National News

ಆಂಧ್ರಪ್ರದೇಶದಲ್ಲಿ ತೈಲಗಾರದ ಟ್ಯಾಂಕ್ ಸ್ವಚ್ಚಗೊಳಿಸುವ ವೇಳೆ ದುರಂತ – 7 ಮಂದಿ ಕಾರ್ಮಿಕರು ಮೃತ್ಯು

ಕಾಕಿನಾಡ, ಫೆ.9 : ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಜಿ.ರಾಗಂಪೇಟೆಯಲ್ಲಿರುವ ಅಂಬಟಿ ಸುಬ್ಬಣ್ಣ ತೈಲ ಕಾರ್ಖಾನೆಯಲ್ಲಿ ತೈಲ…

ಅದಾನಿ ಸಂಸ್ಥೆ ವಿವಾದ:  ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

ಹೊಸದಿಲ್ಲಿ ಫೆ.9 : ಅದಾನಿ ಸಂಸ್ಥೆಗಳ ಕುರಿತು  ಹಿಂಡೆನ್‌ಬರ್ಗ್ ಸಂಶೋಧನಾ ವರದಿಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ…

ಜೋಶಿಮಠ ಸೇರಿ ಉತ್ತರಾಖಂಡದಲ್ಲಿ ಭಾರಿ ಭೂಕಂಪ ಸಾಧ್ಯತೆ- ವಿಜ್ಞಾನಿಗಳ ಎಚ್ಚರಿಕೆ!

ನವದೆಹಲಿ: ಜೋಶಿಮಠ ಸೇರಿ ಉತ್ತರಾಖಂಡದಲ್ಲಿ ಭಾರಿ ಭೂಕಂಪ ಸಾಧ್ಯತೆ ಇದೆ ಎಂದು ಎನ್‌ಜಿಆರ್‌ಐ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಭೂಕುಸಿತ ಸಂಭವಿಸಿದ್ದ…

