ಜನಪರ ಹಾಗೂ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಬಜೆಟ್: ಕುಯಿಲಾಡಿ ಸುರೇಶ್
ಉಡುಪಿ : ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ಜನಪರವಾದ ಬಜೆಟ್ ಆಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸೋಲಾರ್ ಚಾಲಿತ ಪಂಪ್ ಸೆಟ್, ಸೋಲಾರ್ ಪವರ್‌ಗ್ರಿಡ್, ಮೂಲಕ ವಿದ್ಯುತ್ ಉತ್ಪಾದನೆ, ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಬರಡು ಭೂಮಿಯಲ್ಲಿ ಸೋಲಾರ್ ಫಲಕಗಳ ಅಳವಡಿಕೆಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಸರಕಾರ ಆದ್ಯತೆ , ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಕೃಷಿ ಉಡಾಣಿಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್‌ಗೆ ೧೫ ಲಕ್ಷ ಕೋಟಿ ಮೀಸಲು, ಹಾಲು ಉತ್ಪಾದನೆ ದ್ವಿಗುಣ ಗೊಳಿಸಲು ಆದ್ಯತೆ ೨೦೨೨-೨೩ ಗೆ ೨೦೦ ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯ ಉದ್ದೇಶದಿಂದ ಕರಾವಳಿ ಮತ್ತು ಒಳನಾಡು ಮೀನುಗಾರಿಕೆ ಬಲಪಡಿಸಲು ಅಗತ್ಯ ಕ್ರಮ, ಜಿಲ್ಲಾ ಸರಕಾರಿ ಆಸ್ಪತ್ರೆಯೊಂದಿಗೆ ಮೆಡಿಕಲ್ ಕಾಲೇಜ್ ವಿಲೀನಕ್ಕೆ ಯೋಜನೆ ಹೀಗೆ ಅನೇಕ ಜನಪರ ಹಾಗೂ ಆರ್ಥಿಕತೆಗೆ ಹೆಚ್ಚು ಒತ್ತುಕೊಟ್ಟು ಮಂಡಿಸಿದ ಬಜೆಟ್ ಇದಾಗಿದ್ದು ಇದಕ್ಕಾಗಿ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.