ಹಸೆಮಣೆಯೇರಬೇಕಾದ ವಧು ನಾಪತ್ತೆ……

ಮಂಗಳೂರು: ಮದುವೆ ಮದರಂಗಿ ಶಾಸ್ತ್ರ ಮುಗಿಸಿಕೊಂಡು ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಮದುಮಗಳು ವಿವಾ​ಹದ ದಿನವೇ ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ಮಂಗಳವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆ ಎಂಬಲ್ಲಿ ನಡೆದಿದೆ.

ಪುಲ್ಲಾಜೆ ನಿವಾಸಿ ಲಕ್ಷ್ಮಣ ನಾಯ್ಕ ಎಂಬವರ ಪುತ್ರಿ ನವ್ಯಾ ನಾಪತ್ತೆಯಾದ ಯುವತಿ. ನವ್ಯಾ ಅವರ ವಿವಾಹ ಫೆ.26ರಂದು ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಪರ್ಪುಂಜದ ಶಿವಕೃಪಾ ಹಾಲ್‌ನಲ್ಲಿ ನಿಗ​ದಿ​ಯಾ​ಗಿತ್ತು.

ಮದುವೆಯ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ವಧುವಿನ ಮನೆಯಲ್ಲಿ ಮದುರಂಗಿ ಶಾಸ್ತ್ರ ಕಾರ್ಯಕ್ರಮ ನಡೆದಿತ್ತು. ಆದರೆ ಬೆಳಗ್ಗೆ ಸುಮಾರು 5 ಗಂಟೆಯ ವೇಳೆಗೆ ವಧು ನಾಪತ್ತೆಯಾಗಿರುವುದು ಮನೆ ಮಂದಿಗೆ ತಿಳಿದು ಬಂದಿತ್ತು.

ಈ ಬಗ್ಗೆ ನವ್ಯಾ ಅವರ ತಂದೆ ಲಕ್ಷ್ಮಣ ನಾಯ್ಕ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!