ಜಿಯೋಬ್ರಿಟಿಷ್ ಪೆಟ್ರೋಲಿಯಂ ಜಂಟಿಯಾಗಿ ಇ20ಪೆಟ್ರೋಲ್ ಮಿಶ್ರಿತಆರಂಭಿಕ ಜಾರಿ ಘೋಷಣೆ

ಮುಂಬೈ, ಫೆ.08: ರಿಲಯನ್ಸ್- ಬ್ರಿಟಿಷ್ ಪೆಟ್ರೋಲಿಯಂ ಇಂಧನ ಹಾಗೂ ಮೊಬಿಲಿಟಿಯ ಜಂಟಿ ಉದ್ಯಮವಾಗಿ ಜಿಯೋ- ಬಿಪಿಯಿಂದ ಬುಧವಾರದಂದು  ಇ20 ಪೆಟ್ರೋಲ್‌ನ ಆರಂಭಿಕ ಜಾರಿಯನ್ನು  ಘೋಷಿಸಿದೆ. ಸರ್ಕಾರವು ನಿಗದಿಪಡಿಸಿದ ಮಾರ್ಗಸೂಚಿಗೆ ಅನುಗುಣವಾಗಿ, ಜಿಯೋ- ಬಿಪಿಭಾರತದಲ್ಲಿ ಇ20 ಮಿಶ್ರಿತ ಪೆಟ್ರೋಲ್ ಲಭ್ಯವಾಗುವಂತೆ ಮಾಡುವ ಮೊದಲ ಇಂಧನ ರೀಟೇಲ್ ವ್ಯಾಪಾರಿಗಳಲ್ಲಿ ಒಂದಾಗಿದೆ. ಇ20 ಪೆಟ್ರೋಲ್ ಬಳಸುವಂಥ ವಾಹನಗಳನ್ನು ಹೊಂದಿರುವ ಗ್ರಾಹಕರು ಆಯ್ದ ಜಿಯೋ- ಬಿಪಿ  ಔಟ್‌ಲೆಟ್‌ಗಳಲ್ಲಿ ಈ ಇಂಧನವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ಶೀಘ್ರದಲ್ಲೇ ನೆಟ್‌ವರ್ಕ್‌ನಾದ್ಯಂತ ಈ ಲಭ್ಯತೆಯನ್ನು ವಿಸ್ತರಿಸಲಾಗುವುದು. ಇ20 ಇಂಧನವು ಶೇಕಡಾ ಇಪ್ಪತ್ತರಷ್ಟು ಎಥೆನಾಲ್ ಮತ್ತು ಶೇಕಡಾ ಎಂಬತ್ತರಷ್ಟು ಫಾಸಿಲ್ ಆಧಾರಿತ ಇಂಧನದ ಮಿಶ್ರಣವಾಗಿದೆ. ದೇಶದ ತೈಲ ಆಮದು ವೆಚ್ಚ, ಇಂಧನ ಭದ್ರತೆ, ಕಡಿಮೆ ಇಂಗಾಲದ ಹೊರಸೂಸುವಿಕೆ, ಉತ್ತಮ ಗಾಳಿಯ ಗುಣಮಟ್ಟ, ಸ್ವಾವಲಂಬನೆ, ಹಾನಿಗೊಳಗಾದ ಆಹಾರ ಧಾನ್ಯಗಳ ಬಳಕೆ, ರೈತರಿಗೆ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರವು ಪೆಟ್ರೋಲ್‌ನಲ್ಲಿ ಇ20 ಮಿಶ್ರಣವನ್ನು ದೇಶದಲ್ಲಿ ಪರಿಚಯಿಸುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿ ಮತ್ತು ಹೆಚ್ಚಿನ ಹೂಡಿಕೆ ಅವಕಾಶಗಳು ದೊರೆಯುತ್ತದೆ. ಇದಲ್ಲದೆ, ಇ20 ಇಂಧನದ ಗುರಿಯನ್ನು ಸರ್ಕಾರವು 2030ರಿಂದ 2025ಕ್ಕೆ ತಂದಿದೆ. ಇಂಧನ ಮತ್ತು ಮೊಬಿಲಿಟಿಗೆ ಭಾರತದ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ 20 ವರ್ಷಗಳಲ್ಲಿ ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಯೋಬಿಪಿ ಮೊಬಿಲಿಟಿ ಸ್ಟೇಷನ್‌ಗಳನ್ನು ಈ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೂಕ್ತವಾಗಿ ನೆಲೆಗೊಂಡಿದೆ. ಸಂಯೋಜಿತ ಇಂಧನಗಳು, ಇವಿ ಚಾರ್ಜಿಂಗ್, ರಿಫ್ರೆಶ್‌ಮೆಂಟ್‌ಗಳು ಮತ್ತು ಆಹಾರ ಸೇರಿದಂತೆ  ಸಂಚಾರದಲ್ಲಿರುವ ಗ್ರಾಹಕರಿಗೆ ಅವರು ಹಲವಾರು ಸೇವೆಗಳನ್ನು ಒಂದೇ ಕಡೆ ನೀಡುತ್ತಾರೆ. ಕ್ರಮೇಣವಾಗಿ ಬಹುತೇಕ ಇಂಗಾಲದ ಸಲ್ಯೂಷನ್ ನೀಡಲು ಯೋಜಿಸುತ್ತಾರೆ. ಭಾರತದಾದ್ಯಂತ ಗ್ರಾಹಕ ವ್ಯವಹಾರಗಳಲ್ಲಿ ರಿಲಯನ್ಸ್‌ನ ವ್ಯಾಪಕ ಅಸ್ತಿತ್ವ ಮತ್ತು ಆಳವಾದ ಅನುಭವ ಹಾಗೂ ಉತ್ತಮ ಗುಣಮಟ್ಟದ ವಿಭಿನ್ನ ಇಂಧನಗಳು, ಲೂಬ್ರಿಕೆಂಟ್‌ಗಳು, ಅನುಕೂಲತೆ ಮತ್ತು ಸುಧಾರಿತ ಕಡಿಮೆ ಇಂಗಾಲದ ಮೊಬಿಲಿಟಿ ಸಲ್ಯೂಷನ್ ಗಳಲ್ಲಿ ಬಿಪಿಯ ವ್ಯಾಪಕ ಜಾಗತಿಕ ಅನುಭವವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಇಂಧನ ಮತ್ತು ಮೊಬಿಲಿಟಿಯಲ್ಲಿ ನಾಯಕರಾಗಲು ಜಂಟಿ ಉದ್ಯಮಕ್ಕೆ ಉತ್ತಮ  ಅವಕಾಶ ಇದೆ.

ಆರ್ ಬಿಐ ವಿತ್ತೀಯ ನೀತಿ ಪ್ರಕಟ: ರೆಪೊ ದರ ಶೇ.6.5ಕ್ಕೆ ಏರಿಕೆ- ಬ್ಯಾಂಕ್ ಸಾಲ ಬಡ್ಡಿ ಹೆಚ್ಚಳ!

ಮುಂಬೈ: ಆರ್ ಬಿಐನ ರೆಪೊ ದರವನ್ನು ಮತ್ತೆ ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಬುಧವಾರ ತ್ರೈಮಾಸಿಕ ವಿತ್ತೀಯ ನೀತಿ…

ರಾಜ್ಯದ 6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ 3,582 ಕೋಟಿ ರೂ. ಮಂಜೂರು- ನಿತಿನ್ ಗಡ್ಕರಿ

ಬೆಂಗಳೂರು: ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಒಟ್ಟು 3,582 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ…

ಅದಾನಿ ಗ್ರೂಪ್ ವಿವಾದ: ಕೇಂದ್ರೀಯ ಬ್ಯಾಂಕ್‍ಗಳು ತಮ್ಮ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ-ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ ಫೆ.7 : ಅದಾನಿ ಸಮೂಹ ಸಂಸ್ಥೆಗಳ ವಿವಾದ ವಿಚಾರಕ್ಕೆ ಸಂಬಂಧಿಸಿ ಕೇಂದ್ರೀಯ ಬ್ಯಾಂಕ್‍ಗಳು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿವೆ…

error: Content is protected !!