ದೇಶದ ಅಭಿವೃದ್ಧಿಗೆ ಪೂರಕವಾದ ಕೇಂದ್ರ ಬಜೆಟ್ : ಮಟ್ಟಾರ್ ರತ್ನಾಕರ ಹೆಗ್ಡೆ.

ಉಡುಪಿ, ಜುಲೈ ೫ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2019-2020 ನೇ ಸಾಲಿನ ಕೇಂದ್ರ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರ ನಿರೀಕ್ಷೆಗೆ ಪೂರಕವಾಗಿ, ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿರುವ ಅತ್ಯುತ್ತಮ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಬಜೆಟ್ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳಾ ಸಬಲೀಕರಣ, ಮುದ್ರಾ ಯೋಜನೆಯಡಿಯಲ್ಲಿ ಮಹಿಳೆಯರಿಗೆ ರೂ. 1 ಲಕ್ಷ ಸಾಲ ನೀಡಿಕೆ, ಜನ್‌ಧನ್ ಯೋಜನೆಯಲ್ಲಿ ರೂ 5 ಸಾವಿರ ಓ. ಡಿ. ಸವಲತ್ತು, ಪ್ರಧಾನಮಂತ್ರಿ ಮೀನುಗಾರಿಕಾ ಮತ್ಸ್ಯ ಸಂಪದ ಯೋಜನೆ ಜಾರಿ, ಅದೇ ರೀತಿ ಪಶುಸಂಗೋಪನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ಯೋಜನೆ, ಕೃಷಿಗೆ ಉತ್ತೇಜನ, ಯುವಕರಿಗೆ ತರಬೇತಿ ಮತ್ತು ಉದ್ಯೋಗದ ಬಗ್ಗೆ ಕಾರ್ಯಾಚರಣೆಗೆ ಒತ್ತು ನೀಡಿರುವ ಈ ಬಜೆಟ್ ಒಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರ ದೇಶವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುವ ಕನಸನ್ನು ನನಸಾಗಿಸಲಿದೆ ಎಂದು ಮಟ್ಟಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!