ಚೆಸ್ ಮತ್ತು ಕರಾಟೆ ಸ್ಪರ್ಧೆ-ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಗೆ ಪದಕಗಳ ಗರಿ
ಬ್ರಹ್ಮಾವರ – ಭಾರತೀಯ ಮೂಲ ರಕ್ಷಣಾ ಕಲೆಯಾದ ಕರಾಟೆ ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಿದೆ.ಕರಾಟೆಯಿಂದ ಸ್ವರಕ್ಷಣೆ ಸಾಧ್ಯ.ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ,ಆತ್ಮಸ್ಥೈರ್ಯ, ಶಿಸ್ತು,ಸಂಯಮ,ಏಕಾಗ್ರತೆ ವೃದ್ಧಿಯಾಗಿ ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳುವ ಕರಾಟೆ ಪೂರಕವಾಗಿದೆ.ಈ ನಿಟ್ಟಿನಲ್ಲಿ ದಿನಾಂಕ 13 ಜುಲೈ 2019 ರಂದು ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆ-ಬ್ರಹ್ಮಾವರ ಇಲ್ಲಿನ ವಿದ್ಯಾರ್ಥಿಗಳು ಸರಕಾರಿ ಪ್ರೌಢಶಾಲೆ, ಬ್ರಹ್ಮಾವರ ಇಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಪದಕಗಳನ್ನು ಪಡೆದು ವಿಜೇತರಾಗಿರುತ್ತಾರೆ.
3 ವಿದ್ಯಾರ್ಥಿಗಳು ಪ್ರಥಮ ಸ್ಥಾನ
ಏಳನೇ ತರಗತಿಯ ವಿದ್ಯಾರ್ಥಿಯಾದ ಆದಿತ್ಯ ಕೆ., ಏಂಟನೇ ತರಗತಿಯ ವಿದ್ಯಾರ್ಥಿಗಳಾದ ಸೇಜಲ್ ಮತ್ತು ಸಿದ್ಧಾಂತ್ ಎಸ್.ಪಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ .
4 ವಿದ್ಯಾರ್ಥಿಗಳು ದ್ವಿತೀಯಸ್ಥಾನ
ಏಂಟನೇ ತರಗತಿಯ ವಿದ್ಯಾರ್ಥಿಗಳಾದ ಅರ್ಮಾನ್, ಶರಣ್ಯಾರಾಜ್, ಆನ್ಸಿಟಾ, ಒಂಬತ್ತನೇ ತರಗತಿಯ ವಿದ್ಯಾರ್ಥಿಯಾದ ಸಿಂಚನ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕಗಳನ್ನು ಗಳಿಸಿದ್ದಾರೆ
3 ವಿದ್ಯಾರ್ಥಿಗಳು ತೃತೀಯ ಸ್ಥಾನ
ಮತ್ತು ಏಳನೇ ತರಗತಿಯ ಪ್ರೀತಮ್ ಏಂಟನೇ ತರಗತಿಯ ಲವೀಟಾ, ಒಂಬತ್ತನೇ ತರಗತಿಯ
ಉತ್ತೇಜ ಇವರುಗಳು ತೃತೀಯ ಸ್ಥಾನ ಗಳಿಸಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿರುವರು.
ಒಬ್ಬ ವಿದ್ಯಾರ್ಥಿ ಪ್ರಥಮ ಸ್ಥಾನ
ಇಂದು ನಡೆದ ಚೆಸ್ ಸ್ಪರ್ಧೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿ ಸುರೇನ್ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ
ನಿರ್ಮಲಾ ವಿದ್ಯಾ ಸಂಸ್ಥೆ ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೆ ಶಿಕ್ಷಣೇತರ ಚಟುವಟಿಕೆಗಳಿಗೂ ಅಷ್ಟೇ ಒತ್ತು ನೀಡುತ್ತಿದೆ. ಮಕ್ಕಳ ಈ ಸಾಧನೆಯಿಂದಾಗಿ ನಿರ್ಮಲಾ ವಿದ್ಯಾಸಂಸ್ಥೆಯ ಸಾಧನೆಯ ಕಿರೀಟಕ್ಕೆ ಇನ್ನಷ್ಟು ಪದಕಗಳ ಗರಿ ಸೇರ್ಪಡೆಯಾಗಿದೆ ವಿಜೇತರಾಗುವ ಮೂಲಕ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿರುವ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ,ಶಾಲಾ ಸಂಚಾಲಕರಾದ ವಂ/ಫಾ/ವಿಕ್ಟರ್ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯರಾದ ವಂ/ಫಾ/ಜೋಸ್ಲಿ ಡಿಸಿಲ್ವ ಮತ್ತು ಶಿಕ್ಷಕ ವರ್ಗ ಅಭಿನಂದನೆಯನ್ನು ಸಲ್ಲಿಸಿದರು