ಕೇಂದ್ರ ಸರಕಾರದ ಜನವಿರೋಧಿ ಸಾರಿಗೆ ನೀತಿಗೆ ಯು. ಆರ್. ಸಭಾಪತಿ ಖಂಡನೆ
ಕೇಂದ್ರ ಸರಕಾರವು ಜ್ಯಾರಿಗೆ ತಂದಿರುವ ಜನವಿರೋಧಿ ಸಾರಿಗೆ ನೀತಿಯು ಸುರಕ್ಷತೆಯ ಹೆಸರಿನಲ್ಲಿ ಜನರ ಮೇಲೆ ಮಾಡಿರುವ ದಬ್ಬಾಳಿಕೆಯಾಗಿದೆ. ಬಹುಮತ ಇದೆಯೆಂದು ತಾವೇನು ಮಾಡಿದರೂ ಜನ ಒಪ್ಪುತ್ತಾರೆ ಎಂದು ಸಾರಿಗೆ ನೀತಿಗೆ ತಿದ್ದುಪಡಿ ತಂದು ಬೇಕಾಬಿಟ್ಟಿ ದಂಡ ವಿಧಿಸುವ ಕೇಂದ್ರ ಸರಕಾರದ ದುರಾಡಳಿತವನ್ನು ಮಾಜಿ ಶಾಸಕ ಹಾಗೂ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಯು. ಆರ್. ಸಭಾಪತಿ ತೀವ್ರವಾಗಿ ಖಂಡಿಸಿದ್ದಾರೆ.
ಕೇಂದ್ರದ ಹೊಸ ಸಾರಿಗೆ ನೀತಿಯಲ್ಲಿ ಸಮಾನ್ಯ ನೀಯಮ ಉಲ್ಲಂಘನೆಗೆ ಈ ಹಿಂದೆ ಇದ್ದ100 ರೂಪಾಯಿ ದಂಡ ಈಗ 500,ರಸ್ತೆ ನೀಯಮ ಉಲ್ಲಂಘನೆಗೆ 100 ರೂ. 1000ರೂಪಾಯಿ. ಸೀಟ್ ಬೆಲ್ಟ್ ಧರಿಸದಿದ್ದರೆ ಈ ಮೊದಲು ಇದ್ದ 100ರೂಪಾಯಿಗೆ 1000 ರೂಪಾಯಿ; ಹೆಲ್ಮೆಟ್ ಧರಿಸದೆ ಇದ್ದರೆ 100 ರೂಪಾಯಿಯಿಂದ1000 ರೂಪಾಯಿ, ಅಪ್ರಾಪ್ತರು ವಾಹನ ಚಾಲನೆಗೈದರೆ 25000 ರೂಪಾಯಿ ದಂಡ ಮತ್ತು3 ವರ್ಷ ಜೈಲುವಾಸ, 12 ತಿಂಗಳು ಲೈಸನ್ಸ್ ರದ್ದು ಸೇರಿದಂತೆ ಹಲವಾರು ಹೊಸ ಜನಪೀಡನಾ ನೀಯಮಗಳನ್ನು ತಂದು ಜನರನ್ನು ಸಂಕಷ್ಟಕ್ಕೆ ಈಡು ಮಾಡಿರುವುದು ತೀರ ಶೋಚನೀಯ. ಕೇಂದ್ರಸರಕಾರ ಈ ತಿದ್ದುಪಡಿಗಳನ್ನು ಕೂಡಲೇ ಹಿಂದಕ್ಕೆ ಪಡೆದು ವೈಜ್ನಾನಿಕವಾಗಿ ದಂಡನೀಯಮಗಳ ಪರಿಷ್ಕರಣೆ ಮಾಡಬೇಕೆಂದು ಸಭಾಪತಿ ಅಗ್ರಹಿಸಿದ್ದಾರೆ
ಬ್ಯಾಂಕುಗಳ ವಿಲಯನ ದೇಶದ ಆರ್ಥಿಕ ದಿವಾಳಿತನದ ಸಂಕೇತ
ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಾ ಮುಂದುವರಿದಿದ್ದು ಇದರಿಂದಾಗಿ ದೇಶದಲ್ಲಿ ಭೀಕರ ಆರ್ಥಿಕ ಹಿಂಜರಿತವುಂಟಾಗಿದೆ. ಅದರ ಪರಿಣಾಮ ಜಿಡಿಪಿ ಶೇಕಡಾ 5 ಕ್ಕೆ ಇಳಿದ್ದಿದು ಐತಿಹಾಸಿಕ ಕುಸಿತ ಕಂಡಿದೆ.
ಇದನ್ನು ನಿಯಂತ್ರಿಸಲಾಗದೆ ಕೇಂದ್ರ ಸರಕಾರ ಇದೀಗ ರಿಸರ್ವ್ ಬ್ಯಾಂಕ್ ನಲ್ಲಿದ್ದ ಆಪತ್ಕಾಲ ನಿಧಿ ರೂಪಾಯಿ1ಕೋಟಿ 72ಲಕ್ಷ ಕೋಟಿ ಹಣಕ್ಕೂ ಕನ್ನಹಾಕಿ ದೇಶದ ಅರ್ಥಿಕವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದೂ ಶ್ರೀ ಸಭಾಪತಿ ಟೀಕಿಸಿದ್ದಾರೆ.
ಇದಕ್ಕಾಗಿಯೇ ದೇಶದ ಪ್ರಮುಖ ರಾಷ್ಟ್ರೀಕೄತ ಬ್ಯಾಂಕುಗಳನ್ನು ವಿಲಯನ ಮಾಡಿರುವುದೂ ಅಕ್ಷೇಪಾರ್ಹವಾಗಿದೆಯೆಂದು ಅವರು ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕೇಂದ್ರದ ದುರಾಡಳಿತ ವಿರುಧ್ಧ ಪ್ರತಿಭಟನೆಯನ್ನು ಮಾಡುವುದರ ಮೂಲಕ ಜನಾಂದೋಲನಕ್ಕೆ ನೀಡಲಿದೆಯೆಂದು ಸಭಾಪತಿ ಹೇಳಿದ್ದಾರೆ.