ಬೈಂದೂರು:ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಬೈಂದೂರು: ಕಂಬದಕೋಣೆಯ ಎಡಮಾವಿನ ಬೊಬ್ಬರ್ಯನ ಹೊಳೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಇಲ್ಲಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿಗಳಾದ ವಂಶಿತ ಶೆಟ್ಟಿ ಮತ್ತು ರೀತೇಶ್ ಶೆಟ್ಟಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇವರೆಗೆ ಪತ್ತೆಯಾಗಿಲ್ಲ.

ಇವರು ನೆರೆಮನೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಪ್ರದ್ವಿತ್ ಶೆಟ್ಟಿ ಮತ್ತು ವಿಜಯೇಂದ್ರ ಶೆಟ್ಟಿ ಜೊತೆ ಈಜಲು ಹೋಗಿದ್ದರು. ನಾಪತ್ತೆಯಾದ ವಿದ್ಯಾರ್ಥಿಗಳ ಪತ್ತೆಗೆ ಅಗ್ನಿ ಶಾಮಕದಳ, ಸ್ಥಳೀಯರು ಕಳೆದು ೫ ತಾಸುಗಳಿಂದ ಪ್ರಯತ್ನ ಪಡುತ್ತಿದ್ದಾರೆ. ಸ್ಥಳಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಆಗಮಿಸಿದ್ದು ಪತ್ತೆ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!