ಸಿದ್ದರಾಮಯ್ಯನವರದ್ದು ಡರ್ಟಿ ಪಾಲಿಟಿಕ್ಸ್: ಶೋಭಾ ಕರಂದ್ಲಾಜೆ

ಉಡುಪಿ – ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರವರ ವೈರಲ್ ಆಗಿರುವ ಆಡಿಯೋದ ವಿವಾದ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ “ಸಿಎಂ ಆಡಿಯೋ ಬಾಂಬ್ ಆಗೋದಕ್ಕೆ ಸಾಧ್ಯವಿಲ್ಲ , ಅನರ್ಹ ಶಾಸಕರು ಅವರಿಗೆ ಬೇಕಾದ ಪಕ್ಷಕ್ಕೆ ಸೇರಬಹುದು, ಅನರ್ಹರು ಯಾವುದೇ ಬಂಧನದಲ್ಲಿ ಇಲ್ಲ ಅವರು ಅವರ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ, ನಂಬರ್ ಗೇಮ್ ನಲ್ಲಿ ನಮ್ಮ ಸರಕಾರ ರಚನೆಯಾಗಿದೆ ,ಅನರ್ಹರ ಕಾರಣಕ್ಕಾಗಿ ಬಿಜೆಪಿ ಸರಕಾರ ರಚನೆಯಾಗಿದೆ, ಈ ಅಂಶವನ್ನು ಯಡಿಯೂರಪ್ಪ ಮಾತನಾಡಿದ್ದಾರೆ ,ಇದರಲ್ಲಿ ತಪ್ಪು, ಅನ್ಯಾಯದ ಪ್ರಶ್ನೆ ಬರಲ್ಲ ,ಯಡಿಯೂರಪ್ಪ ಹೇಳಿರೋದ್ರಲ್ಲಿ ತಪ್ಪೇನಿದೆ, 17 ಜನ ಶಾಸಕರು ಇಚ್ಚೆ ಪಡುವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ,ಅನರ್ಹರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನಪಡುತ್ತಿದ್ದೇವೆ, ಅವರು ಖಂಡಿತಾ ಬಿಜೆಪಿಗೆ ಬರಬಹುದು, ಸ್ಪರ್ಧಿಸಬಹುದು ಎಂಬುದಾಗಿ ಅನರ್ಹ ಶಾಸಕರನ್ನು ಪಕ್ಷಕೆ ಸ್ವಾಗತಿಸಿದರು.


ಸಿದ್ದರಾಮಯ್ಯನವರದ್ದು ಡರ್ಟಿ ಪಾಲಿಟಿಕ್ಸ್
ಸಿದ್ದರಾಮಯ್ಯ ನವರು ಡರ್ಟಿ ಗೇಮ್ ಮಾಡ್ತಾನೇ ಇದ್ದಾರೆ , ನಿರಂತರ ಬ್ಲ್ಯಾಕ್ ಮೇಲ್ ಮಾಡಿಕೊಂಡು ರಾಜಕಾರಣ ಮಾಡಿದವರು ,ಜೆಡಿಎಸ್ ಬಿಟ್ಟನಂತರ ಕಾಂಗ್ರೆಸನ್ನು ಬ್ಲ್ಯಾಕ್ ಮೈಲ್ ಮಾಡುತ್ತಲೇ ಇದ್ದಾರೆ ,ಬ್ಲ್ಯಾಕ್‌ ಮೇಲ್ ಮಾಡಿಕೊಂಡೇ ಐದು ವರ್ಷ ಸಿಎಂ ಆಗಿದ್ದರು ,ಒಟ್ಟಿನಲ್ಲಿ ಸಿದ್ದರಾಮಯರದ್ದು ಬ್ಲಾಕ್ ಮೇಲ್ ರಾಜಕಾರಣ ಹಾಗಾಗಿ ಸಿದ್ದರಾಮಯ್ಯರಿಂದ ಯಾರೂ ಕಲಿಯುವ ಅಗತ್ಯವಿಲ್ಲ , ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ನೀಡುತ್ತಿದ್ದಾರೆ ಎಂಬುದಾಗಿ ಶೋಭಾ ಆರೋಪಿಸಿದರು
ಕಾಂಗ್ರೆಸ್ ನಾಯಕ ವಿಜಯ ಶಂಕರ್ ಬಿಜೆಪಿಗೆ ಬರುತ್ತಿರುವುದು ಸಂತಸದ ವಿಷಯ ,ವಿಜಯ ಶಂಕರ್ ಅವರ ಜನಾಂಗದಲ್ಲೇ ಸಜ್ಜನ ವ್ಯಕ್ತಿ ,ಸಿದ್ದರಾಮಯ್ಯ ನ ಸ್ವಂತ ನೆಲದಲ್ಲಿ ಕಾಂಗ್ರೆಸ್ ಬಿಡುತ್ತಿದ್ದಾರೆ,ನಮಗೆ ಖುಷಿ ಮತ್ತು ಸಂತೋಷದ ವಿಚಾರ ಎಂಬುದಾಗಿ ತಿಳಿಸಿದರು.
ಇಡಿಗೆ ಯಾವ ಬಾಸ್ ಇಲ್ಲ – ಇಡಿ ಯಿಂದ ಡಿ ಕೆ ಶಿ ಬಂಧನದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದೆ “ಇಡಿ ಅಧಿಕಾರಿಗಳು ಸಾರ್ವಜನಿಕವಾಗಿ ಹೇಳಿಕೆ ಕೊಡಲ್ಲ ,ಸ್ವಂತ ಲಾಭಕ್ಕಾಗಿ ಇಡಿಯನ್ನು ಬಳಸಬೇಡಿ ,ಇದು ಒಂದು ಸ್ವಯಂಸೇವಾ ಸಂಸ್ಥೆ ,ಸಂವಿಧಾನ ಪ್ರಕಾರ ರಚಿತವಾದ ಸಂಸ್ಥೆ ಇದು ಒಬ್ಬ ವ್ಯಕ್ತಿಯನ್ನ ಆರು ತಿಂಗಳು, ಒಂದು ವರ್ಷ ಫಾಲೋ ಮಾಡಿ ಬಂಧಿಸಿರುತ್ತಾರೆ ,ಇಡಿಗೆ ಯಾವ ಬಾಸಿನ ಅಗತ್ಯ ಇರೋದಿಲ್ಲ ಎಂದರುಕುಮಾರಸ್ವಾಮಿ ಹಾಗು ದೇವೇಗೌಡ್ರ ಬಗ್ಗೆ ಈಗ ನಾನೇನು ಮಾತನಾಡುವುದಿಲ್ಲ ಬದಲಿಗೆ ಚುನಾವಣೆ ಆದಮೇಲೆ ಕಮೆಂಟ್ ಮಾಡುತ್ತೇನೆ ಎಂದರು

Leave a Reply

Your email address will not be published. Required fields are marked *

error: Content is protected !!