ನೂತನ ಸಚಿವರಿಗೆ ಖಾತೆ ಹಂಚಿಕೆ: ಜಾರಕಿಹೊಳಿ-ಜಲಸಂಪನ್ಮೂಲ
ಬೆಂಗಳೂರು: ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ, ಬಿ.ಸಿ ಪಾಟೀಲ್ – ಅರಣ್ಯ ಖಾತೆ, ಶ್ರೀಮಂತ ಪಾಟೀಲ್ – ಜವಳಿ ಖಾತೆ, ನಾರಾಯಣ ಗೌಡ – ಪೌರಾಡಳಿತ, ತೋಟಗಾರಿಕೆ ಖಾತೆ, ಎಸ್.ಟಿ ಸೋಮಶೇಖರ್ – ಸಹಕಾರ ಖಾತೆ, ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ ಪೂರೈಕೆ, ಕೆ. ಗೋಪಾಲಯ್ಯ – ಸಣ್ಣ ಕೈಗಾರಿಕೆ, ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ, ಕೆ. ಸುಧಾಕರ್ – ವೈದ್ಯಕೀಯ ಶಿಕ್ಷಣ, ಬೈರತಿ ಬಸವರಾಜ್ – ನಗರಾಭಿವೃದ್ದಿ ಇಲಾಖೆ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