ಬ್ರಹ್ಮಾವರ: ಕೊಟ್ಟ ಸಾಲ ರೂ.2500 ಹಿಂದಿರುಗಿಸದಕ್ಕೆ ಬಾವಿಗೆ ತಳ್ಳಿ ಕೊಲೆ

ಬ್ರಹ್ಮಾವರ: ಕೊಟ್ಟ ಸಾಲ ಹಿಂದಿರುಗಿಸಿ ಎಂದು ಕೇಳಲು ಹೋದಾತ ಸ್ನೇಹಿತನನ್ನು ಬಾವಿಗೆ ದೂಡಿ ಕೊಲೆ ಮಾಡಿದ ಘಟನೆ ಬ್ರಹ್ಮಾವರ ಹೆಗ್ಗುಂಜೆ ಬಳಿ ನಡೆದಿದೆ.


ಹೆಗ್ಗುಂಜೆಯ ಮನೋಜ್(21) ಮನೆಗೆ ಶುಕ್ರವಾರ ಬೆಳಿಗ್ಗೆ ಸಾಲ ನೀಡಿದ ಹಣ ಹಿಂದಕ್ಕೆ ಕೇಳಲು ಸ್ನೇಹಿತ ಸುನಿಲ್ ಶೆಟ್ಟಿ (22) ಹೋಗಿದ್ದ.
ಆಗ ಮನೋಜ್ ನಿದ್ಧೆಯಿಂದ ಎದ್ದಿರಲಿಲ್ಲ , ಸುನಿಲ್ ಮನೆಗೆ ಹೋದವನೇ ಏರು ಧ್ವನಿಯಲ್ಲಿ ಮನೋಜ್ ನನಗೆ ರೂಪಾಯಿ 2500 ಹಣ ಕೊಡಲು ಇದೆ, ಹಣ ಪಡೆದು ಕೊಂಡು ಎರಡು ವರ್ಷ ಆಯಿತು, ಫೋನ್ ಮಾಡಿದರೆ ತೆಗೆಯುದಿಲ್ಲ ಉಡುಪಿಯಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲ ಎಂದು ಗಲಾಟೆ ಮಾಡಿದ್ದ.

ಆಗ ಮಲಗಿದ್ದಲ್ಲಿಂದ ಮನೋಜ್ ಬಂದು ಆತನ ಸ್ನೇಹಿತ ರಾಜೇಶ್ ಗೆ ಫೋನ್ ಮಾಡಿ ಆರೋಪಿಯ ಬಳಿ ಮಂದಾರ್ತಿ ಬ್ಯಾಂಕ್‌ಗೆ ಹೋಗುವ ಹಣ ತೆಗೆದು ಕೊಡುತ್ತೇನೆ ಎಂದು ಹೇಳಿದ. ಸುನಿಲ್ ನನಗೆ ಈಗಲೇ ಹಣ ಬೇಕೆಂದು ಜೋರಾಗಿ ಹೇಳಿದ್ದ. ಆಗ ಹಲ್ಲುಜ್ಜಿ ಬರುತ್ತೇನೆಂದು ಬಾವಿಯ ಕಡೆ ಹೋದ ಮನೋಜ್‌ನ ಜೊತೆ ಹೋದ ಸುನಿಲ್ ಸ್ನೇಹಿತ ಮನೋಜ್‌ನನ್ನು ಬಾವಿಗೆ ದೂಡಿ ಪರಾರಿಯಾಗಿದ್ದಾನೆ.

ನಂತರ ಹೆದರಿ ಸುನಿಲ್, ಮನೋಜ್ ತಾಯಿ ರಾಧಾ ಬಾಯಿ ಅವರಲ್ಲಿ ನಿಮ್ಮ ಮಗ ಬಾವಿಗೆ ಬಿದ್ದ ಎಂದು ಹೇಳಿ ಓಡಿ ಹೋಗಿದ್ದು , ಆತನೇ ನನ್ನ ಮಗನನ್ನು ಬಾವಿಗೆ ದೂಡಿ ಕೊಲೆ ಮಾಡಿದ್ದಾಗಿ ರಾಧಾ ಬಾಯಿ ದೂರು ನೀಡಿದ್ದಾರೆ. ಆರೋಪಿ ಪತ್ತೆಗೆ ಬ್ರಹ್ಮಾವರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!