ಹಸಿದ ಉದರಕ್ಕೆ ಆಸರೆಯಾದ ಉಡುಪಿಯ ಪುಣ್ಯವಂತರು

ಉಡುಪಿ: ಕೊರೋನಾ ಎಮರ್ಜೆನ್ಸಿಯಲ್ಲಿ ಕಂಗೆಟ್ಟಿರುವ ಜನತೆಗೆ ಉಡುಪಿಯಲ್ಲಿ ಅನೇಕ ಕಡೆಗಳಿಂದ ಸಾಂತ್ವನದ ಕೈಗಳು ಬರುತ್ತಿದೆ .ಕೊರೋನಾದಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಬರೆ ಲಾಕ್ ಡೌನ್, ಇದರಿಂದ ಜನರು ತುತ್ತು ಅನ್ನಕ್ಕೂ ತತ್ವಾರ ಗೊಂಡಿದ್ದಾರೆ. ಇಂಥಹ ಸಮಯದಲ್ಲಿ ಸರಕಾರದ ಯಾವುದೇ ನೆರವನ್ನು ಕಾಯದೆ ಉಡುಪಿ ನಗರ ಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕಕ್ಕುಂಜೆಯ ಸುಮಾರು 350 ಬಡ ಮನೆಗಳಿಗೆ ಉಚಿತ ತರಕಾರಿ ಹಂಚಿದರು .


ಅನ್ನದಾತರಾದ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ : ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಸಂತೆಕಟ್ಟೆ ಕಲ್ಯಾಣಪುರ ಇದರ ವತಿಯಿಂದ ಸಂಘದ 96 ಮಂದಿಗೆ 25kg ಅಕ್ಕಿಯನ್ನು ವಿತರಿಸಲಾಯಿತು. ಅಕ್ಕಿಯನ್ನು ಸದಸ್ಯರಿಗೆ ವಿತರಿಸಿದ ಸಂಘದ ಗೌ. ಅಧ್ಯಕ್ಷ ಶೇಖರ್ ಬೈಕಾಡಿ, ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಆರಕ್ಷಕ ಇಲಾಖೆ, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಕೃತಜ್ಞತೆ ಅರ್ಪಿಸಿದರು.

ಎಲ್ಲಾ ಸದಸ್ಯರು ಸರ್ಕಾರದ ಸೂಚನೆಯನ್ನು ಪಾಲಿಸಿ ತುರ್ತು ಅವಶ್ಯಕತೆ ಹೊರತಾಗಿ ಹೊರಗೆ ಬರಬಾರದಾಗಿ ವಿನಂತಿಸಿದರು. ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ದೇವಾಡಿಗ ಕಾರ್ಯದರ್ಶಿ ಅಝೀಝ್ ಖಜಾಂಜಿ, ದಿನೇಶ್ ಹಾಗೂ ಮಾಜಿ ಅಧ್ಯಕ್ಷರಾದ ರತ್ನಾಕರ್ ನಾಯ್ಕ ಹಾಗೂ ಜಯರಾಂ ಉಪಸ್ಥಿತಿಯಿದ್ದರು. ಸಾಮಾಜಿಕ ಅಂತರವನ್ನು ಕಾಯ್ದು ಸದಸ್ಯರು ಅಕ್ಕಿಯನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!