ಬೈಂದೂರು: ಪ್ರತ್ಯೇಕ ಪ್ರಕರಣ ಯುವಕ, ಯುವತಿ ನಾಪತ್ತೆ
ಉಡುಪಿ: ತೆರೆದಾಳದಲ್ಲಿ ಹೋಟೆಲ್ ಕಾರ್ಮಿಕನಾಗಿ ಕೆಲಸಮಾಡುತ್ತಿದ್ದ ವೀರಭದ್ರ
(34) ಎಂಬುವವರು ಕಾಣೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಫೆ. 14 ರಂದು ಬೆಳಗ್ಗೆ ತನ್ನ ತಂಗಿಯ
ಗಂಡನ ಮನೆಯಾದ ಉಳ್ಳೂರಿಗೆ ಹೋಗುವುದಾಗಿ ಹೇಳಿ ಹೋದ ಸುಮಿತ್ರ (19) ಎಂಬುವವರು ಈವರೆಗೂ ಮನೆಗೂ ಬಾರದೇ, ತನ್ನ ತಂಗಿಯ ಹಾಗೂ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ
ಚಹರೆ: 5 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ದೂ.ಸಂಖ್ಯೆ: 08254- 251033, ಬೈಂದೂರು ವೃತ್ತ ಪೊಲೀಸ್ ನಿರೀಕ್ಷಕರು ದೂ. ಸಂಖ್ಯೆ: 08254-251031 ಗೆ ಮಾಹಿತಿ ನೀಡುವಂತೆ
ಬೈಂದೂರು ಪೊಲೀಸ್ ಠಾಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.