಸ್ತಾನ, ಮೀನಾಕ್ಷಿ, ಶಂಕರ ಬಂಗೇರ ಕೋಡಿ ಕನ್ಯಾಣ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಗಣೇಶ್ ಬಡಾಹೊಳಿ, ಸುರೇಶ ಶೆಟ್ಟಿ ಕಾವಡಿ, ಎಂ.ಎಸ್ ಸಂಜೀವ, ಸುರೇಶ್ ಅಡಿಗ, ಮೊಹಮ್ಮದ್ ಅಮೀರ್ ಮಧುವನ, ಶ್ರೀನಿವಾಸ್ ವಡ್ಡರ್ಸೆ, ಕೋಟಿ ಪೂಜಾರಿ, ಬಾಲಕೃಷ್ಣ ಪೂಜಾರಿ ಸಾಸ್ತಾನ, ಮಂಜುನಾಥ್ ಪೂಜಾರಿ, ರಮಾನಂದ ಶೆಟ್ಟಿ ಬಾರ್ಕೂರು, ಮಹಾಬಲ ಮಡಿವಾಳ, ಬಸವ ಪೂಜಾರಿ ಸಾಸ್ತಾನ, ಶ್ರೀನಿವಾಸ ಶೆಟ್ಟಿಗಾರ್, ರೇಖಾ ಸುವರ್ಣ, ಮಹೇಶ್ ಪೂಜಾರಿ ಕೋಡಿ ,ವಿನಯ ಯಡ್ತಾಡಿ, ರತ್ನಾಕರ ಶ್ರೀಯಾನ್ ಪಡುಕೆರೆ, ಕೃಷ್ಣ ಪಿ.ಎಂ, ಗೋಪಾಲ್ ಬಂಗೇರ, ಇಶ್ಚಿತ್ ಶೆಟ್ಟಿ ಕುಂದಾಪುರ, ನಟರಾಜ್ ಹೊಳ್ಳ, ವೈ.ಬಿ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಸಂತ್ರಸ್ತರಿಗೆ ೧೦ ಕೆಜಿ ಯಂತೆ ಅಕ್ಕಿಯನ್ನು ಪ್ಯಾಕ್ ಮಾಡಿ ವಿತರಿಸಲಾಗುವುದು, ಮುಂದಿನವಾರ ಇನ್ನೊಂದು ವಾಹನದಲ್ಲಿ ಪರಿಹಾರ ಸಾಮಾಗ್ರಿ ಸಂಗ್ರಹಿಸಿ ಸಂತ್ರಸ್ತರಿಗೆ ನೀಡಲಾಗುವುದು ಎಂದು ಕಿಶನ್ ಹೆಗ್ಡೆ ಕೊಳ್ಕಬೈಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!