ಬದನೆ ಕಾಯಿ ಬೋಳುಹುಳಿ
ಮಂಗಳೂರು ಕಡೆಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಮಾಡುವ ಈ ಸಾಂಬಾರನ್ನು ದಿಡೀರ್ ಆಗಿ ತಯಾರಿಸಬಹುದು,
ಬೇಕಾಗುವ ಸಾಮಗ್ರಿ–
ತೊಗರಿಬೇಳೆ– 1 ಕಪ್
ಬದನೇಕಾಯಿ – 3 ದೊಡ್ಡ ಗಾತ್ರದ್ದ್ದು
ಟೊಮೊಟೊ – 2 ದೊಡ್ಡ ಗಾತ್ರದ್ದು
ಹಸಿಮೆಣಸು – 4 -5
ಹುಣಸೆ ಹಣ್ಣು – 1 ನೆಲ್ಲಿಕಾಯಿ ಗಾತ್ರದಷ್ಟು
ತೆಂಗಿನೆಣ್ಣೆ –೪ ಚಮಚ
ಒಗ್ಗರಣೆ – ಉದ್ದಿನಕಾಳು , ಸಾಸಿವೆ ,ಕರಿಬೇವು
ಇಂಗು
ಕೊತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲಿಗೆ ಕುಕ್ಕರಿನಲ್ಲಿ ಬೆಳೆಯನ್ನ ಅರಿಶಿನ ಸೇರಿಸಿ ಬೇಯಿಸಿಕೊಳ್ಳಿ , ಬದನೆಕಾಯಿಯನ್ನ ಕತ್ತರಿಸಿ ನೀರಿಗೆ ಹಾಕಿ ಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನ ಹಾಕಿಕೊಳ್ಳಿ ಅದು ಕಾದ ಮೇಲೆ ಅದಕ್ಕೆ ಉದ್ದಿನ ಕಾಳು ಹಾಗು ಸಾಸಿವೆ ಸೇರಿಸಿಕೊಳ್ಳಿ ಸಾಸಿವೆ ಸಿಡಿದ ನಂತರ ಕರಿಬೇವು ಸೊಪ್ಪು ಹಾಕಿಕೊಳ್ಳಿ ಅದಕ್ಕೆ ಸ್ವಲ್ಪ ಟೊಮೊಟೊ ಸಣ್ಣಕ್ಕೆ ಕತ್ತರಿಸಿ ಕೊಂಡು ಅದನ್ನ ಬಾಣಲೆಗೆ ಹಾಕಿ ಹುರಿದುಕೊಳ್ಳಿ ನಂತರ ಅದಕ್ಕೆ ಸ್ವಲ್ಪ ಹುಣಸೆ ಹಣ್ಣಿನ ರಸ ವನ್ನ ಹಾಕಿ 1 ನಿಮಿಷ ಕೈಯಾಡಿಸಿ. ನಂತರ ನೀರಿನಲ್ಲಿ ಹಾಕಿದ ಬದನೆಕಾಯಿಯನ್ನ ನೀರನ್ನು ಬಸಿದು ಬಾಣಲೆಗೆ ಹಾಕಿ ಸ್ವಲ್ಪ ಬಾಡಿಸಿ ನಂತರ ಈ ಮಿಶ್ರಣ ಕ್ಕೆ ೨ ಲೋಟದಷ್ಟು ನೀರು ಸೇರಿಸಿ 1 ಚಿಟಿಕೆಯಷ್ಟು ಇಂಗು, ಹಸಿಮೆಣಸು, ಬೆಲ್ಲ ,ಉಪ್ಪು ರುಚಿಗೆ ತಕಷ್ಟು ಹಾಕಿ ಮುಚ್ಚಿ ಇಡೀ 10 ನಿಮಿಷದ ನಂತರ ಗ್ಯಾಸ್ ನಿಂದ ಇದನ್ನ ಇಳಿಸಿ ಕೊತ್ತಂಬರಿ ಸೊಪ್ಪನ್ನ ಚಿಕ್ಕದಾಗಿ ಕತ್ತರಿಸಿ ಹಾಕಿ ಮುಚ್ಚಿ,, ಬಿಸಿ ಬಿಸಿ ಬೆಳ್ತಿಗೆ ಅನ್ನದ ಜೊತೆ ಊಟಮಾಡಿದ್ರೆ ಸೂಪರ್…..
ಶ್ವೇತಾ ಉಲ್ಲಾಸ್ ಹೊಳ್ಳ
ಮೊಂಡಕಾಪು