ಬಿಪಿಎಲ್ ಪಡಿತರ ಚೀಟಿ – ಸುಳ್ಳು ಹೇಳಿ ಪಡೆದಿದ್ರೆ ಕಾದಿದೆ ಜೈಲು ಶಿಕ್ಷೆ
ಉಡುಪಿ – ಬಿಪಿಎಲ್ ಪಡಿತರ ಚೀಟಿಯನ್ನು ಸುಳ್ಳು ಹೇಳಿ ಪಡೆದವರಿಗೆ 3 ತಿಂಗಳ ಜೈಲು ಶಿಕ್ಷೆಯ ಆದೇಶ ಕರ್ನಾಟಕ ಸರ್ಕಾರ ಹೊರಡಿಸಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಸರಕಾರದ ಸವಲತ್ತು ದೊರೆಯುವ ಬಿ ಪಿ ಎಲ್ ಪಡಿತರ ಚೀಟಿಯಲ್ಲಿ ವ್ಯತ್ಯಯ ಆಗುತ್ತಿದ್ದದನ್ನ ಮನಗಂಡ ರಾಜ್ಯ ಸರಕಾರ ಈ ಸುತ್ತೋಲೆಯನ್ನ ಹೊರಡಿಸಿದೆ. ಸುತ್ತೋಲೆಯಲ್ಲಿ ಕೆಲವೊಂದು ನಿಯಮಗಳಿದ್ದು ಅದನ್ನ ಮೀರಿದವರಿಗೆ ಜೈಲು ಶಿಕ್ಷೆ ಹಾಗು ದಂಡ ವಿಧಿಸುವುದಾಗಿ ತಹಶೀಲ್ದಾರರಾದ ಪ್ರದೀಪ್ ಕುರ್ಡೇಕರ್ ಎಚ್ಚರಿಸಿದ್ದಾರೆ. ಈಗಾಗಲೇ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 40 ಪಡಿತರ ಚೀಟಿಯನ್ನ ರದ್ದು ಪಡಿಸಲಾಗಿದ್ದು ತನಿಖೆ ನಡೆಯುತ್ತಿದ್ದೆ ಎಂದರು
ಸುತ್ತೋಲೆಯಲ್ಲಿ ಏನಿದೆ ?
- ಪಿಎಚ್ಎಚ್ ಪಡಿತರ ಚೀಟಿ ಹೊಂದಿರುವ ಕುಟುಂಬವು 7 ಎಕರೆಗಿಂತಲೂ ಹೆಚ್ಚಿನ ಭೂಮಿಯನ್ನು ಹೊಂದಿದ್ದರೆ.
- ಸರಕಾರಿ ನೌಕರಿ, ಅರೇ ಸರಕಾರಿ ನೌಕರಿ ಮತ್ತು ಸರಕಾರದಿಂದ ಪಿಂಚಣಿ ಪಡೆಯುತ್ತಿರುವವರು.
- ಸ್ವಂತಕ್ಕಾಗಿ ಕುಟುಂಬದಲ್ಲಿ ನಾಲ್ಕು ಚಕ್ರಗಳು ವಾಹನವನ್ನು ಹೊಂದಿರುವ ಕುಟುಂಬದವರು
- ನಗರ ಪ್ರದೇಶದಲ್ಲಿ 1000 ಚದರ ಅಡಿ ಪಕ್ಕ ಮನೆ ಹೊಂದಿರುವ ಕುಟುಂಬದವರು.
ಈ ಮೇಲೆ ತಿಳಿಸಿದ ಸೌಲಭ್ಯವನ್ನು ಹೊಂದಿರುವ ಕುಟುಂಬಗಳು ಒಂದು ವೇಳೆ ಅದ್ಯತಾ ಕುಟುಂಬ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ, ಕೂಡಲೆ ಅಂದರೆ ದಿನಾಂಕ ಸಪ್ಟೆಂಬರ್ 30 ರ ಒಳಗಾಗಿ ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸಿ, ಅಧ್ಯತೇತರ ಪಡಿತರ ಚೀಟಿಯನ್ನು ಪಡೆಯಬೇಕು. ಒಂದು ವೇಳೆ ಹಿಂದಿರುಗಿಸಿದರೆ ಇದ್ದರೆ ಸರಕಾರ ಇವರ ವಿರುದ್ಧ ಆಹಾರ ಸರಬರಾಜು ಹಾಗೂ ನಾಗರೀಕ ಪೂರೈಕೆಯ ಕಾನೂನು 197 ರ ಅನ್ವಯ ಕನಿಷ್ಟ 3 ತಿಂಗಳ ಜೈಲುವಾಸ ಹಾಗೂ ಇಲ್ಲಿಯವರೆಗೆ ಪಡೆಯಲಾದ ಪಡಿತರ
ಆಹಾರ ಧಾನ್ಯ ಪ್ರಮಾಣ ಪ್ರತಿ ಕೆಜಿಗೆ ರೂ. 38-00 ರಂತೆ ವಸೂಲಿ ಮಾಡಲಾಗುವುದು ಎಂಬುದಾಗಿ ಉಲ್ಲೀಖಿಸಿದೆ