ದುಬೈನಿಂದ ಬಂದ ಕೊರೋನಾ ಸೋಂಕಿತನ ಮೇಲೆ ಕೇಸು ದಾಖಲು: ಜಿಲ್ಲಾಧಿಕಾರಿ
ಉಡುಪಿ: ರವಿವಾರ ಜಿಲ್ಲೆಯಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಅವರ ಸಂಪರ್ಕದಲ್ಲಿದ್ದ73 ಜನರ ಮೇಲೆ ನಿಗಾ ಇರಿಸಲಾಗಿದೆಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ.
ಉಡುಪಿ ಬಡಗಬೆಟ್ಟಿನ 29 ವರ್ಷದ ಇಲೆಕ್ಟ್ರಿಶನ್ ವೃತ್ತಿಯ ಯುವಕನೊರ್ವ ತಿರುವನಂತಪುರಕ್ಕೆ ಹೋಗಿ ಬಂದಿದ್ದ. ಇತನಿಗೆ ಮಾ.26 ರಂದು ಕೊರೋನಾ ಸೋಂಕು ಲಕ್ಷಣದಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನೋರ್ವ ಮಾ.17 ರಂದು ದುಬೈನಿಂದ ಆಗಮಿಸಿದ್ದ, ದೆಂದೂರುಕಟ್ಟೆಯ 35 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಮಾ. 27 ರಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇರದ ಕಾರಣ ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದರು.
ಊರಿಗೆ ಬಂದು ಸೋಂಕಿನ ಲಕ್ಷಣಗಳಿದ್ದರೂ ಯಾವುದೇ ಮುಂಜಾಗ್ರತೆ ವಹಿಸಿದೆ ತನ್ನ ಮನೆ, ಊರಿನಲ್ಲಿ ತಿರುಗಾಡಿ ನಿರ್ಲಕ್ಷ ತೋರಿದ ಇತನ ಮೇಲೆ ಕೇಸು ದಾಖಲಿಸುವುದಾಗಿ ಉಡುಪಿ ಜಿಲ್ಲಾಧಿಕಾರಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೋಂಕಿತನಿಂದ ವಿಮಾನದಲ್ಲಿದ 37 ಸಹ ಪ್ರಯಾಣಿಕರನ್ನು ಹಾಗೂ ಇಬ್ಬರು ಸೋಂಕಿತರು ನೇರ ಭೇಟಿಯಾದ 36 ಜನರ ಮೇಲೆ ನಿಗಾ ಇರಿಸಲಾಗಿದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.