ಸಂಭ್ರಮದ ನಾಗರ ಪಂಚಮಿ – ಶ್ರದ್ದಾ ಭಕ್ತಿಯಿಂದ ನಾಗನಿಗೆ ಹಾಲೆರೆದ ಭಕ್ತರು

ಉಡುಪಿ- ಶ್ರಾವಣ  ಮಾಸದ ಆರಂಭದಲ್ಲಿ ಬರುವ ಹಬ್ಬ ನಾಗರ ಪಂಚಮಿ, ಹಿಂದೂ ಆಚರಣೆಯ ಮೊದಲ ಹಬ್ಬ ಇದು , ನಾಗ ದೇವರಿಗೆ  ನಾನಾ ರೀತಿಯ ಸೇವೆಗಳಾದ ತಂಬಿಲ ಸೇವೆ, ,ಸೀಯಾಳ ಅಭಿಷೇಕ,ಪಂಚಾಮೃತ ಅಭಿಷೇಕ ಹೀಗೆ ಹತ್ತು ಹಲವು ಸೇವೆಗಳನ್ನ ನೀಡುತ್ತಿರುವ  ದ್ರಶ್ಯ ಇವತ್ತು ಎಲ್ಲ ನಾಗಬನಗಳಲ್ಲಿ ಸರ್ವೇಸಾಮಾನ್ಯವಾಗಿತ್ತು ,

 

ಉಡುಪಿಯಲ್ಲಿ ಕೂಡ ನಾನಾ ಕಡೆಗಳಲ್ಲಿ ನಾಗಬನಗಳ ಮುಂದೆ ಭಕ್ತರು ಹಾಲು, ಹೂವು, ಸೀಯಾಳಗಳನ್ನು ತಂದು ನಾಗ ಬಿಂಬಗಳಿಗೆ ಅರ್ಪಿಸಲು ಸಾಲಿನಲ್ಲಿ ನಿಂತಿದ್ದರು , ಇಂದು ಮುಂಜಾನೆಯಿಂದಲೇ ಪ್ರಾರಂಭವಾದ ಮಳೆಯನ್ನು ಲೆಕ್ಕಿಸದೆ ತಮ್ಮ ಮೂಲ ನಾಗ ಬನಗಳಿಗೆ ತೆರಳಿ ತಮ್ಮ ಸೇವೆಯನ್ನ ಅರ್ಪಿಸುತ್ತಿದ್ದರು, ನಾಗರ ಪಂಚಮಿಯ ಹಿಂದಿನ ದಿನವಾದ ನಿನ್ನೆ ಮಾರುಕಟ್ಟೆಯಲ್ಲಿ ಹೂವು ಹಣ್ಣುಗಳ ಖರೀದಿಯು ಜೋರಾಗಿಯೇ ಇತ್ತು , ಗಗನಕ್ಕೇರಿದ ಬೆಲೆಯನ್ನ ಲೆಕ್ಕಿಸದೆ ನಾಗದೇವರಿಗೆ ಪ್ರಿಯವಾದ  ಕೇದಗೆ ಹೂ, ಸಿಂಗಾರ ಹೂ,ಸಂಪಿಗೆ ಹೂವುಗಳನ್ನ  ಭಕ್ತರು ಖರೀದಿಸುತ್ತಿದ್ದರು  ಇಂದು ಎಲ್ಲೆಡೆ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಿಸಲಾಯಿತು.. ಉಡುಪಿ ನಗರದ ಗುಂಡಿ ಬೈಲು,ಸಗ್ರಿ,ಮುಚ್ಚಿಲ್‌ಕೋಡು,ನಿಡಂಬೂರು,ಬ್ರಹ್ಮಗಿರಿ, ಕಡೆಕಾರ್‌ಗಳಲ್ಲಿ ನೈಸರ್ಗಿಕ ನಾಗಬನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು ನಾಗ ದೇವರಿಗೆ ಹಾಲೆರೆದು ಭಕ್ತಿಪೂರ್ವಕವಾಗಿ ನಮಿಸುತ್ತಿದ್ದರು.
ತುಳುನಾಡಿನಲ್ಲಿ ನಾಗದೇವರಿಗೆ ವಿಶೇಷ ಭಯ ಭಕ್ತಿಗಳಿಂದ ಜನರು ಆರಾಧಿಸುತ್ತಾ ಬಂದಿದ್ದು ಉತ್ತಮ ಮಳೆ,ಬೆಳೆ ಹಾಗೂ ಪ್ರಕೃತಿ ವಿಕೋಪಗಳ ಸನ್ನಿವೇಶಗಳು ಬಾರದಿರಲಿ ಎಂದು ಭಕ್ತರು ನಾಗದೇವರಲ್ಲಿ ಪ್ರಾರ್ಥಿಸುತ್ತಾರೆ.

 

 

 

 

 

Leave a Reply

Your email address will not be published. Required fields are marked *

error: Content is protected !!