ಮುಳುಗಡೆ ಹಂತದಲ್ಲಿದ್ದ ಬೋಟ್ – ದಡಕ್ಕೆ ಸೇರಿಸಿದ ಕರಾವಳಿ ಕಾವಲು ಪಡೆ,

ಮಂಗಳೂರು: ಕಾರವಾರ ಬಂದರಿನ ಬಳಿ ಸಮುದ್ರದಲ್ಲಿ‌ ಎಂಜಿನ್ ವೈಫಲ್ಯದಿಂದಾಗಿ‌ ಮುಳುಗುವ‌ ಹಂತದಲ್ಲಿದ್ದ ಮೀನುಗಾರಿಕೆ‌ ಬೋಟ್ ಅನ್ನು ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ದಡ ಸೇರಿಸಿದೆ.

ಶ್ರೀದುರ್ಗಾ ಹೆಸರಿನ ಬೋಟ್ ಮುಳುಗಡೆ ಆಗುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಕಾರವಾರ ಮೀನುಗಾರಿಕೆ ಇಲಾಖೆಗೆ ಮಾಹಿತಿ ಬಂದಿತ್ತು. ಅದನ್ನು ಕೂಡಲೇ ಕರಾವಳಿ ಕಾವಲು ಪಡೆಗೆ ರವಾನಿಸಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ಕರಾವಳಿ ಕಾವಲು ಪಡೆ, ಬೋಟ್ ಇರುವ ಸ್ಥಳಕ್ಕೆ ತೆರಳಿ, ಅದರಲ್ಲಿದ್ದ 8 ಜನರೊಂದಿಗೆ ಬೋಟ್ ಅನ್ನು ಟೋಯಿಂಗ್ ಮೂಲಕ ಕಾರವಾರ ಬಂದರಿಗೆ ತರಲಾಗಿದೆ.
ಬೋಟ್, ಅದರಲ್ಲಿದ್ದ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಯಾವುದೇ ಹಾನಿ ಆಗಿಲ್ಲ ಎಂದು ಕರಾವಳಿ ಕಾವಲು ಪಡೆ ಕಮಾಂಡೆಂಟ್ ಎಸ್.ಎಸ್. ದಸಿಲ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!