ಡಿಜೆ ಸಂಗೀತ ಕೇಳಿದ ಮದುಮಗ ಕುಸಿದು ಬಿದ್ದು ಸಾವು!
ಹೈದರಾಬಾದ್: ಮದುವೆ ಸಂಭ್ರಮಕ್ಕೆಂದು ಹಾಕಿದ್ದ ಡಿಜೆ ಮ್ಯೂಸಿಕ್ ಯುವಕನ ಜೀವವನ್ನೇ ಬಲಿ ಪಡೆದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದ ‘ಬರಾತ್’ ನಲ್ಲಿ ಡಿಜೆ ಸಂಗೀತ ಹೈಪಿಚ್ ನಿಂದಾಗಿ ಮದುಮಗಹೃದಯ ಸ್ಥಂಭನಗೊಂಡು ಪ್ರಾಣ ಬಿಟ್ಟಿದ್ದಾನೆ. ಅದೂ ಕೂಡ ಮದುಮಗನೇ ಹೀಗೆ ಸಾವನ್ನಪ್ಪಿರುವುದು ಎರಡೂ ಕುಟುಂಬದವರಿಗೆ ತೀವ್ರ ಆಘಾತ ತಂದಿದೆ.
ಮದುವೆಯಾದ ಕೆಲವೇ ಗಂಟೆಗಳ ನಂತರ ಎಂ.ಗಣೇಶ್ ಹೃದಯ ಸ್ಥಂಭನದಿಂದ ಕುಸಿದು ಬಿದ್ದಿದ್ದಾನೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹೃದಯ ಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಹೈದರಾಬಾದ್‌ನಿಂದ 196 ಕಿ.ಮೀ ದೂರದಲ್ಲಿರುವ ಬೋಧನ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಮದುವೆ ಸಮಾರಂಭದ ಮರುದಿನ ಗಣೇಶ್ ಅವರ ಕುಟುಂಬ ಸದಸ್ಯರು ‘ಬರಾತ್’ ಕಾರ್ಯಕ್ರಮಕ್ಕೆ ತೊಡಗಿದ್ದರು.ಆ ವೇಳೆ ಡಿಜೆ ಸದ್ದು ಹೆಚ್ಚಿನ ಡೆಸಿಬೆಲ್ ನಿಂದ ಕೂಡಿತ್ತು. ಇದರಿಂದ ಮದುಮಗ ಅಚಾನಕ್ ಆಗಿ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದನು ಎಂದು ಕುಟುಂಬ ಮೂಲದವರು ಮಾಹಿತಿ ನೀಡಿದ್ದಾರೆ.