ಉದ್ಯಮಿ,ಚಲನಚಿತ್ರ ನಿರ್ಮಾಪಕ ವಿ.ಕೆ.ಮೋಹನ್ ಆತ್ಮಹತ್ಯೆ

ಕುಂದಾಪುರ: (ಉಡುಪಿ ಟೈಮ್ಸ್ ವರದಿ) ಉದ್ಯಮಿ, ಚಲನಚಿತ್ರ ನಿರ್ಮಾಪಕ ವಿ.ಕೆ. ಮೋಹನ್ (60) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಪೀಣ್ಯದ ಹೋಟೆಲ್ ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವಾರು ಚಿತ್ರಗಳಿಗೆ ಬಂಡವಾಳ ಹೂಡಿದ ಮೋಹನ್ ಕುಂದಾಪುರದ ವಕ್ವಾಡಿಯವರು.

ಇತ್ತೀಚೆಗೆ ಮಾನಸಿಕವಾಗಿ ಕುಗ್ಗಿದ್ದ ವಿ‌ಕೆ ನಿನ್ನೆ ತಡ ರಾತ್ರಿ ಬೆಂಗಳೂರಿನಲ್ಲಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ವಿ‌ಕೆ ಮೋಹನ್ ಬಾಲ್ಯದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರಮ ಜೀವಿಯಾಗಿದ್ದ ಮೋಹನ್ ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು, ಬಳಿಕ ಸಿನಿಮಾ ರಂಗಕ್ಕೆ‌ಕಾಲಿಟ್ಟ ವಿ‌ಕೆ ಯಶಸ್ವಿ ಚಲನಚಿತ್ರ ನಿರ್ಮಾಪಕರಾಗಿ ಬೆಳೆದಿದ್ದರು. ರಾಜ್ ಕುಟುಂಬದೊಂದಿಗೆ ಅತ್ಮೀಯ ಸಂಬಂಧ ಇಟ್ಟುಕೊಂಡಿದ್ದರು.

ತನ್ನ‌ಹುಟ್ಟೂರಲ್ಲಿ ತನ್ನದೇ ಅಭಿಮಾನಿಗಳನ್ನು‌ ಹೊಂದಿರುವ ವಿ‌ಕೆ ,ಅಸಹಾಯಕರಿಗೆ ಸಹಾಯ ಹಸ್ತಗಳನ್ನು ಚಾಚುವ ಮೂಲಕ‌ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. 

ಮುಖ್ಯ ಮಂತ್ರಿಗಳೇ ನನಗೆ ನ್ಯಾಯ ಕೊಡಿಸಿ: ಆಡಿಯೋದಲ್ಲಿ ವಿ.ಕೆ. ಮೋಹನ್ ಕೊನೆಯ ಮಾತು ://udupitimes.com/i-am-unfair-to-the-chief-ministers-of-justice-vk-mohans-last-speech-in-audio/


Leave a Reply

Your email address will not be published. Required fields are marked *

error: Content is protected !!