ಬಾರ್ಕೂರು: ದೇವಸ್ಥಾನದ ಮೊಕ್ತೇಸರ ಸೇರಿ ಹಲವರ ವಿರುದ್ಧ ಪ್ರಕರಣ

ಬ್ರಹ್ಮಾವರ: ಕೋವಿಡ್-19 ಹರಡದಂತೆ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 144(3) ಅಡಿ ನಿರ್ಬಂಧ ವಿಧಿಸಿದ್ದರೂ, ಶುಕ್ರವಾರ ಬೆಳಗ್ಗೆ ಬ್ರಹ್ಮಾವರ ತಾಲೂಕು ಕಚ್ಚೂರು ಗ್ರಾಮದ ಬಾರ್ಕೂರು ಶ್ರೀಕಾಳಿಕಾಂಬ ದೇವಸ್ಥಾನ ದಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಶ್ರೀಧರ ಆಚಾರ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆಡಳಿತ ಮೊಕ್ತೇಸರರಲ್ಲದೇ, ದೇವಸ್ಥಾನ ಮ್ಯಾನೇಜರ್ ಹರೀಶ್ ಆಚಾರ್ಯ, ಸಮಿತಿ ಸದಸ್ಯರಾದ ಚಂದ್ರ ಆಚಾರ್ಯ, ಪ್ರಕಾಶ ಆಚಾರ್ಯ, ಸುಬ್ರಾಯ ಆಚಾರ್ಯ, ಶ್ರೀಕಾಂತ ಹಾಗೂ ಇತರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರು ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಅರಿವಿದ್ದರೂ ನಿರ್ಲಕ್ಷತೆ ವಹಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೇ, ಮಾಸ್ಕ್ ಧರಿಸದೇ, ಸುರಕ್ಷಿತ ಅಂತರ ಕಾಪಾಡದೇ ಬೆಳಗ್ಗೆ 11:30ಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಬ್ರಹ್ಮಾವರ ತಹಶೀಲ್ದಾರರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!