ಚಂದನವನದಲ್ಲಿ ಸವಾರಿ ನಿಲ್ಲಿಸಿದ ಬುಲೆಟ್

ಬೆಂಗಳೂರು – ಕನ್ನಡದ ಪ್ರಖ್ಯಾತ ಹಾಸ್ಯ ನಟ ನಿರ್ದೇಶಕ ಬುಲೆಟ್ ಪ್ರಕಾಶ್ ಅವರು ಅನಾರೋಗ್ಯದ ಕಾರಣದಿಂದ ಸೋಮವಾರದಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಖ್ಯಾತ ನಟರೊಂದಿಗೆ ಸಿನಿಮಾದಲ್ಲಿ ಅಭಿನಯಿಸಿದ ಬುಲೆಟ್. ಹಾಸ್ಯ ನಟರಾಗಿ ಚಂದನವನದಲ್ಲಿ ಪ್ರಖ್ಯಾತರಾಗಿದ್ದರು. ಇದೀಗ ಅವರ ನಿಧನ ಕನ್ನಡ ಚಿತ್ರ ರಂಗಕ್ಕೆ ತುಂಬಾಲಾರದ ನಷ್ಟ ವುಂಟಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲಸುತ್ತಿದ್ದ ಅವರು ಕೆಲವು ದಿನಗಳ ಹಿಂದೆ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

AK47 ಚಿತ್ರದ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟ ಪ್ರಕಾಶ್ ಸುಮಾರು ೩೦೦ ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದ್ದಾರೆ , ತನ್ನ ಹಾಸ್ಯ ನಟನೆಯ ಮೂಲಕ ಚಿತ್ರ ರಸಿಕರ ಮನ ಗೆದ್ದಿದ್ದರು. ಹಲವಾರು ಹಿರಿಯ ನಟರ ಜೊತೆ ಪರದೆ ಹಂಚಿಕೊಂಡ ಬುಲೆಟ್ ಗೆ ಇತ್ತೀಚೆಗಷ್ಟೇ ತೂಕ ಇಳಿಸಿಕೊಳ್ಳುವ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು ಆದರೆ ಆ ಆಪರೇಷನ್ ನಂತರ ಖಾಯಿಲೆಗಳು ಅವರ ಬೆನ್ನು ಹತ್ತಿದ್ದವು.

Leave a Reply

Your email address will not be published. Required fields are marked *

error: Content is protected !!