ಮಲ್ಪೆ ಬಂದರಿನಲ್ಲಿ ಮಕ್ಕಳ ರಕ್ಷಣಾ ಕಾರ್ಯಾಚರಣೆ
ಉಡುಪಿ -ಮಲ್ಪೆ ಬಂದರಿನಲ್ಲಿ ಬೆಳ್ಳಂಬೆಳಿಗ್ಗೆ ಮೀನು ಆಯುವ ಕೆಲಸದಲ್ಲಿ ನಿರತವಾಗಿದ್ದ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಇಂದು ಬೆಳಿಗ್ಗೆ 5 ಗಂಟೆಗೆ ಇಲಾಖೆ ತಂಡದೊಂದಿಗೆ ಮೀನು ಆಯುವ ವೃತ್ತಿಯಲ್ಲಿ ನಿರತ ಕೊಪ್ಪಳ ಮತ್ತು ಗದಗ ಜಿಲ್ಲೆಯ ವಲಸೆ ಕಾರ್ಮಿಕರ 18 ಬಾಲಕಿ, ಓರ್ವ ಬಾಲಕ ಸೇರಿ ಒಟ್ಟು 19 ಮಕ್ಕಳನ್ನು ರಕ್ಷಿಸಿದ್ದಾರೆ , ಈ ಮಕ್ಕಳನ್ನು ಶಿಕ್ಷಣ ಮತ್ತು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದೆ. ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಂಯ ವಾಣಿ ನಾಗರೀಕ ಸೇವಾ ಸಮಿತಿ, ಸ್ಪೂರ್ತಿ ವಿಶ್ವಾಸದ ಮನೆ ಶಂಕರಪುರ ಇವರು ಕಾರ್ಯಾಚರಣೆ ನಡೆಸಿದ್ದರು.